Triumph: ರಾಯಲ್ Enfield ಮುಂದೆ ತೊಡೆತಟ್ಟಿ ನಿಂತಿದೆ ಈ ಬೈಕ್, ಕಡಿಮೆ ಬೆಲೆ 30 Km ಮೈಲೇಜ್.
ಇದೀಗ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನೀಡಲು ಟ್ರಯಂಪ್ ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆಗೊಳಿಸಿದೆ.
Triumph Speed 400: ಮಾರುಕಟ್ಟೆಯಲ್ಲಿ ಇದೀಗ ನೂತನ ಮಾದರಿಯ ಬೈಕ್ ಗಳು ಲಗ್ಗೆ ಇಡುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಬೈಕ್ ಗಳು ಲಭ್ಯವಿದೆ. ಸಾಕಷ್ಟು ಆಟೋಮೊಬೈಲ್ ಕಂಪನಿಗಳು ವಿವಿಧ ವಿನ್ಯಾಸದ ಬೈಕ್ ಗಳನ್ನೂ ಪರಿಚಯಿಸುತ್ತಿವೆ.
ಇನ್ನು ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಬೈಕ್ ಗಳು ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನೀಡಲು ಟ್ರಯಂಪ್(Triumph) ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆಗೊಳಿಸಿದೆ.
ರಾಯಲ್ ಏನ್ ಫೀಲ್ಡ್ ಜೊತೆ ಸ್ಪರ್ಧೆಗೆ ನಿನ್ನಲಿದೆ ಈ ಬೈಕ್
ಟ್ರಯಂಪ್ ಇದೀಗ ಟ್ರಯಂಪ್ ಸ್ಪೀಡ್ 400 ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಟ್ರಯಂಪ್ ಸ್ಪೀಡ್ 400 ಬೈಕ್ ಬುಕಿಂಗ್ ಆರಂಭಗೊಂಡಿದೆ. ಈ ಬೈಕ್ಅನ್ನು ನಿಮ್ಮ ಹತ್ತಿರದ ಶೋ ರೂಮ್ ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಿಕೊಳ್ಳಬಹುದು. ಬುಕ್ ಮಾಡಲು ನೀವು ₹10,000 ಟೋಕನ್ ಮೊತ್ತವನ್ನು ಪಾವತಿಸಬೇಕು.
ಟ್ರಯಂಪ್ ಸ್ಪೀಡ್ 400 ಬೈಕ್ ಮೈಲೇಜ್
ಟ್ರಯಂಫ್ ಸ್ಪೀಡ್ 400 398 ಸಿಸಿ ಎಂಜಿನ್ ಪಡೆಯುತ್ತದೆ. ಈ ಎಂಜಿನ್ 8000 rpm ನಲ್ಲಿ 40 PS ಪವರ್ ಮತ್ತು 6500 rpm ನಲ್ಲಿ 37.5 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದೆ. ಇನ್ನು ನೂತನ ಟ್ರಯಂಪ್ ಸ್ಪೀಡ್ 400 ಬೈಕ್ ಬರೋಬ್ಬರಿ 30 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ನೂತನ ಟ್ರಯಂಪ್ ಸ್ಪೀಡ್ 400 ಬೈಕ್ ನ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಹೊರಡಿಸಿಲ್ಲ.
ಟ್ರಯಂಪ್ ಸ್ಪೀಡ್ 400 ಬೈಕ್ ಬೆಲೆ
ಈ ಬೈಕ್ ನಲ್ಲಿ ವೆಟ್ ಮಲ್ಟಿಪ್ಲೆಟ್ ಸ್ಲೀಪ್ ಅಸಿಸ್ಟ್ 6 ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ. ಇದರ ಕಾರ್ಯಕ್ಷಮತೆ ಅದ್ಭುತವಾಗಿದೆ. ಮುಂಭಾಗದಲ್ಲಿ ದೊಡ್ಡ ಪಿಸ್ಟನ್ ಡಿಫರೆನ್ಷಿಯಲ್ ಮತ್ತು ಹಿಂಭಾಗದಲ್ಲಿ ಮೊನೊ ಶಾಪ್ ಸಸ್ಪೆನ್ಶನ್ ಅನ್ನು ಪಡೆಯುತ್ತದೆ.
ಇದಲ್ಲದೇ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಎರಡೂ ಬದಿಯ ಡಿಸ್ಕ್ ಬ್ರೇಕ್‌ಗಳನ್ನು ಇದರಲ್ಲಿ ನೀಡಲಾಗಿದೆ. 13-ಲೀಟರ್ ಇಂಧನ ಟ್ಯಾಂಕ್ ಅನ್ನು ನೀಡಲಾಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 2.33 ಲಕ್ಷ ರೂ. ನಿಗದಿಪಡಿಸಲಾಗಿದೆ.