Innova: 29 Km ರೇಂಜ್ ನ ದೇಶದ ಮೊದಲ ಇನ್ನೋವಾ ಕಾರ್ ಲಾಂಚ್, ಪೆಟ್ರೋಲ್ ಹಾಕುವ ಅಥವಾ ಚಾರ್ಜ್ ಮಾಡುವ ಅಗತ್ಯವಿಲ್ಲ.
ಎಥನಾಲ್ ಮೂಲಕ ಚಲಿಸುವ ಟೊಯೋಟಾ ಇನ್ನೋವಾ.
Toyota Innova FlecFuel: ದೇಶದಲ್ಲಿ ಎಥನಾಲ್ ಚಾಲಿತ (Ethanol Vehicle) ವಾಹನಗಳು ಚಲಾವಣೆಗೆ ಬರುವ ಬಗ್ಗೆ ಈಗಾಗಲೇ ಸುದ್ದಿ ವೈರಲ್ ಆಗಿದೆ. ದೇಶದಲ್ಲಿನ ಮಾಲಿನ್ಯವನ್ನು ತಡೆಗಟ್ಟಿ ಶುದ್ಧ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿ, ಸೋಲಾರ್, ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದೀಗ ವಿಶ್ವದಲ್ಲೇ ಮೊದಲ ಎಥನಾಲ್ ಚಾಲಿತ ಇಂಧನ ಸದ್ಯದಲ್ಲೇ ಅನಾವರಣಗೊಳ್ಳಲಿದೆ.
ಪೆಟ್ರೋಲ್ ಅಥವಾ ಚಾರ್ಜ್ ಮಾಡುವ ಅಗತ್ಯವಿಲ್ಲ
ಟೊಯೊಟಾ ಮೋಟಾರ್ ಇದೀಗ ದೇಶಿಯ ಆಟೋ ಮೊಬೈಲ್ ವಲಯದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿದೆ. ಟೊಯೊಟಾ ಮೋಟಾರ್ ತನ್ನ ಮೊದಲ ಪರ್ಯಾಯ ಇಂಧನವನ್ನು ಅನಾವರಣಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. Flex ಇಂಧನದಿಂದ ಚಲಿಸುವ ಭಾರತದ ಮೊದಲ ಕಾರು ಬಿಡುಗಡೆಗೊಳ್ಳಲಿದೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ಪ್ರಾರಂಭಿಸಿದ್ದು, ಇದು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಮೂಲಕ ಇವಿ ಮೋಡ್ ನಲ್ಲಿ ಚಲಿಸಲಿದೆ.
ಎಥನಾಲ್ ಮೂಲಕ ಚಲಿಸುವ ಟೊಯೋಟಾ ಇನ್ನೋವಾ
ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಈ ಹಿಂದೆ ಹೇಳಿರುವಂತೆ 100 % ಎಥನಾಲ್ ಚಾಲಿತ ವಾಹನವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪರ್ಯಾಯ ಇಂಧನವಾದ ಎಥನಾಲ್ ಮೂಲಕ ಚಲಿಸುವ ‘ಟೊಯೋಟಾ ಇನ್ನೋವಾ’ (Toyota Innova) ಎಂಜಿನ್ ಅನ್ನು ಪರಿಚಯಿಸಲಾಗುತ್ತಿದೆ. ಟೊಯಾಟಾ ಕಂಪನಿಯು ಎಥೆನಾಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಎಥೆನಾಲ್ ಚಾಲಿತ ವಾಹನಗಳು 100 ಪ್ರತಿಶತ ಜೈವಿಕ ಎಥೆನಾಲ್ ನಲ್ಲಿ ಚಲಿಸುತ್ತದೆ ಮತ್ತು ಎಥೆನಾಲ್ ಇಂಧನವು ಪೆಟ್ರೋಲ್ ಗಿಂತ ಅಗ್ಗವಾಗಿದೆ. ಇನ್ನು ಎಲ್ಲ ವಾಹನಗಳು ರೈತರು ತಯಾರಿಸಿದ ಎಥೆನಾಲ್ ನಿಂದ ಚಲಿಸಲು ಪ್ರಾರಂಭಿಸಿದಾಗ 60% ಎಥೆನಾಲ್, 40 % ವಿದ್ಯುತ್ ಬಳಕೆಯಾಗಲಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ 15 ರೂ. ಆಗುತ್ತದೆ ಎಂದು ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಕೃಷಿಯ ತ್ಯಾಜ್ಯದಿಂದ ತಯಾರಾಗಿರುವ ಎಥನಾಲ್ ಗ್ರಾಹಕರಿಗೆ ಬಹಳ ಅಗ್ಗವಾಗಿ ಸಿಗಲಿದೆ.
29 Km ರೇಂಜ್ ನ ದೇಶದ ಮೊದಲ ಇನ್ನೋವಾ ಕಾರ್ ಲಾಂಚ್
ಟೊಯೋಟಾ ಇನ್ನೋವಾದಲ್ಲಿ ಇಂಜಿನ್ ಎಥೆನಾಲ್ ನಲ್ಲಿ ಚಲಿಸುವುದರಿಂದ ಇದು ಹೈಬ್ರಿಡ್ ಕಾರಿಗಿಂತ ಭಿನ್ನವಾಗಿದೆ. ಇದು ಸ್ವಯಂ ಚಾರ್ಜಿಂಗ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರಲಿದ್ದು, ಸ್ವತಃ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಮೂಲಕ ಮಾತ್ರ ಇದು ಇವಿ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 2 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 181 bhp ಪವರ್ ಉತ್ಪಾದಿಸುತ್ತದೆ. ಇದರೊಂದಿಗೆ ಪ್ರತಿ ಲೀಟರ್ ಗೆ 29 ಕಿಲೋಮೀಟರ್ ವರೆಗೆ ಮೈಲೇಜ್ ನೀಡಲಿದೆ.