Toyota: ಕರ್ನಾಟಕದಲ್ಲಿ ತಯಾರಾಗುವ ಈ ಟೊಯೋಟಾ ಕಾರಿಗೆ ಸಕತ್ ಡಿಮ್ಯಾಂಡ್, ದಾಖಲೆಯ ಮಾರಾಟ.

ದಾಖಲೆಯ ಮಾರಾಟ ಕಾಣುತ್ತಿರುವ Toyota ನೂತನ MPV.

Toyota Innova Crysta: ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗೆ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳಿರುವ ವಾಹನದ ಕಡೆ ಜನರು ಹೆಚ್ಚಿನ ಗಮನ ಕೊಡುತ್ತಾರೆ.

ಇದೀಗ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ ಟೊಯೋಟಾ ಹೊಸ ಕಾರು ಒಂದನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ 2023 ರ ಇನೋವಾ ಕ್ರಿಸ್ಟಾ MPV ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.

Toyota Innova Crysta
Image Credit: Jcblarmouringsolutions

Toyota Innova Crysta Engine Capacity
ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2 .4 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 147 .9 bhp ಪವರ್ ಮತ್ತು 343 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.
Toyota Innova Crysta Feature
ಇನೋವಾ ಕ್ರಿಸ್ಟಾ ಕಾರ್ ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಇನೋವಾ ಕ್ರಿಸ್ಟಾ ಕಾರು 7 ಆಸನವನ್ನು ಪಡೆದುಕೊಂಡಿದೆ. ಕ್ರಿಸ್ಟಾ ಕಾರ್ G, GX, VX ಮತ್ತು ZX ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Toyota Innova Crysta price
Image Credit: Cartoq

Toyota Innova Crysta Price
Toyota Innova Crysta ಬೆಲೆ ಎಕ್ಸ್ ಶೂರೋಮ್ಮ್ ಪ್ರಕಾರ 19 .99 ಲಕ್ಷವಾಗಿದೆ. ಈ ಹೊಸ MPV ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group