Toyota Mileage Car: ಬೈಕಿನಂತೆ ಮೈಲೇಜ್ ಕೊಡುವ ಈ ಟೊಯೋಟಾ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, 25000 ಬುಕಿಂಗ್.

ಪ್ರತಿ ಕೆಜಿ CNG ಗೆ 26 ಕಿಲೋಮೀಟರ್ ಮೈಲೇಜ್ ನೀಡುವ Toyota ಕಾರ್.

Toyota Rumion Price and Mileage: ಮಾರುಕಟ್ಟೆಯಲ್ಲಿ ಇದೀಗ TOYOTA ಕಂಪನಿಯ Toyota Rumion ಕಾರ್ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 2023 ರಲ್ಲಿಯೇ ಈ ಟೊಯೋಟಾ ರೂಮಿಯಾನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಟೊಯೋಟಾ ರೂಮಿಯಾನ್ ಹೊಸ ತಂತ್ರಜ್ಞಾನಗಳೊಂದಿಗೆ ಮರು ವಿನ್ಯಾಸಗೊಳಿಸಲಾದ ಮಿಶ್ರಲೋಹದ ಚಕ್ರ, ಸಂಪೂರ್ಣ ಕಪ್ಪು ಸಜ್ಜು ಮತ್ತು ಟೊಯೋಟಾ ಬ್ಯಾಡ್ಜಿಂಗ್ ಅನ್ನು ಪಡೆಯಲಿದೆ. ಮಾರುತಿ ಎರ್ಟಿಗಾ ಕಾರ್ ಗಳಿಗೆ ನೂತನ ರೂಮಿಯನ್ ಮಾದರಿ ಬಾರಿ ಪೈಪೋಟಿ ನೀಡಲಿದೆ. ಬೈಕಿನಂತೆ ಮೈಲೇಜ್ ಕೊಡುವ ಈ ಟೊಯೋಟಾ ಕಾರಿಗೆ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚಿದೆ.

Toyota Rumion Price
Image Credit: Zig Wheels

Toyota Rumion
ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೋಟಾ ರೂಮಿಯಾನ್ ಕಾರ್  ನಲ್ಲಿ 8 ಆಸನಗಳನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ. ಇನ್ನು ಈ MPV ನಲ್ಲಿ ಜೈವಿಕ ಇಂಧನ CNG ರೂಪಾಂತರವನ್ನು ಅಳವಡಿಸಿದೆ. ಟೊಯೋಟಾ ರೂಮಿಯಾನ್ CNG ರೂಪಾಂತರವು ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ.

Toyota Rumion Mileage
Image Credit: Amarujala

ಬೈಕಿನಂತೆ ಮೈಲೇಜ್ ಕೊಡುವ ಈ ಟೊಯೋಟಾ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
ಕಂಪನಿಯು ಟೊಯೋಟಾ ರೂಮಿಯಾನ್ ಕಾರ್ ನಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 8 ಲಕ್ಷ ಆಗಿದೆ.

Join Nadunudi News WhatsApp Group

ಇನ್ನು Infotainment unit, wireless AppleCarPlay and Android Auto, 6 airbags, cruise control, ISOFIX child seat anchoring points, automatic climate control ಸೇರಿದಂತೆ ಹತ್ತು ಹಲವು ವಿಭಿನ್ನ ಫೀಚರ್ ಇರುವ Toyota Rumion ಕಾರ್ ಅನ್ನು ಅತಿ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಕೂಡ ಖರೀದಿಸಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ Toyota Rumion ಬಿಡುಗಡೆಗೊಂಡು ಕೆಲವೇ ದಿನಗಳಲ್ಲಿ 25000 ಹೆಚ್ಚಿನ ಬುಕಿಂಗ್ ಕಂಡುಕೊಂಡಿದೆ.

Join Nadunudi News WhatsApp Group