Toyota 2024: ಈ ಟೊಯೋಟಾ ಕಾರ್ ಖರೀದಿಸಲು ಮುಗಿಬಿದ್ದ ಜನರು, ಕಡಿಮೆ ಬೆಲೆ ಮತ್ತು 26 Km ಮೈಲೇಜ್

ಕಡಿಮೆ ಬೆಲೆಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ ಟೊಯೋಟದ ಈ ನೂತನ ಮಾದರಿ.

Toyota Rumion Price And Feature: ಭಾರತೀಯ ಆಟೋ ವಲಯದಲ್ಲಿ ಇದೀಗ 7 Seater MPV ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಮಾರುತಿ, ಟಾಟಾ, ರೆನಾಲ್ಟ್, ಮಹಿಂದ್ರಾ, ಟೊಯೋಟಾ ಸೇರಿದಂತೆ ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ 7 ಸೆಟರ್ MPV ಗಳನ್ನೂ ಪರಿಚಯಿಸುತ್ತ ಒಂದಕ್ಕೊಂದು ಪೈಪೋಟಿ ನೀಡುತ್ತಿದೆ.

ಇನ್ನು ಮಾರುಕಟ್ಟೆಯಲ್ಲಿ ಟೊಯೋಟಾ 7 ಸೀಟರ್ ಕಾರ್ ನ ವಿಭಾಗದಲ್ಲಿ ಇದೀಗ Toyota Rumion ಆಯ್ಕೆಯನ್ನು ಕಂಪನಿಯು ನೀಡಿದೆ. ಟೊಯೋಟದ ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ ಎನ್ನಬಹುದು. Toyota Rumion ಮಾದರಿಯನ್ನು ಖರೀದಿಸಲು ಜನರು ಶೋರೂಮ್ ನ ಮುಂದೆ ಕ್ಯೂ ನಿಂತಿದ್ದಾರೆ ಎನ್ನಬಹುದು.

Toyota Rumion Price And Feature
Image Credit: Pune News

Toyota Rumion ಮಾದರಿಯನ್ನು ಖರೀದಿಸಲು ಶೋರೂಮ್ ಮುಂದೆ ಕ್ಯೂ ನಿಂತ ಜನ
ಮಾರ್ಚ್ 1, 2024 ಗೆ ಅನ್ವಯವಾಗುವಂತೆ, ಟೊಯೊಟಾ ಇಂಡಿಯಾ ತನ್ನ ಅಧಿಕೃತ Website ನಲ್ಲಿ ರುಮಿಯನ್ MPV ಕಾಯುವ ಅವಧಿಯ ವಿವರಗಳನ್ನು ಪ್ರಕಟಿಸಿದೆ. ಜನವರಿ ಮತ್ತು ಫೆಬ್ರವರಿಯಂತೆ, ಹೆಚ್ಚಿನ ಬೇಡಿಕೆಯಿಂದಾಗಿ CNG ರೂಪಾಂತರದ ಬುಕಿಂಗ್ ಅನ್ನು ಈ ತಿಂಗಳೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಟೊಯೊಟಾ ರೂಮಿಯಾನ್ MPV ಪೆಟ್ರೋಲ್ ರೂಪಾಂತರಗಳು ತಲುಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನೀವು ಇಂದು ಈ ಕಾರನ್ನು ಬುಕ್ ಮಾಡಿದರೂ ಸುಮಾರು 7 ರಿಂದ 8 ತಿಂಗಳ ನಂತರ ಅದನ್ನು ತಲುಪಿಸಲಾಗುತ್ತದೆ. Toyota Rumion ಮಾದರಿ ಹೆಚ್ಚಿನ ಬೇಡಿಕೆ ಪಡೆಯುತ್ತಿರುವುದರಿಂದ ಕಾಯುವ ಅವಧಿ ಕೂಡ ಹೆಚ್ಚುತ್ತಿದೆ ಎನ್ನಬಹುದು. Rumion ಮಾದರಿಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಬೇಡಿಕೆ ಇದೆ ಎಂದರೆ ತಪ್ಪಾಗಲಾರದು.

Toyota Rumion Mileage
Image Credit: News 24

26km ಮೈಲೇಜ್, ಕಡಿಮೆ ಬೆಲೆ
ಮಾರುಕಟ್ಟೆಯಲ್ಲಿ ಟೊಯೋಟಾ ಎರಡು ಎಂಜಿನ್ ರೂಪಾಂತರದಲ್ಲಿ Toyota Rumion ಮಾದರಿಯನ್ನು ಬಿಡುಗಡೆ ಮಾಡಿದೆ. ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟೊಯೋಟಾ ರೂಮಿಯಾನ್ ಕಾರ್  ನಲ್ಲಿ ಬಲಿಷ್ಠ ಎಂಜಿನ್ ಅನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ.

Join Nadunudi News WhatsApp Group

ಟೊಯೋಟಾ ರೂಮಿಯಾನ್ CNG ರೂಪಾಂತರವು ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ.ನೀವು ರೂಮಿಯನ್ ಮಾದರಿಯಲ್ಲಿ 7-inch touchscreen infotainment system , Automatic Climate Control , cruise control , 4 airbags , EBD , ABS , ESC , Rare Parking Camera ಸೇರಿದಂತೆ ಇನ್ನು ಹತ್ತಾರು ಫೀಚರ್ ಗಳನ್ನೂ ನೋಡಬಹುದಾಗಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 10.29 ರಿಂದ 13.68 ಲಕ್ಷ ಆಗಿದೆ.

Join Nadunudi News WhatsApp Group