Traffic Challan: ಟ್ರಾಫಿಕ್ ಫೈನ್ ಕಟ್ಟುವಾಗ ಈ ತಪ್ಪು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗಿದೆ, ಪೋಲೀಸರ ಎಚ್ಚರಿಕೆ.
ಟ್ರಾಫಿಕ್ ಫೈನ್ ಕಟ್ಟುವ ಸಮಯದಲ್ಲಿ ಈ ತಪ್ಪುಗಳನ್ನ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಖಾಲಿ ಆಗಲಿದೆ.
Traffic Challan New Scam: ದೇಶದಲ್ಲಿ ಇತ್ತೀಚೆಗಂತೂ Traffic ಸಮಸ್ಯೆ ಹೆಚ್ಚುತ್ತಲೇ ಇದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನ ಪಾವತಿಸಬೇಕಾಗುತ್ತದೆ. ಇನ್ನು ದೇಶದಲ್ಲಿನ ಟ್ರಾಫಿಕ್ ಸಮಸ್ಯೆಯ ಜೊತೆಗೆ ವಂಚನೆಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಟ್ರಾಫಿಕ್ ಸಮಸ್ಯೆಯ ನಿಯಂತ್ರಣದ ಜೊತೆಗೆ ಇದೀಗ ಹೆಚ್ಚುತ್ತಿರುವ ವಂಚನೆಯನ್ನು ತಡೆಯುವ ಹೊರೆ ಕೇಂದ್ರ ಸರ್ಕಾರದ್ದಾಗಿದೆ. ವಂಚಕರು ಜನರನ್ನು ಹೊಸ ರೀತಿಯಲ್ಲಿ ವಂಚಿಸಲು ಪ್ರಾರಂಭಿಸಿದ್ದು ದೇಶದಲ್ಲಿ Traffic Challan ಮೂಲಕ ವಂಚನೆ ಇದೀಗ ಬೆಳಕಿಗೆ ಬಂದಿದೆ.
ಟ್ರಾಫಿಕ್ ಚಲನ್ ಮೂಲಕ ಹೆಚ್ಚುತ್ತಿದೆ ವಂಚನೆ
ಇನ್ನು ಇತ್ತೀಚಿಗೆ Toll ಸಂಗ್ರಹಣೆಯಲ್ಲಿ ಕೂಡ ಸಾಕಷ್ಟು ವಿಧಾನಗಳನ್ನ ಬಳಸಲಾಗುತ್ತಿದೆ. ವಾಹನ ಸವಾರರ ಸಮಯ ಉಳಿಸುವ ಸಲುವಾಗಿ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ. ಒಂದಲ್ಲ ಒಂದು ವಿಧಾನದಲ್ಲಿ ವಂಚನೆಯನ್ನು ಮಾಡಲು ವಂಚಕರು ಕಾಯುತ್ತಿರುತ್ತಾರೆ. ಇನ್ನು ಟೋಲ್ ಸಂಗ್ರಹಣೆಯಲ್ಲಿ ಕೂಡ ಇತ್ತೀಚಿಗೆ ವಂಚನೆ ಪ್ರಾರಂಭವಾಗಿದೆ. ನಕಲಿ ಚಲನ್ (Challan Scam) ಅನ್ನು ನೀಡಿ ವಂಚನೆ ನಡೆಸಲಾಗುತ್ತಿದೆ.
ನಕಲಿ ಚಲನ್ ಗಳ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ
ಸರ್ಕಾರಿ ಅಧಿಕಾರಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ನಕಲಿ ಇ-ಚಲನ್ ಯೋಜನೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿವೆ. ಟ್ರಾಫಿಕ್ ಚಲನ್ ಎಚ್ಚರಿಕೆಗಳನ್ನು ನಕಲಿಸುವ ಮೂಲಕ SMS ಮೂಲಕ ವಾಹನ ಮಾಲೀಕರನ್ನು ವಂಚನೆ ಮಾಡಲಾಗುತ್ತಿದೆ.
ಈ ಹಗರಣವನ್ನು ನಡೆಸುವ ಅಪರಾಧಿಗಳು ಇ-ಚಲನ್ ನಂತೆಯೇ SMS ಎಚ್ಚರಿಕೆಗಳನ್ನು ಕಳುಹಿಸಿ ಪಾವತಿ ಮಾಡಲು ಲಿಂಕ್ ಅನ್ನು ಸಹ ನೀಡುತ್ತದೆ. ಸಂದೇಶವನ್ನು ಸ್ವೀಕರಿಸಿದ ನಂತರ ವ್ಯಕ್ತಿಯು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಮೊಬೈಲ್ ಹ್ಯಾಕರ್ ಗಳ ವಶಕ್ಕೆ ಬರುತ್ತದೆ. ಇದರಿಂದಾಗಿ ಹ್ಯಾಕರ್ ಗಳು ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತಾರೆ.
ಈ ರೀತಿ ಇಲ್ಲದಿದ್ದರೆ ಲಿಂಕ್ ಓಪನ್ ಮಾಡಬೇಡಿ
ಟ್ರಾಫಿಕ್ ಅಧಿಕಾರಿಗಳು ಬಳಸುವ ಫಾರ್ಮ್ಯಾಟಿಂಗ್ ಅನ್ನು ವಂಚಕರು ನಕಲಿ ಮಾಡುತ್ತಿದ್ದಾರೆ. ಅಧಿಕೃತ ಇ-ಚಲನ್ ಲಿಂಕ್ “https://echallan.parivahan.gov.in/” ಆಗಿದೆ. ಇದರ ರೀತಿಯೇ ಸ್ವಲ್ಪ ಬದಲಾವಣೆಯಲ್ಲಿ ಲಿಂಕ್ ಅನ್ನು ಕಳುಹಿಸುವ ಮೂಲಕ ವಂಚಕರು ವಂಚನೆಗೆ ಪ್ರಯತ್ನಿಸುತ್ತಾರೆ.
ಚಲನ್ ಲಿಂಕ್ ನ ಕೊನೆಯಲ್ಲಿ ‘gov.in’ ಇರುತ್ತದೆ. ಈ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ. ಇನ್ನು gov.in ಎಂದು ಲಿಂಕ್ ನಲ್ಲಿ ಕಾಣಿಸದಿದ್ದರೆ ನೀವು ಯಾವುದೇ ಕಾರಣಕ್ಕೂ ಲಿಂಕ್ ಅನ್ನು ಕ್ಲಿಕ್ ಮಾಡಾಬಾರದು. ನಕಲಿ ಸಂದೇಶಗಳು ಬಂದರೆ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ವಾಹನಕ್ಕೆ ಚಲನ್ ನೀಡಲಾಗಿದೆಯೇ ಅಥವಾ ಇಲ್ಲವ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.