UPI Without Data: ಸುಲಭವಾಗಿ ಇಂಟರ್ನೆಟ್ ಇಲ್ಲದೆ ಈ ರೀತಿ UPI ಮಾಡಿ, UPI ಬಳಸುವವರಿಗೆ RBI ನಿಂದ ಹೊಸ ಸೇವೆ ಆರಂಭ.

ಇಂಟರ್ನೆಟ್ ಇಲ್ಲದೆ ಸುಲಭವಾಗಿ UPI ಮಾಡುವ ವಿಧಾನ.

Transfer UPI Money Without Internet: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಜನರು UPI ಅನ್ನು ಉಪಯೋಗಿಸಿಕೊಂಡು ಹಣವನ್ನು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡುತ್ತಿದ್ದಾರೆ. ಇದೀಗ ಯಾರು ಸಹ ಹಣವನ್ನು ಕೈಯಲ್ಲಿ ಹಿಡಿದು ಪ್ರಯಾಣ ಮಾಡುವುದಿಲ್ಲ. ಫೋನ್ ನಲ್ಲಿ UPI ( Google pay, Phone pay, Paytm,) ಅಂತಹ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಪಾವತಿಸುತ್ತಾರೆ.

UPI Money Transfer Latest Update
Image Credit: Coolztricks

 

ಇದೀಗ ಯಾವುದೇ ಅಂಗಡಿಗೆ ಹೋದರೂ ನೀವು UPI ಮೂಲಕ ಹಣವನ್ನು ಸುಲಭವಾಗಿ ಪಾವತಿಸಬಹುದು. ಆದರೆ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅಥವಾ ಇಂಟರ್ನೆಟ್ ಸಮಸ್ಯೆಗಳ ಕಾರಣದಿಂದ UPI ಮೂಲಕ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಇನ್ನು ಅನೇಕ ಬಾರಿ ಹೋಟೆಲ್ ಅಥವಾ ಎಲ್ಲಿಗಾದರೂ ಹೋಗಿ ಇಂಟರ್ನೆಟ್ ಸಮಸ್ಯೆಯ ಕಾರಣದಿಂದ UPI ಮೂಲಕ ಹಣ ಪಾವತಿ ಮಾಡಲು ಆಗದೆ ತೊಂದರೆಗೆ ಸಿಲುಕಿರುವ ಸಾಕಷ್ಟು ಉದಾಹರಣೆಗಳಿವೆ.

ಇನ್ನು ಇಂದು ನಾವು ನೀವು ಸುಲಭವಾಗಿ ಇಂಟರ್ನೆಟ್ ಇಲ್ಲದೆ ಸಹ UPI ಮೂಲಕ ಪೇಮೆಂಟ್ ಅನ್ನು ಪಾವತಿ ಮಾಡಬಹುದು. ಅದು ಹೇಗೆ ಎಂದು ನೀವು ಯೋಚಿಸುತ್ತಿದ್ದೀರಾ, ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ.

Transfer UPI Money Without Internet
Image Credit: Dnaindia

ನೀವು ಇಲ್ಲಿ ತಿಳಿಸಿರುವ ಈ ಐದು ಸ್ಟೆಪ್ ಗಳನ್ನು ಫಾಲೋ ಮಾಡುವ ಮೂಲಕ ಇಂಟರ್ನೆಟ್ ಇಲ್ಲದೆ ಸುಲಭವಾಗಿ UPI ಮೂಲಕ ಹಣ ಪಾವತಿ ಮಾಡಬಹುದು

Join Nadunudi News WhatsApp Group

  1. ನಿಮ್ಮ ಫೋನ್ ನಲ್ಲಿ *99# ಎಂದು ಡಯಲ್ ಮಾಡಿ ನಂತರ ಕಾಲ್ ಮಾಡಿ.
  2. ಹಣವನ್ನು ಪಾವತಿಸಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
  3. ನಂತರ ನಿಮ್ಮ UPI ಐಡಿ ಮತ್ತು ನೀವು ಕಳುಹಿಸಬೇಕಾದ ಮೊತ್ತವನ್ನು ಎಂಟರ್ ಮಾಡಿ.
  4. ನಂತರ ನಿಮ್ಮ UPI ಪಿನ್ ಅನ್ನು ನಮೂದಿಸಿ,
  5. ಈ ಮೂಲಕ ನೀವು ಪೇಮೆಂಟ್ ಅನ್ನು ಪಾವತಿಸಬಹುದು.

Join Nadunudi News WhatsApp Group