Driving License: ಹೊಸ ಡ್ರೈವಿಂಗ್ ಲೈಸನ್ಸ್ ಮಾಡುವವರಿಗೆ ಗುಡ್ ನ್ಯೂಸ್, 7 ದಿನದಲ್ಲಿ ನಿಮ್ಮ ಮನೆಗೆ ಬರಲಿದೆ ಲೈಸೆನ್ಸ್.
ಇನ್ನುಮುಂದೆ 7 ದಿನದಲ್ಲಿ ಮನೆ ಬಾಗಿಲಿಗೆ ಬರಲಿದೆ Driving Licence.
Transport Department About Driving Licence: ವಾಹನವನ್ನು ಚಲಾಯಿಸಲು ಕಲಿತ ಮೇಲೆ ಕಲಿಕಾ ಪರವಾನಿಗೆಯನ್ನ ಪಡೆಯುವುದು ತುಂಬಾನೇ ಮುಖ್ಯ. Driving Licence ಇಲ್ಲದೆ ವಾಹನ ಚಲಾವಣೆ ಕಾನೂನು ಬಾಹಿರ ಅಪರಾಧವಾಗಿರುತ್ತದೆ.
ಈ ಕಾನೂನು ಬಾಹಿರ ಕೆಲಸಕ್ಕೆ ದಂಡ ಕೂಡ ಕಟ್ಟಬೇಕಾಗುತ್ತದೆ ಹಾಗಾಗಿ ನೀವು ನಿಮ್ಮ ಶಾಶ್ವತ ಪರವಾನಗಿಯನ್ನ ಪಡೆಯುವಾಗ, ಕಲಿಕೆಯ ಪರವಾನಗಿ ಅಗತ್ಯ. ಇನ್ನು ನೀವು ಬಯಸಿದ್ರೆ, ಇದನ್ನ 16ನೇ ವಯಸ್ಸಿನಲ್ಲಿಯೂ ತೆಗೆದುಕೊಳ್ಳಬಹುದು. ಆದರೆ ಇದರ ಅಡಿಯಲ್ಲಿ ನಿಮಗೆ 50cc ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ವಾಹನವನ್ನ ಓಡಿಸಲು ಮಾತ್ರ ಅನುಮತಿಸಲಾಗುತ್ತೆ.
ಡ್ರೈವಿಂಗ್ ಲೈಸನ್ಸ್ ಕಡ್ಡಾಯ
ಹೌದು ದೇಶದಲ್ಲಿ ಡ್ರೈವಿಂಗ್ ಲೈಸನ್ಸ್ ಎಷ್ಟು ಕಡ್ಡಾಯ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ದೇಶದಲ್ಲಿ ಪ್ರತಿನಿತ್ಯ ಸಾರಿಗೆ ಪೊಲೀಸರು ಕೋಟಿಗಟ್ಟಲೆ ಹಣವನ್ನ ಸಾಕಾರ ನಿಯಮ ಉಲ್ಲಂಘನೆ ಮಾಡಿದವರಿಂದ ವಸೂಲಿ ಮಾಡುತ್ತಿರುವುದನ್ನ ನಾವು ಗಮನಿಸಲಬಹುದು. ಸದ್ಯ ಡ್ರೈವಿಂಗ್ ಲೈಸನ್ಸ್ ಗೆ ಸಂಬಂಧಿಸಿದಂತೆ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು ಹೊಸ ಡ್ರೈವಿಂಗ್ ಮಾಡಿಸುವ ಜನರು ಈ ನಿಯಮ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ.
7 ದಿನದಲ್ಲಿ ಮನೆ ಬಾಗಿಲಿಗೆ ಬರಲಿದೆ Driving Licence
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಚಿಪ್ಸ್ ಪೂರೈಕೆಯಾಗುತ್ತಿರಲಿಲ್ಲ, ಹಾಗಾಗಿ 10 ಲಕ್ಷಕ್ಕೂ ಹೆಚ್ಚು ಪರವಾನಗಿಗಳನ್ನು ಮುದ್ರಿಸಲಾಗಲಿಲ್ಲ, ಈಗ ಚಿಪ್‌ಗಳನ್ನು ಸಂಪೂರ್ಣ ರೀತಿಯಲ್ಲಿ ಸರಬರಾಜು ಮಾಡಲಾಗುತ್ತಿದೆ. ಇದರಿಂದ ನಿರಂತರವಾಗಿ ಮನೆಗಳಿಗೆ ಪರವಾನಗಿಗಳನ್ನು ತಲುಪಿಸಲಾಗುತ್ತಿದೆ.
ಇದೀಗ ಉತ್ತರ ಪ್ರದೇಶದಲ್ಲಿ ಹೊಸ Driving License ಕೇವಲ 7 ದಿನಗಳಲ್ಲಿ ಜನರ ಮನೆ ತಲುಪಲಿದ್ದು, ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿದೆ. ಪರವಾನಗಿ ಪಡೆದವರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುಮೋದನೆ ಪಡೆದು 7 ದಿನಗಳ ನಂತರ ಅವರ ಮನೆ ವಿಳಾಸಕ್ಕೆ ನೇರವಾಗಿ ಪರವಾನಗಿ ತಲುಪಿಸಲಾಗುತ್ತಿದೆ. ದೇಶಾದ್ಯಂತ ಹೊಸ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಆದಷ್ಟು ಬೇಗ ಲೈಸೆನ್ಸ್ ಅನ್ನು ಪೂರೈಕೆ ಮಾಡಬೇಕು ಎಂದು ಕೇಂದ್ರ ಆದೇಶವನ್ನ ಹೊರಡಿಸಿದೆ.