Toyota Ev: 10 ನಿಮಿಷ ಚಾರ್ಜ್ ಮಾಡಿದರೆ 1200 Km ಮೈಲೇಜ್, ಈ ಟೊಯೋಟಾ ಕಾರಿನ ಮುಂದೆ ಟೆಸ್ಲಾ ಕೂಡ ಸೋಲಲಿದೆ.

1200 Km ಮೈಲೇಜ್ ಕೊಡುವ ಈ ಕಾರಿನ ಮುಂದೆ ಟೆಸ್ಲಾ ಕಾರ್ ಕೂಡ ಸೋಲಲಿದೆ.

Toyota New Solid State Battery EV: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುತ್ತಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಮಾದರಿಯ ವಾಹನಗಳಿಗೂ ಠಕ್ಕರ್ ನೀಡುತ್ತಿವೆ ಎನ್ನಬಹುದು. ಸದ್ಯ ಜಪಾನಿನ ಜನಪ್ರಿಯ ವಾಹನ ತಯಾರಕ ಕಂಪನಿಯಾದ Toyota ಇದೀಗ ಎಲೆಕ್ಟ್ರಿಕ್ ವಾಹನಗಳಲ್ಲಿ ಲಭ್ಯವಿರುವ ಬ್ಯಾಟರಿಗಿಂತ ಹೆಚ್ಚಿನ ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಿ ನೂತನ ಮಾದರಿಯ ಕಾರ್ ಅನ್ನು ಪರಿಚಯಿಸಿದೆ.

Toyota New Solid State Battery EV
Image Source: HT auto

Solid State Battery
ಸದ್ಯ ಜಪಾನಿನ ಜನಪ್ರಿಯ ವಾಹನ ತಯಾರಕ ಕಂಪನಿಯಾದ Toyota ಇದೀಗ Solid State Battery ಗಳನ್ನೂ ತಯಾರಿಸುತ್ತಿವೆ ಎನ್ನುವ ಬಗ್ಗೆ ವರದಿಯಾಗಿದೆ. ವಾಹನ ತಯಾರಕ ಟೊಯೋಟಾ ಇತ್ತೀಚೆಗೆ ಈ ಬ್ಯಾಟರಿಗಳ ವೆಚ್ಚ ಮತ್ತು ಗಾತ್ರವನ್ನು ಅರ್ಧದಷ್ಟು ಕಡಿಮೆಗೊಳಿಸಬಹುದಾದ ಪ್ರಗತಿಯನ್ನು ತಲುಪಿದೆ ಎಂದು ಹೇಳಿಕೊಂಡಿದೆ. ಅಂದರೆ ಈ ಬ್ಯಾಟರಿಗಳು ಬಳಕೆಗೆ ಬಂದರೆ ಈಗಿರುವ ಎಲೆಕ್ಟ್ರಿಕ್ ವಾಹನಗಳ ಬೆಲೆ ಶೇ.50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇನ್ನು Solid State Battery ಚಾಲಿತ ವಾಹನಗಳು ಸದ್ಯದಲ್ಲಿ ಮಾರುಕಟ್ಟೆಗೆ ಬರುವುದರ ಸೂಚನೆ ಇಲ್ಲ.

Toyota New Solid State Battery EV
Image Source: HT Auto

ಬರೋಬ್ಬರಿ 1200km ರೇಂಜ್ ನೀಡಲಿದೆ ಈ ಕಾರ್
ಇನ್ನು ಟೊಯೋಟಾ ಈ ಬ್ಯಾಟರಿ ತಂತ್ರಜ್ಞಾನದ ಮುಂದಿನ ಹಂತಕ್ಕಾಗಿ ಘನ ಸ್ಥಿತಿಯ ಬ್ಯಾಟರಿಗಳ ಬೃಹತ್ ಉತ್ಪಾದನೆಯಲ್ಲಿ ಕೆಲಸ ಮಾಡಲು ಜಪಾನಿನ ಪ್ರಮುಖ ತೈಲ ಕಂಪನಿಯಾದ ಐಡೆಮಿಟ್ಸು ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಯಶಸ್ವಿಯಾದರೆ, ಘನ-ಸ್ಥಿತಿಯ ಬ್ಯಾಟರಿಗಳು EV ಗಳ ವ್ಯಾಪ್ತಿಯನ್ನು 1,200 ಕಿ.ಮೀ.ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದುತ್ತವೆ. ಈ ಶಕ್ತಿಶಾಲಿ ಬ್ಯಾಟರಿಯನ್ನು ಕೇವಲ 10 ನಿಮಿಷದಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group