Toyota Rumion: ಬೆಲೆ 13 ಲಕ್ಷ ಮತ್ತು ಮೈಲೇಜ್ 26 Km, ಈ ಟೋಟೋಟಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ.

ಈ ಟೋಟೋಟಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ

Toyota Rumion EMI Details: ಭಾರತೀಯ ಮಾರುಕಟ್ಟೆಯಲ್ಲಿ ಫ್ಯಾಮಿಲಿ ಕಾರ್ ಗಳ ವಿಭಾಗದಲ್ಲಿ Toyota Rumion ಬೆಸ್ಟ್ ಕಾರ್ ಆಗಿ ಗುರುತಿಸಿಕೊಂಡಿದೆ. ಜನರು ಹೆಚ್ಚಾಗಿ ಹೆಚ್ಚು ಆಸನಗಳಿರುವ ಕಾರ್ ಅನ್ನು ಖರೀದಿಸಲು ಬಯಸುತ್ತಾರೆ. ಹೆಚ್ಚು ಆಸನಗಳಿದ್ದರೆ ಕುಟುಂಬದ ಪ್ರಯಾಣಕ್ಕೆ ಕಾರ್ ಬೆಸ್ಟ್ ಆಗಿರುತ್ತದೆ.

ಸದ್ಯ ಮಾರುಕಟ್ಟೆಯಲ್ಲಂತೂ 7 ಆಸನಗಳ (7 Seater Car ) ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ. ಸದ್ಯ Toyota ಕಂಪನಿಯು 7 ಆಸನಗಳ ವಿಭಾಗದಲ್ಲಿ ತನ್ನಾ Rumion ಮಾದರಿಯನ್ನು ಪರಿಚಯಿಸಿದೆ. ಕಂಪನಿಯು ಈ ಜನಪ್ರಿಯ ಮಾದರಿಯ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಕೂಡ ನೀಡಿದೆ. ನೀವು ಅತಿ ಕಡಿಮೆ EMI ಪಾವತಿಯೊಂದಿಗೆ ಈ Rumion ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Toyota Rumion EMI Details
Image Credit: Cartrade

ಬೆಲೆ 13 ಲಕ್ಷ ಮತ್ತು ಮೈಲೇಜ್ 26 Km
ಟೊಯೋಟಾ ರೂಮಿಯಾನ್‌ ಕಾರಿನಲ್ಲಿ ಉತ್ತಮ ನೋಟ ಮತ್ತು ಸೌಕರ್ಯಗಳ ಜೊತೆಗೆ ಆಕರ್ಷಕವಾದ ವಿನ್ಯಾಸವನ್ನು ನೋಡುತ್ತೀರಿ. ಸ್ಪೋರ್ಟಿ ವಿನ್ಯಾಸ ಹೊಂದಿರುವ ಈ ಕಾರ್ 7-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, 6-ಸ್ಪೀಕರ್ ಆಡಿಯೋ ಸಿಸ್ಟಮ್, ಕನೆಕ್ಟೆಡ್ ಕಾರ್ ಗಳು ಸೇರಿದಂತೆ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಡ್ಯುಯಲ್ ಏರ್‌ ಬ್ಯಾಗ್‌ ಗಳ ಜೊತೆಗೆ ಸ್ವಯಂಚಾಲಿತ ಹೆಡ್‌ ಲ್ಯಾಂಪ್‌ ಗಳು, ಕ್ರೂಸ್ ಕಂಟ್ರೋಲ್, ಕರ್ಟನ್ ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್‌ ಗಳಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಟೊಯೊಟಾ ರೂಮಿಯಾನ್ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 103 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ Engine ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಲಭ್ಯವಿದೆ. ಟೊಯೋಟಾ ರೂಮಿಯಾನ್‌ ಪೆಟ್ರೋಲ್ ರೂಪಾಂತರದಲ್ಲಿ, ಪ್ರತಿ ಕಿಲೋಮೀಟರ್ ಗೆ 20.51 km ಮೈಲೇಜ್ ನೀಡಿದರೆ, CNG ರೂಪಾಂತರದಲ್ಲಿ 26.11 km/kg ವರೆಗೆ ಮೈಲೇಜ್ ಅನ್ನು ನೀಡುತ್ತದೆ.

Toyota Rumion Price In India
Image Credit: Cartrade

ಈ ಟೋಟೋಟಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ
ಇನ್ನು ಟೊಯೊಟಾ ರುಮಿಯಾನ್ ಬೆಲೆಯ ಬಗ್ಗೆ ಹೇಳುವುದಾದರೆ, ಬೆಂಗಳೂರಿನಲ್ಲಿ ಟೊಯೊಟಾ ರೂಮಿಯಾನ್ ಎಂಪಿವಿಯ ಪೆಟ್ರೋಲ್ ಚಾಲಿತ ರೂಪಾಂತರಗಳು ‘ಎಸ್’ ರೂ.13.03 ಲಕ್ಷ, ‘ಜಿ’ ರೂ.14.46 ಲಕ್ಷ, ‘ಎಸ್‌ಎಟಿ’ ರೂ.14.88 ಲಕ್ಷ, ‘ವಿ’ ರೂ.15.36 ಲಕ್ಷ, ‘ಜಿ ಎಟಿ’ ರೂ. 16.19 ಲಕ್ಷ, ‘ವಿಟಿ’ ರೂ. 17.09 ಲಕ್ಷ ಮತ್ತು ‘ಎಸ್’ ಸಿಎನ್‌ಜಿ ಮಾದರಿಯು ರೂ. 14.20 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದೆ. ನೀವು ಈ ಕಾರನ್ನು ರೂ. 5 ಲಕ್ಷದ ಮುಂಗಡ ಪಾವತಿಯೊಂದಿಗೆ ಖರೀದಿಸಿದರೆ ನೀವು 5 ವರ್ಷಗಳ ಅವಧಿಗೆ 9.8% ಬಡ್ಡಿದರದಲ್ಲಿ ರೂ.16,974 ರ ಮಾಸಿಕ EMI ಅನ್ನು ಪಾವತಿಸಬೇಕಾಗುತ್ತದೆ. ನೀವು ಈ ಆಕರ್ಷಕ ಹಣಕಾಸು ಯೋಜನೆಯನ್ನು ಬಳಸಿಕೊಂಡು ರೂಮಿಯನ್ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Toyota Rumion Features
Image Credit: Cartrade

Join Nadunudi News WhatsApp Group