Triumph New: ಈ ಆಕರ್ಷಕ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಬುಲೆಟ್ ಬೈಕ್, ಕಡಿಮೆ ಬೆಲೆ ಜೊತೆಗೆ ಗರಿಷ್ಟ ಮೈಲೇಜ್.
ಬುಲೆಟ್ ಬೈಕಿಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಬೈಕ್.
Triumph Scrambler 400 X: ಸದ್ಯ ಮಾರುಕಟ್ಟೆಯಲ್ಲಿ ರಿಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದಿವೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ Royal Enfield Bike ಗಳಿಗೆ ಠಕ್ಕರ್ ನೀಡಲು ಸಾಕಷ್ಟು ಮಾದರಿಯ ಬೈಕ್ ಗಳಿವೆ.
ಸದ್ಯ ದೇಶದದಲ್ಲಿ ಜನಪ್ರಿಯತೆ ಪಡೆದಿರುವ ಆಟೋ ಮೊಬೈಲ್ ಕಂಪನಿಯ ಬಜಾಜ್ ಆಟೋ, ಬಜಾಜ್ Triumph Scrambler 400 X ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು ಬಜಾಜ್ ಮತ್ತು ಟ್ರಯಂಫ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಸದ್ಯ Triumph Scrambler 400 X ಬುಲೆಟ್ ಬೈಕ್ ಗೆ ಬಾರಿ ಪೈಪೋಟಿ ನೀಡಲಿದೆ.
ಬುಲೆಟ್ ಬೈಕಿಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಆಕರ್ಷಕ ಬೈಕ್
ಟ್ರಯಂಫ್ ಈ ವರ್ಷ ಬಜಾಜ್ ಆಟೋ ಸಹಾಯದಿಂದ ಸ್ಪೀಡ್ 400 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಎರಡೂ ಬೈಕ್ ಗಳಲ್ಲಿ ಒಂದೇ ಎಂಜಿನ್ ಅನ್ನು ಬಳಸಿದೆ ಎನ್ನುವ ಬಗ್ಗೆ ವರದಿಯಾಗಿದೆ.
Triumph Scrambler 400 X ನಲ್ಲಿ ಕಂಪನಿಯು ಸ್ಪೀಡ್ 400 ನಂತೆಯೇ ಅದೇ ಎಂಜಿನ್ ಅನ್ನು ಬಳಸಿದೆ. ಇದು ಟಿಆರ್ ಸರಣಿಯ ಎಂಜಿನ್ ಆಗಿದೆ. Triumph Scrambler 400 X ನಲ್ಲಿ ಕಂಪನಿಯು 398.15cc ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದ್ದು, ಇದು ಗರಿಷ್ಠ 39.5 bhp ಮತ್ತು 37.5 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.
Triumph Scrambler 400 X Feature
ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ನಲ್ಲಿ ಕಂಪನಿಯು ಎರಡೂ ಸಸ್ಪೆನ್ಷನ್ ಗಳ ಪ್ರಯಾಣವನ್ನು 150 ಎಂಎಂ ಹೆಚ್ಚಿಸಿದೆ. ಇದು ಮುಂಭಾಗದಲ್ಲಿ 140 ಎಂಎಂ ಮತ್ತು ಹಿಂಭಾಗದಲ್ಲಿ 130 ಎಂಎಂ ಸಸ್ಪೆನ್ಷನ್ ಪ್ರಯಾಣವನ್ನು ಹೊಂದಿದೆ. ಈ ಬೈಕ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದರೆ, ಹಿಂಭಾಗದಲ್ಲಿ 230 ಎಂಎಂ Disk Break ಅಳವಡಿಸಲಾಗಿದೆ. ಕಂಪನಿಯು ಸ್ಕ್ರ್ಯಾಂಬ್ಲರ್ 400X ನಲ್ಲಿ 19-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಸ್ಥಾಪಿಸಿದೆ.
Triumph Scrambler 400 X ಬೆಲೆ
ಸ್ಕ್ರ್ಯಾಂಬ್ಲರ್ 400X ಹೆಡ್‌ಲೈಟ್, ರೇಡಿಯೇಟರ್ ಗಾರ್ಡ್, ಸ್ಪ್ಲಿಟ್ ಸೀಟ್, ಹ್ಯಾಂಡ್‌ಗಾರ್ಡ್ ಮತ್ತು ಮಡ್ ಗಾರ್ಡ್ ನ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಇನ್ನು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಮಾರುಕಟ್ಟೆಯಲ್ಲಿ 2,62,996 ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಕಂಪನಿಯು ತನ್ನ ಎಲ್ಲಾ ಅಧಿಕೃತ ಡೀಲರ್ ಶಿಪ್ ಗಳಿಂದ ಈ ಬೈಕ್ ನ ವಿತರಣೆಯನ್ನು ಪ್ರಾರಂಭಿಸಿದೆ. ಬಿಡುಗಡೆಯ ಜೊತೆಗೆ ಕಂಪನಿಯು ಬೈಕ್ ಬುಕ್ಕಿಂಗ್ ಕೂಡ ಆರಂಭಿಸಲಾಗಿದ್ದು, ಡೀಲರ್ ಶಿಪ್ ಮೂಲಕ ಅಥವಾ ಆನ್ ಲೈನ್ ನಲ್ಲಿ ರೂ 10,000 ಪಾವತಿಸಿ ಬುಕ್ ಮಾಡಿಕೊಳ್ಳಬಹುದಾಗಿದೆ.