Train Mileage: ಭಾರತದ ರೈಲು ಎಷ್ಟು ಮೈಲೇಜ್ ಕೊಡುತ್ತದೆ…? ಕಡಿಮೆ ಮೈಲೇಜ್ ಕೊಟ್ಟರು ಕೋಟಿಗಟ್ಟಲೆ ಲಾಭ ಹೇಗೆ…?
ಭಾರತದ ರೈಲು ಎಷ್ಟು ಮೈಲೇಜ್ ಕೊಡುತ್ತದೆ...?
Train Mileage Latest News: ದೂರದ ಪ್ರಯಾಣಕ್ಕಾಗಿ ಉತ್ತಮ ಆಯ್ಕೆ ಎಂದರು ರೈಲು ಪ್ರಯಾಣ ಎನ್ನಬಹುದು. ರೈಲುಗಳಲ್ಲಿ ಪ್ರಯಾಣ ಮಾಡಿದರೆ ಆರಾಮದಾಯಕ ಹಾಗೂ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಇನ್ನು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ರೈಲಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ತಿಳಿದಿರುವುದಿಲ್ಲ.
ರೈಲಿನ ಕುರಿತು ಜನರಲ್ಲಿ ಸಾಕಷ್ಟು ಪ್ರಶ್ನೆಗಳಿರುತ್ತವೆ, ರೈಲಿನ ಮೈಲೇಜ್ ಎಷ್ಟು? ಒಂದು ಕಿಲೋಮೀಟರ್ ಪ್ರಯಾಣಿಸಲು ಎಷ್ಟು ಡೀಸೆಲ್ ಖರ್ಚಾಗುತ್ತದೆ” ಅನ್ನುವ ಪ್ರಶ್ನೆಗೆ ಪ್ರಶ್ನೆಗೆ ಕೆಲವರಿಗೆ ಉತ್ತರ ತಿಳಿದಿಲ್ಲ. ಇನ್ನು ದೇಶದಲ್ಲಿ ಕಲ್ಲಿದ್ದಲಿನ ಹೊರತಾಗಿ ಡೀಸೆಲ್ ನಲ್ಲಿ ಚಲಿಸುವ ಅನೇಕ ರೈಲುಗಳಿವೆ. ಇದೀಗ ಭಾರತದ ರೈಲು ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ರೈಲುಗಳ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು..?
ರೈಲಿನ ಮೈಲೇಜ್ ಬಗ್ಗೆ ಹೇಳುವುದಾದರೆ, ವಾಹನಗಳಂತೆ ರೈಲಿನ ಮೈಲೇಜ್ ಸಹ ಅನೇಕ ಅಂಶಗಳ ಮೇಲೆ ಅವಲಂಭಿತವಾಗಿರುತ್ತದೆ. ರೈಲಿನ ಮೈಲೇಜ್ ಅನ್ನು ನೇರವಾಗಿ ಹೇಳುವುದು ತುಂಬಾ ಕಷ್ಟ. ಏಕೆಂದರೆ ರೈಲಿನ ಮೈಲೇಜ್ ಮಾರ್ಗ, ಪ್ಯಾಸೆಂಜರ್ ರೈಲು, ಎಕ್ಸ್ ಪ್ರೆಸ್ ಅಥವಾ ರೈಲಿನ ಕೋಚ್‌ಗಳ ಸಂಖ್ಯೆಯನ್ನು ಅವಲಂಭಿಸಿರುತ್ತದೆ.
