Live Caller: ಅಪರಿಚಿತ ವ್ಯಕ್ತಿಯ ಕರೆ ಬಂದರೆ ಸುಲಭವಾಗಿ ತಿಳಿದುಕೊಳ್ಳಿ, ಬಂದಿದೆ ಹೊಸ ಆಪ್.

ಲೈವ್ ಕಾಲರ್ ಅಪ್ಲಿಕೇಶನ್ ಮೂಲಕ ಅಪರಿಚಿತ ವ್ಯಕ್ತಿಯ ನಂಬರ್ ನಿಂದ ಕರೆ ಬಂದರೆ ಆ ವ್ಯಕ್ತಿ ಯಾರು ಎಂದು ಸುಲಭಾವಾಗಿ ತಿಳಿಯಬಹುದು.

True Caller And Live Caller: ನಿಮಗೆ ಯಾರಾದರೂ ಅಪರಿಚಿತ ವ್ಯಕ್ತಿ ಕಾಲ್ ಅಥವಾ ಮೆಸೇಜ್ ಮಾಡಿದರೆ ಯಾರೆಂದು ತಿಳಿದುಕೊಳ್ಳಲು ಇಮೇಜ್ ಕುತೂಹಲ ಇದ್ದೆ ಇರುತ್ತದೆ. ಸಾಕಷ್ಟು ಜನರು ಇದನ್ನು ತಿಳಿಯಲು ಟ್ರೂ ಕಾಲರ್ ಎಂಬ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಟ್ರು ಕಾಲರ್ ಅಪ್ಲಿಕೇಶನ್ ಸಹ ಬಳಕೆದಾರರಿಗೆ ಅನುಗುಣವಾಗುವ ನಿಟ್ಟಿನಲ್ಲಿ ಅನೇಕ ಫೀಚರ್ಸ್ ಗಳನ್ನೂ ಪರಿಚಯ ಮಾಡಿದೆ.

True Caller And Live Caller
Image Source: istock

ಟ್ರೂ ಕಾಲರ್ ನಲ್ಲಿ ಲೈವ್ ಕಾಲರ್ ಎನ್ನುವ ಹೊಸ ಸೇವೆ
ಇದೀಗ ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಟ್ರೂ ಕಾಲರ್ ಲೈವ್ ಕಾಲರ್ ಎನ್ನುವ ಹೊಸ ಸೇವೆಯನ್ನು ಪರಿಚಯಿಸಿದೆ. ಇದು ಕರೆ ಬಂದ ಕೂಡಲೇ ಸ್ಕ್ರೀನ್ ಮೇಲೆ ಕರೆ ಮಾಡುವವರ ಗುರುತನ್ನು ಪರಿಚಯಿಸುತ್ತದೆ. ಇಂದಿನ ದಿನಗಳಲ್ಲಿ ಕಾಲರ್ ಐಡಿ ಸೇವೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಅಪರಿಚಿತ ಸಂಖ್ಯೆಯ ವ್ಯಕ್ತಿಯನ್ನು ಗುರುತಿಸಲು ಟ್ರೂ ಕಾಲರ್ ನಿಂದಾಗಿ ಸ್ಪ್ಯಾಮ್ ಯಾವುದು ರೋಬೊ ಕಾಲರ್ ಯಾವುದು ಎಂಬ ಮಾಹಿತಿ ಸುಲಭವಾಗಿ ಸಿಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡುವುದಕ್ಕೆ ಲೈವ್ ಕಾಲರ್ ಸೇವೆ ಪರಿಚಯಿಸಿದೆ. ಈ ಸೇವೆ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಕರೆ ಬಂದಾಗ ಕರೆ ಮಾಡುವವರ ಐಡಿಯನ್ನು ಡಿಸ್ ಪ್ಲೆ ಮಾಡಲಿದೆ.

True Caller And Live Caller
Image Source: India Today

ಲೈವ್ ಕಾಲರ್ ನಲ್ಲಿ ಅಪರಿಚಿತ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವುದು ಹೇಗೆ
ಲೈವ್ ಕಾಲರ್ ಸೇವೆಯಿಂದ ಅಪರಿಚಿತ ಕರೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಸೇವೆ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಐಫೋನ್ ಬಳಕೆದಾರರು ಅಪರಿಚಿತ ವ್ಯಕ್ತಿಯ ಕಾಲ್ ಸ್ವೀಕರಿಸಿದ್ದಾರೆ ಕರೆ ಮಾಡಿದವರ ಐಡಿಯನ್ನು ತಿಳಿಯಲು ಸಿರಿಯನ್ನು ಆಕ್ಟಿವ್ ಮಾಡಬೇಕಾಗುತ್ತದೆ. ಅಲ್ಲದೆ ಹೇ ಸಿರಿ ಟ್ರೂ ಕಾಲರ್ ಅನ್ನು ಸರ್ಚ್ ಮಾಡು ಎಂದು ಹೇಳಬೇಕು. ಕೂಡಲೇ ಸಿರಿಯು ಬಳಕೆದಾರರ ಲೈವ್ ಕಾಲರ್ ಐಡಿಯನ್ನು ಡಿಸ್ ಪ್ಲೆ ಮಾಡಲಿದೆ.

True Caller And Live Caller
Image Source: Mint

Join Nadunudi News WhatsApp Group

Join Nadunudi News WhatsApp Group