Toyota CNG: ಅಗ್ಗದ ಬೆಲೆಗೆ 27 Km ಮೈಲೇಜ್ ಕೊಡುವ ಟೊಯೋಟಾ ಕಾರ್ ಲಾಂಚ್, ಸಂಕಷ್ಟದಲ್ಲಿ ಕ್ರೇಟಾ ಮತ್ತು ಸ್ವಿಫ್ಟ್.
ಹೊಸ ಮಾದರಿಯ CNG ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದ ಟೊಯೋಟಾ.
Toyota CNG Cars: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಕಂಪನಿಗಳು ಹಲವು ಬಗೆಯ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಹೇಳಬಹುದು. ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನ ಖರೀದಿ ಮಾಡುವುದನ್ನ ನಾವು ಗಮನಿಸಬಹುದಾಗಿದೆ.
ಇನ್ನು ಎಲೆಕ್ಟ್ರಿಕ್ ಕಾರುಗಳ ನಡುವೆ ಜನರು ಹೆಚ್ಚು CNG ಕಾರುಗಳನ್ನ ಕೂಡ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೌದು ಹಲವು ಕಾರು ತಯಾಕರ ಕಂಪನಿಗಳು ಹಲವು ಬಗೆಯ CNG ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಜನರು ಹೆಚ್ಚು ಹೆಚ್ಚು CNG ಕಾರುಗಳನ್ನ ಖರೀದಿ ಮಾಡುತ್ತಿದ್ದಾರೆ.
CNG ಕಾರ್ ಪರಿಚಯಿಸಿದ ಹುಂಡೈ ಮತ್ತು ಸುಸುಕಿ
ಹೌದು ಈಗಾಗಲೇ ಹುಂಡೈ ಮತ್ತು ಸುಜುಕಿ ಕಂಪನಿಗಳು ಸಾಕಷ್ಟು CNG ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ ಎಂದು ಹೇಳಬಹುದು. ಹೌದು ಸ್ವಿಫ್ಟ್, ಆಲ್ಟೊ 800, ಬಲೆನೊ, ಕ್ರೇಟಾ ಸೇರಿದಂತೆ ಹಲವು CNG ಕಾರುಗಳು ಈಗ ಮಾರುಕಟ್ಟೆಯಲ್ಲಿ ಬಹಳ ಮಾರಾಟ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ ಈಗ ಟೊಯೋಟಾ (Toyota) ತನ್ನ ಹೊಸ ಮಾದರಿಯ CNG ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಈ ಕಾರಿನ ಮುಂದೆ ಕ್ರೇಟಾ ಮತ್ತು ಮತ್ತಿ ಸ್ವಿಫ್ಟ್ ಕಾರುಗಳು ತನ್ನ ಮಾರಾಟ ಕಳೆದುಕೊಳ್ಳುವ ಸಂಕಷ್ಟವನ್ನ ಎದುರಿಸುತ್ತಿದೆ.
CNG ಕಾರನ್ನ ಪರಿಚಯಿಸಿದ ಟೊಯೋಟಾ
ಹೌದು ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಆಗಿರುವ ಟೊಯೋಟಾ ತನ್ನ ಹೊಸ ಮಾದರಿಯ CNG ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ. ಟೊಯೋಟಾ ಅರ್ಬನ್ ಕ್ರೂಸರ್ (Toyota Urban Cruiser) ಈಗ CNG ಮಾದರಿಯಲ್ಲಿ ಬಿಡುಗಡೆ ಆಗಿದ್ದು ಈ ಕಾರಿನ ಬೆಲೆ ಮತ್ತು ಮೈಲೇಜ್ ಕಂಡು ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಟೊಯೋಟಾ ಅರ್ಬನ್ ಕ್ರೂಸರ್ CNG ಕಾರಿನ ಬೆಲೆ ಮತ್ತು ಮೈಲೇಜ್
ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಮಾದರಿಯ ಅರ್ಬನ್ ಕ್ರೂಸರ್ ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿರುವ ಟೊಯೋಟಾ ಈಗ CNG ಮಾದರಿಯ ಮೈಲೇಜ್ ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ ಎಂದು ಹೇಳಬಹುದು.
ಇನ್ನು ಈ CNG ಕಾರ್ ಭರ್ಜರಿ 27 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಕಂಪನಿ ತಿಳಿಸಿದೆ. ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ಮಾದರಿಯ ಕಾರುಗಳು ಸುಮಾರು 17 -19 ಕಿಲೋಮೀಟರು ಮೈಲೇಜ್ ಕೊಡುತ್ತಿದ್ದ್ದು ಈಗ CNG ಮಾದರಿಯ ಕಾರುಗಳು ಸುಮಾರು 27 ಕಿಲೋಮೀಟರು ಮೈಲೇಜ್ ಕೊಡುತ್ತದೆ.
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಟೊಯೋಟಾ ಅರ್ಬನ್ ಕ್ರೂಸರ್ CNG ಕಾರಿನ ಆರಂಭಿಕ ಬೆಲೆ 13 ಲಕ್ಷ ರೂಪಾಯಿ ಆಗಿದ್ದು ಟಾಪ್ ಎಂಡ್ ಬೆಲೆ ಸುಮಾರು 15 ಲಕ್ಷ ರೂಪಾಯಿ ಆಗಿರುತ್ತದೆ. ಈ ಕಾರಿನಲ್ಲಿ ಹಲವು ಏರ್ ಬ್ಯಾಗ್ ಮತ್ತು ಸುರಕ್ಷತಾ ಸಲಕರಣೆಗಳು ಇರುವುದು ಇನ್ನಷ್ಟು ಗಮನಾರ್ಹ ಕೂಡ ಆಗಿರುತ್ತದೆ.