ರೈಲಿನ ಮೈಲೇಜ್ ನ ಅತಿದೊಡ್ಡ ಅಂಶವೆಂದರೆ ರೈಲಿನಲ್ಲಿರುವ ಕೋಚ್ ಗಳ ಸಂಖ್ಯೆ. ಕಡಿಮೆ ಕಂಪಾರ್ಟ್ ಮೆಂಟ್ ಗಳೊಂದಿಗೆ, ಎಂಜಿನ್ ನಲ್ಲಿ ಹೆಚ್ಚಿನ ಹೊರೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಂಜಿನ್ ನ ಶಕ್ತಿಯು ಹೆಚ್ಚಾಗುತ್ತದೆ. ಡೀಸೆಲ್ ಇಂಜಿನ್ ರೈಲಿನ ಮೈಲೇಜ್ ಅನ್ನು ಗಂಟೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ರೈಲಿನ ಮೈಲೇಜ್ ಈ ಎಲ್ಲ ವಿಷಯಗಳನ್ನು ಅವಲಂಭಿತವಾಗಿರುತ್ತದೆ.
ಭಾರತದ ರೈಲು ಎಷ್ಟು ಮೈಲೇಜ್ ಕೊಡುತ್ತದೆ…?
ಇನ್ನು 24 ರಿಂದ 25 ಕೋಚ್ ಗಳನ್ನು ಹೊಂದಿರುವ ರೈಲುಗಳು 1 ಕಿಲೋಮೀಟರ್ ಗೆ 6 ಲೀಟರ್ ಡೀಸೆಲ್ ಅನ್ನು ಬಳಸುತ್ತವೆ. ಸೂಪರ್ ಫಾಸ್ಟ್ ರೈಲುಗಳಿಗೆ ಹೋಲಿಸಿದರೆ ಪ್ಯಾಸೆಂಜರ್ ರೈಲುಗಳು ಹೆಚ್ಚಿನ ಡೀಸೆಲ್ ಕುಡಿಯುತ್ತದೆ. ರೈಲ್ವೇ ಪ್ಯಾಸೆಂಜರ್ ರೈಲು 1 ಕಿಲೋಮೀಟರ್ ದೂರವನ್ನು ಕ್ರಮಿಸಲು 5 ರಿಂದ 6 ಲೀಟರ್ ಡೀಸೆಲ್ ತೆಗೆದುಕೊಳ್ಳುತ್ತದೆ. ಇದಕ್ಕೆ ಕಾರಣ ಈ ರೈಲು ಪದೇ ಪದೇ ಹಲವು ನಿಲ್ದಾಣಗಳಲ್ಲಿ ನಿಲ್ಲಬೇಕು.
ಅದೇ ಸಮಯದಲ್ಲಿ, 12 ಕೋಚ್ ಗಳನ್ನು ಹೊಂದಿರುವ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಗೆ 1 ಕಿಲೋಮೀಟರ್ ಮೈಲೇಜ್ ನೀಡಲು ಸುಮಾರು 4.5 ಲೀಟರ್ ಡೀಸೆಲ್ ಅಗತ್ಯವಿದೆ. ಪುನರಾವರ್ತಿತ ಬ್ರೇಕಿಂಗ್, ಕ್ಲೈಂಬಿಂಗ್ ಎತ್ತರ, ಹೆಚ್ಚು ಅಥವಾ ಕಡಿಮೆ ಲೋಡ್ ಅನ್ನು ಎಳೆಯುವುದು ಸೇರಿದಂತೆ ಎಂಜಿನ್‌ನ ಶಕ್ತಿಯ ಮೇಲೆ ರೈಲಿನ ಮೈಲೇಜ್ ಅವಲಂಭಿಸಿರುತ್ತದೆ.
ಇನ್ನು ಕಡಿಮೆ ಮೈಲೇಜ್ ಕೊಟ್ಟರು ರೈಲಿನಲ್ಲಿ ಒಂದೇ ಬಾರಿಗೆ ಸಾವಿರಾರು ಜನರು ಪ್ರಯಾಣ ಮಾಡುವ ಕಾರಣ ಕೋಟಿ ಕೋಟಿ ಆದಾಯ ಬರುತ್ತದೆ. ಮೈಲೇಜ್ ಗೆ ಹೋಲಿಕೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವ ಕಾರಣ ರೈಲ್ವೆ ಇಲ್ಕಖೆಗೆ ಉತ್ತಮ ಲಾಭ ಬರುತ್ತದೆ.