Land Hopper: ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಥಾರ್, ಸಕತ್ ಲುಕ್ ಜೊತೆಗೆ ದುಬಾರಿ ಬೆಲೆ.

ಈ ಟೊಯೋಟಾ ದುಬಾರಿ ಕಾರಿಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ.

Toyota Land Hopper: ದೇಶದಲ್ಲಿ ವಿವಿಧ ಮಾದರಿಯ ಕಾರ್ ಗಳು ಪರಿಚಯವಾಗುತ್ತಿದೆ. ಗ್ರಾಹಕರಿಗೆ ಯಾವ ಕಾರ್ ಖರೀದಿಸಲಿ ಎನ್ನುವ ಗೊಂದಲ ಉಂಟಾಗುವಷ್ಟು ಕಾರ್ ಗಳ ಕಲೆಕ್ಷನ್ ಅನ್ನು ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ Toyota ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದಿವೆ ಎನ್ನಬಹುದು. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರ್ ಗಳಿಗೆ ಪೈಪೋಟಿ ನೀಡಲು ಟೊಯಾಟಾ ಇದೀಗ ಹೊಸ ಮಾದರಿಯನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಗೆ ಯಾವಾಗ ಲಗ್ಗೆ ಇಡಲಿದೆ ಎನ್ನುವ ಬಗ್ಗೆ ಕಂಪನಿ ಮಾಹಿತಿ ನೀಡಿದೆ.

Toyota Land Hopper
Image Source: Cartoq

ಇನ್ನುಮುಂದೆ ಥಾರ್ ಕಾರಿಗೆ ಬೇಡಿಕೆ ಕಡಿಮೆ ಆಗಲಿದೆ
ಟೊಯಾಟಾ ತನ್ನ ನೂತನ ಮಾದರಿಯನ್ನು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಪವರ್‌ ಟ್ರೇನ್ ಆಯ್ಕೆಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಸದ್ಯ ಮಿನಿ ಲ್ಯಾಂಡ್ ಕ್ರೂಸರ್ ಅನ್ನು Land Hopper ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ. ಟೊಯೊಟಾ ಈ ಮಿನಿ ಲ್ಯಾಂಡ್, ಕ್ರೂಸರ್‌ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

Toyota Land Cruiser Mini ಅನ್ನು ಮುಂದಿನ ವರ್ಷದಲ್ಲಿ ಪರಿಚಯಿಸಲಾಗುತ್ತದೆ. ಈ Toyota Land Cruiser Mini ಕಾಂಪ್ಯಾಕ್ಟ್ ಕ್ರೂಸರ್ ಇವಿ ಕಾನ್ಸೆಪ್ಟ್ ಉತ್ಪಾದನಾ ಆವೃತ್ತಿಯಾಗಿದೆ. ಮುಂಭಾಗದಲ್ಲಿ ರೆಟ್ರೋ ವಿನ್ಯಾಸವನ್ನು ಹೊಂದಿರುವ Hopper ಮಾರುಕಟ್ಟೆಯಲ್ಲಿ ಥಾರ್ ಕಾರ್ ಗಳ ಬೇಡಿಕೆಗೆ ಹೊಡೆತ ನೀಡಲಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ ಈ ಕಾರಿನ ಬೆಲೆ ತುಂಬಾ ದುಬಾರಿಯಾಗಿದ್ದು ಶ್ರೀಮಂತರಿಗೆ ಮಾತ್ರ ಸೀಮಿತ ಎಂದು ಹೇಳಬಹುದು.

Toyota Land Hopper
Image Source: HT Auto

Toyota Land Cruiser Mini
ಮಿನಿ ಲ್ಯಾಂಡ್ ಕ್ರೂಸರ್ ಮಾದರಿಯು ಪ್ರೊಡಕ್ಷನ್-ಸ್ಪೆಕ್ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಹೈಬ್ರಿಡ್ ಅಥವಾ ಪೆಟ್ರೋಲ್ ಮಿಲ್ ಆದ್ಯತೆಯ ಆಯ್ಕೆಯಾಗಿದೆ. ಕೊರೊಲ್ಲಾ ಕ್ರಾಸ್‌ ಗೆ ಹೋಲಿಸಿದರೆ ಲ್ಯಾಂಡ್ ಕ್ರೂಸರ್ ಮಿನಿ ಒಂದೇ ಗಾತ್ರವನ್ನು ಹೊಂದಿರುತ್ತದೆ.

Join Nadunudi News WhatsApp Group

ಇನ್ನು ಲ್ಯಾಂಡ್ ಕ್ರೂಸರ್ ಮಿನಿ, ಕೊರೊಲ್ಲಾ ಕ್ರಾಸ್‌ ನಿಂದ 2.0 ಲೀಟರ್ ಪೆಟ್ರೋಲ್ ಎಂಜಿನ್, RAV4 ನಿಂದ 2.5 ಲೀಟರ್ ಪೆಟ್ರೋಲ್ ಅಥವಾ ಹೈಬ್ರಿಡ್ ಎಂಜಿನ್ ಮತ್ತು ಪ್ರಾಡೊ, ಹೈಲಕ್ಸ್‌ ನಲ್ಲಿ ಕಂಡುಬರುವ 2.8 ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ.

Join Nadunudi News WhatsApp Group