TVS Apache: ಕೇವಲ 15 ಸಾವಿರ ಕೊಟ್ಟು ಮನೆಗೆ ತನ್ನಿ ಅಪಾಚೆ RTR 160, ಈ ಆಫರ್ ಮತ್ತೆ ಯಾವತ್ತೂ ಸಿಗಲ್ಲ.
ಕಡಿಮೆ ಬೆಲೆಯಲ್ಲಿ TVD ಅಪಾಚೆ ಬೈಕ್ ಖರೀದಿ ಮಾಡಬಹುದು.
TVS Apache RTR 160: ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಟಿವಿಎಸ್ ಮೋಟಾರ್ (TVS Motor) ಕಂಪನಿಯ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ವಿವಿಧ ಮಾದರಿಯ ಪೆಟ್ರೋಲ್ ಚಾಲಿತ ವಾಹನಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಟಿವಿಎಸ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ.
ಟಿವಿಎಸ್ ಅಪಾಚೆ ಬೈಕ್ ಖರೀದಿಗೆ ಬಂಪರ್ ಆಫರ್
ಇನ್ನು ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ದುಬಾರಿ ಮೌಲ್ಯದ ಬೈಕ್ ಗಳನ್ನು ಬಿಡುಗಡೆ ಮಾಡಿವೆ. ದುಬಾರಿ ಬೆಲೆಯ ಬೈಕ್ ಖರೀದಿ ಎಲ್ಲರಿಗು ಕಷ್ಟವಾಗುತ್ತದೆ. ಈ ಕಾರಣಕ್ಕೆ ಕೆಲವು ಕಂಪನಿಗಳು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟಿವಿಎಸ್ ಮೋಟಾರ್ ತನ್ನ ಅಪಾಚೆ ಬೈಕ್ ಗಳ ಖರೀದಿಗೆ ಗ್ರಾಹಕರಿಗೆ ಭರ್ಜರಿ ಅವಕಾಶವನ್ನು ನೀಡುತ್ತಿದೆ. ಟಿವಿಎಸ್ ಕಂಪನಿಯ ಹಳೆಯ ಮಾದರಿಯ ಬೈಕ್ ಗಳು ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ.
ಟಿವಿಎಸ್ ಅಪಾಚೆ RTR 160 ಬೈಕ್ (TVS Apache RTR 160)
ಟಿವಿಎಸ್ ಮೋಟಾರ್ ಇದೀಗ ತನ್ನ ಹೊಸ ಮಾದರಿಯ ಟಿವಿಎಸ್ ಅಪಾಚೆ RTR 160 ಬೈಕ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಬೈಕ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ. ನೀವು ಈ ಬೈಕ್ ಅನ್ನು ಖರೀದಿಸಲು ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ನೀಡಬೇಕು.
ಮಾರುಕಟ್ಟೆಯಲ್ಲಿ ಈ ಟಿವಿಎಸ್ ಅಪಾಚೆ RTR 160 ಬೈಕ್ ನ ಬೆಲೆ 1.26 ರಿಂದ 1.47 ಲಕ್ಷ ಆಗಿದೆ. ಆದರೆ ಆನ್ಲೈನ್ ವೆಬ್ ಸೈಟ್ ಹಾಗೂ ಕಡಿಮೆ ಡೌನ್ ಪೇಮೆಂಟ್ ನ ಮೂಲಕ ನೀವು ಈ ಬೈಕ್ ಅನ್ನು ಕೇವಲ 15 ಸಾವಿರದಲ್ಲಿ ಖರೀದಿಸಬಹುದು.
ಕೇವಲ 15 ಸಾವಿರ ಕೊಟ್ಟು ಮನೆಗೆ ತನ್ನಿ ಅಪಾಚೆ RTR 160
ಟಿವಿಎಸ್ ಕಂಪನಿ ಇದೀಗ ಅಪಾಚೆ RTR 160 ಬೈಕ್ ಖರೀದಿಗೆ ಬಂಪರ್ ಆಫರ್ ನೀಡಿದೆ. ಕೇವಲ 15,000 ಡೌನ್ ಪೇಮೆಂಟ್ ನ ಮೂಲಕ ನೀವು ಈ ಬೈಕ್ ಅನ್ನು ಖರೀದಿಸಬಹುದಾಗಿದೆ. ಬ್ಯಾಂಕ್ ಗಳು ನಿಮಗೆ 1,32,020 ರೂ. ಸಾಲವನ್ನು ಈ ಬೈಕ್ ಖರೀದಿಗೆ ನೀಡಲಿದೆ. ಈ ಸಾಲಕ್ಕೆ ಬ್ಯಾಂಕ್ ನಿಮಗೆ 9 .7 ಶೇ. ವಾರ್ಷಿಕ ಬಡ್ಡಿಯನ್ನು ವಿಧಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಮಾಸಿಕ 4,241 ರೂ. EMI ಪಾವತಿಸುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.