Toyota: ಕೇವಲ 11 ಸಾವಿರಕ್ಕೆ ಬುಕ್ ಮಾಡಿ ಟೊಯೋಟಾ ಹೊಸ 7 ಸೀಟರ್ ಕಾರ್, 27 Km ಮೈಲೇಜ್.

ಈ ಟೊಯೋಟಾ ಕಾರಿನ ಮುಂದೆ ಎರ್ಟಿಗಾ ಕಾರಿಗೆ ಬೇಡಿಕೆ ಕಡಿಮೆ ಆಗಿದೆ.

Toyota MUV: ಮಾರುಕಟ್ಟೆಯಲ್ಲಿ ಇದೀಗ ಟೊಯೋಟಾದ (Toyota) ಬಹುನಿರೀಕ್ಷಿತ ಎಂಪಿವಿ ಸದ್ಯದಲ್ಲೇ ಪ್ರವೇಶಿಸಲಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಮಾರುತಿ ಸುಜುಕಿ ಕಂಪನಿಗಳ ಪಾಲುದಾರಿಕೆಯ ಭಾಗವಾದ ಮತ್ತೊಂದು ಉತ್ಪನ್ನ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಮಾರುತಿ ಸುಜುಕಿಯ ಜನಪ್ರಿಯ ಎರ್ಟಿಗಾದ ರಿಬ್ಯಾಡ್ಜ್ ಆವೃತ್ತಿ ಇದಾಗಿದ್ದು ಆರು ರೂಪಾಂತರದಲ್ಲಿ ಮಾರುಕಟ್ಟೆಗೆ ಬರಲಿದೆ. ಇದೀಗ ನೂತನ ಟೊಯೋಟಾ ಎಂಪಿವಿ ಬೆಲೆ ಬಹಿರಂಗವಾಗಿದ್ದು ಈ ಕಾರ್ ನ ಮೇಲೆ ಗ್ರಾಹಕರು ಹೆಚ್ಚಿನ ಕ್ರೇಜ್ ತೋರಿಸುತ್ತಿದ್ದಾರೆ.

Demand for Ertiga is less than Toyota MUV
Image Credit: spinny

ಟೊಯೋಟಾ ರೂಮಿಯಾನ್ (Toyota Rumion) 
ಮಾರುಕಟ್ಟೆಯಲ್ಲಿ ಇದೀಗ ಟೊಯೋಟಾ ಕಂಪನಿಯ ಟೊಯೋಟಾ ರೂಮಿಯಾನ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 2023 ರಲ್ಲಿಯೇ ಈ ಟೊಯೋಟಾ ರೂಮಿಯಾನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಟೊಯೋಟಾ ರೂಮಿಯಾನ್ ಹೊಸ ತಂತ್ರಜ್ಞಾನಗಳೊಂದಿಗೆ ಮರು ವಿನ್ಯಾಸಗೊಳಿಸಲಾದ ಮಿಶ್ರಲೋಹದ ಚಕ್ರ, ಸಂಪೂರ್ಣ ಕಪ್ಪು ಸಜ್ಜು ಮತ್ತು ಟೊಯೋಟಾ ಬ್ಯಾಡ್ಜಿಂಗ್ ಅನ್ನು ಪಡೆಯಲಿದೆ. ಮಾರುತಿ ಎರ್ಟಿಗಾ ಕಾರ್ ಗಳಿಗೆ ನೂತನ ರೂಮಿಯನ್ ಮಾದರಿ ಬಾರಿ ಪೈಪೋಟಿ ನೀಡಲಿದೆ.

ಟೊಯೋಟಾ ರೂಮಿಯಾನ್ ಎಂಜಿನ್ ಸಾಮರ್ಥ್ಯ
ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Demand for Ertiga is less than Toyota Rumion
Image Credit: hindustantimes

ಟೊಯೋಟಾ ರೂಮಿಯಾನ್ ಮೈಲೇಜ್
ಟೊಯೋಟಾ ರೂಮಿಯಾನ್ ಕಾರ್  ನಲ್ಲಿ 8 ಆಸನಗಳನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ. ಇನ್ನು ಈ MPV ನಲ್ಲಿ ಜೈವಿಕ ಇಂಧನ CNG ರೂಪಾಂತರವನ್ನು ಅಳವಡಿಸಿದೆ. ಟೊಯೋಟಾ ರೂಮಿಯಾನ್ CNG ರೂಪಾಂತರವು ಪ್ರತಿ ಕೆಜಿಗೆ 27 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

ಟೊಯೋಟಾ ರೂಮಿಯಾನ್ ಕಾರ್ ನ ಬೆಲೆ
ಕಂಪನಿಯು ಟೊಯೋಟಾ ರೂಮಿಯಾನ್ ಕಾರ್ ನಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 8 ಲಕ್ಷ ಆಗಿದೆ. ಈ ಕಾರನ್ನ ಕೇವಲ 11,000 ಪಾವತಿಸುವ ಮೂಲಕ ಸೆಪ್ಟೆಂಬರ್ 8 ರಿಂದ ಕಾರ್ ಬುಕಿಂಗ್  ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group