ರೈಲಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ಪ್ರಯಾಣ ಮಾಡಿರುತ್ತಾರೆ ಎಂದು ಹೇಳಬಹುದು. ದೂರದ ಸ್ಥಳಗಳಿಗೆ ಬಹಳ ಬೇಗ ಹೋಗುವ ಕಾರಣ ಮತ್ತು ಪ್ರಯಾಣದಲ್ಲಿ ಹೆಚ್ಚಿನ ಆಯಾಸ ಆಗದ ಕಾರಣ ಹೆಚ್ಚಿನ ಜನರು ರೈಲು ಪ್ರಯಾಣವನ್ನ ಅವಲಂಭಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ರೈಲಿನಲ್ಲಿ ಪ್ರಯಾಣ ಮಾಡುವ ಹೆಚ್ಚಿನ ಜನರಿಗೆ ರೈಲುಗಳು ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾದಿರುತ್ತದೆ ಎಂದು ಹೇಳಬಹುದು. ಹೌದು ರೈಲುಗಳು ಬಹಳ ಭೋಗಿಗಳನ್ನ ಬಹಳ ದೂರ ಎಳೆದುಕೊಂಡು ಹೋಗುತ್ತದೆ ಮತ್ತು ಕಾರ್ ಬೈಕ್ ಗಳಿಗೆ ಹೋಲಿಕೆ ಮಾಡಿದರೆ ಅದರ ಮೈಲೇಜ್ ಬಹಳ ಕಡಿಮೆ ಮತ್ತು ಇದು ಸರ್ಕಾರಕ್ಕೆ ನಷ್ಟವಲ್ಲವೇ ಅನ್ನುವ ಪ್ರಶ್ನೆ ಹೆಚ್ಚಿನ ಜನರ ತಲೆಯಲ್ಲಿ ಮೂಡಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಒಂದು ರೈಲು ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರೈಲುಗಳ ಮೈಲೇಜ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಬಹಳ ಹಿಂದೆ ರೈಲು ಚಲಿಸಲು ಕಲ್ಲಿದ್ದಲನ್ನ ಬಳಕೆ ಮಾಡಲಾಗುತ್ತಿತ್ತು, ಆದರೆ ಈಗ ತಂತ್ರಜ್ಞಾನ ಮುಂದುವರೆದಿದ್ದು ರೈಲುಗಳಿಗೆ ಡೀಸೆಲ್ ಗಳನ್ನ ಬಳಸಲಾಗುತ್ತದೆ. ಸ್ನೇಹಿತರೆ ರೈಲುಗಳ ಡಿಸೇಲ್ ಟ್ಯಾಂಕ್ ಗಳನ್ನ ಮೂರೂ ವಿಧಾನಗಳಾಗಿ ವಿಂಗಡಣೆ ಮಾಡಲಾಗಿದೆ, ಒಂದು 5000 Ltr, ಎಡರನೆಯದು 5500 Ltr ಮತ್ತು ಮೂರನೆಯಾದವು 6000 Ltr.
ಸ್ನೇಹಿತರೆ ಚಲಿಸುವ ಎಲ್ಲಾ ರೈಲುಗಳು ಒಂದೇ ರೀತಿಯಲ್ಲಿ ಮೈಲೇಜ್ ಕೊಡುವುದಿಲ್ಲ ಮತ್ತು ಅದೂ ಭೋಗಿಗಳನ್ನ ಅವಮಭಿಸಿರುತ್ತದೆ ಎಂದು ಹೇಳಬಹುದು. ಇನ್ನು ಡೀಸೆಲ್ ಎಂಜಿನ್ನಲ್ಲಿ ಚಲಿಸುವ 12 ಕೋಚ್ ಪ್ಯಾಸೆಂಜರ್ ರೈಲಿನ ಬಗ್ಗೆ ಮಾತನಾಡುವುದಾದರೆ ಅದು 6 ಲೀಟರ್ಗಳಲ್ಲಿ ಒಂದು ಕಿಲೋಮೀಟರ್ ಮೈಲೇಜ್ ನೀಡುತ್ತದೆ. 12 ಕೋಚ್ ಪ್ಯಾಸೆಂಜರ್ ರೈಲು ಒಂದು ಕಿಲೋ ಮೀಟರ್ ಚಲಿಸಲು 6 ಲೀಟರ್ ಡಿಸೇಲ್ ಬೇಕು. ಇನ್ನು 24 ಬೋಗಿಗಳ ಡೀಸೆಲ್ ಎಂಜಿನ್ ಎಕ್ಸ್ಪ್ರೆಸ್ ರೈಲು ಪ್ರತಿ ಕಿಲೋಮೀಟರ್ ಗೆ 6 ಲೀಟರ್ ಮೈಲೇಜ್ ನೀಡುತ್ತದೆ. ಇದಲ್ಲದೇ 12 ಕೋಚ್ಗಳ ಎಕ್ಸ್ಪ್ರೆಸ್ ರೈಲು ಪ್ರತಿ ಕಿಲೋಮೀಟರ್ ಗೆ 4.50 ಲೀಟರ್ ಡಿಸೇಲ್ ತೆಗೆದುಕೊಳ್ಳುತ್ತದೆ.
ಪ್ಯಾಸೆಂಜರ್ ರೈಲು ಮತ್ತು ಎಕ್ಸ್ಪ್ರೆಸ್ ರೈಲಿನ ಮೈಲೇಜ್ ನಡುವಿನ ವ್ಯತ್ಯಾಸವೆಂದರೆ ಪ್ಯಾಸೆಂಜರ್ ರೈಲು ಎಲ್ಲಾ ನಿಲ್ದಾಣಗಳಲ್ಲಿ ನಿಂತು ಚಲಿಸುತ್ತದೆ ಈ ಕಾರಣಕ್ಕೆ ಅದರ ಡ್ರೈವರ್ ಬ್ರೇಕ್, ಆಕ್ಸಿಲರೇಟರ್ ಹೆಚ್ಚು ಬಳಕೆ ಮಾಡುತ್ತಾರೆ ಈ ಕಾರಣಕ್ಕೆ ಅದರ ಮೈಲೇಜ್ ಕಡಿಮೆ ಎಂದು ಹೇಳಬಹುದು. ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗಳು ತುಂಬಾ ಕಡಿಮೆ ಮತ್ತು ಅವು ಬ್ರೇಕ್, ಆಕ್ಸಿಲರೇಟರ್ ಕಡಿಮೆ ಬಳಕೆ ಮಾಡುವ ಕಾರಣ ಅದರ ಮೈಲೇಜ್ ಜಾಸ್ತಿ ಆಗಿರುತ್ತದೆ. ಇನ್ನು ಗೂಡ್ಸ್ ರೈಲುಗಳ ಮೈಲೇಜ್ ಅದು ತೆಗೆದುಕೊಂಡು ಹೋಗುವ ಭಾರದ ಮೇಲೆ ನಿರ್ಧಾರ ಆಗುತ್ತದೆ. ಪ್ಯಾಸೆಂಜರ್ ರೈಲಿಗೆ ಹೋಲಿಕೆ ಮಾಡಿದರೆ ಗೂಡ್ಸ್ ರೈಲುಗಳ ಮೈಲೇಜ್ ಬಹಳ ಕಡಿಮೆ ಆಗಿರುತ್ತದೆ. ಸ್ನೇಹಿತರೆ ರೈಲುಗಳ ಮೈಲೇಜ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಾಮಗೆ ತಿಳಿಸಿ.