ರೈಲಿನಲ್ಲಿ ಯಾರು ತಾನೇ ಪ್ರಯಾಣ ಮಾಡುವುದಿಲ್ಲ ಹೇಳಿ. ಕಡಿಮೆ ಆಯಾಸ ಮತ್ತು ಟಿಕೆಟ್ ದರ ಕಡಿಮೆ ಮತ್ತು ದೂರ ಊರುಗಳಿಗೆ ಬಹಳ ಬೇಗ ಹೋಗುವ ಕಾರಣ ಹೆಚ್ಚಿನ ಜನರು ರೈಲು ಪ್ರಯಾಣ ಇಷ್ಟಪಡುತ್ತಾರೆ ಎಂದು ಹೇಳಬಹುವುದು. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಬಂದಮೇಲೆ ಹಲವು ನಿಯಮಗಳನ್ನ ಜಾರಿಗೆ ತರಲಾಗಿದೆ ಮತ್ತು ಈ ನಿಯಮಗಳು ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನ ಬೀರಿದೆ ಎಂದು ಹೇಳಬಹುದು. ಇನ್ನು ರೈಲಿನಲ್ಲಿ ಪ್ರಯಾಣ ಮಾಡುವದರು ಕೆಲವು ನಿಯಮಗಳನ್ನ ಕಡ್ಡಾಯವಾಗಿ ಅನುಸರಿಸಲೇಬೇಕು ಮತ್ತು ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ಅವರು ಅವಶ್ಯಕವಾಗಿ ದಂಡವನ್ನ ಕಟ್ಟಬೇಕು ಎಂದು ರೈಲ್ವೆ ಇಲಾಖೆ ಹೇಳಿದೆ.
ಇನ್ನು ಈಗ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ಹೊಸ ನಿಯಮ ಜಾರಿಗೆ ಬಂದಿದ್ದು ಈ ನಿಯಮವನ್ನ ಜನರು ಪಾಲನೆ ಮಾಡದೆ ಇದ್ದರೆ ಅವರು ಕಡ್ಡಾಯವಾಗಿ 500 ರೂಪಾಯಿ ದಂಡವನ್ನ ಕಟ್ಟಬೇಕು. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಬಹುದು ಮತ್ತು ಸರ್ಕಾರದ ನಿಯಮಗಳ ಪ್ರಕಾರ ನಾವು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡದೆ ಇದ್ದರೆ ನಾವು ದಂಡವನ್ನ ಕಟ್ಟಲೇಬೇಕು.
ಇನ್ನು ಅದೇ ರೀತಿಯಲ್ಲಿ ರೈಲು ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಒಳಗಡೆ ನೀವು ಇನ್ನುಮುಂದೆ ಪ್ರಯಾಣವನ್ನ ಮಾಡುವಾಗ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಲೇಬೇಕು ಮತ್ತು ನೀವು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸದೇ ಇದ್ದರೆ ನೀವು 500 ರೂಪಾಯಿಗಳ ದಂಡವನ್ನ ಪಾವತಿ ಮಾಡಬೇಕು. ಹೌದು ರೈಲ್ವೆ ಪ್ಲಾಟ್‌ಫಾರ್ಮ್ ಅಥವಾ ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂಬ ನಿಯಮವನ್ನು 6 ತಿಂಗಳ ವರೆಗೆ ರೈಲ್ವೆ ಇಲಾಖೆ ವಿಸ್ತರಣೆ ಮಾಡಿದೆ. ಹೌದು ಇನ್ನುಮುಂದೆ ನೀವು ರೈಲ್ವೆ ಪ್ಲಾಟ್‌ಫಾರ್ಮ್ ಅಥವಾ ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಒಂದು ವೇಳೆ ನಿಯಮ ಉಲ್ಲಂಘಸಿದರೆ 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ರೈಲ್ವೆ ಪ್ಲಾಟ್ ಫಾರ್ಮ್ ಹಾಗೂ ರೈಲುಗಳಲ್ಲಿ ಸಂಚಾರ ಮಾಡುವಾಗ ಮಾಸ್ಕ್ ಹಾಕದಿದ್ದರೆ 500 ರೂಪಾಯಿ ದಂಡ ವಿಧಿಸುವ ನಿಯಮ ಈಗಾಗಲೇ ರೈಲ್ವೆ ಇಲಾಖೆಯಿಂದ ನಿಯಮ ಜಾರಿಯಲ್ಲಿದ್ದು ಮುಂದಿನ ಆರು ತಿಂಗಳ ಕಾಲ ನಿಯಮ ಮುಂದುವರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ರೈಲುಗಳು ಮತ್ತು ನಿಲ್ದಾಣಗಳ ಆವರಣದಲ್ಲಿ ಮಾಸ್ಕ್ ರೂಲ್ಸ್ ಉಲ್ಲಂಘಿಸುತ್ತಿರುವುದು ಕಂಡು ಬಂದಿತ್ತು ಮತ್ತು ಹೀಗಾಗಿ ಮಾಸ್ಕ್ ಧರಿಸದೇ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಓಡಾಡುವ ಜನರಿಗೆ 500 ರೂಪಾಯಿ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.ಕಳೆದ ಏಪ್ರಿಲ್ ತಿಂಗಳಲ್ಲಿ ಕೇಂದ್ರ ರೈಲ್ವೆ ಇಲಾಖೆಯಿಂದ ಕೋವಿಡ್ ನಿಯಮ ಜಾರಿಯಾಗಿದ್ದ ಸಂದರ್ಭದಲ್ಲಿ ರೈಲ್ವೆ ಪ್ಲಾಟ್ ಫಾರ್ಮ್ ಹಾಗೂ ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಕಡ್ಡಾಯಗೊಳಿಸಿತ್ತು ಮತ್ತು ಈಗ ಈ ನಿಯಮವನ್ನು 6 ತಿಂಂಗಳ ವರೆಗೆ ರೈಲ್ವೆ ಇಲಾಖೆ ವಿಸ್ತರಣೆ ಮಾಡಿದೆ. ಸ್ನೇಹಿತರೆ ಈ ಮಾಹಿತಿಯನ್ನ ರೈಲಿನಲ್ಲಿ ಪ್ರಯಾಣ ಮಾಡುವ ಎಲ್ಲರಿಗೂ ತಲುಪಿಸಿ.