EV: ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಬುಕಿಂಗ್, 145Km ಮೈಲೇಜ್ ಕೊಡುವ ಈ ಸ್ಕೂಟರ್ ಗೆ ಜನರು ಫಿದಾ
145 ಕಿಲೊಮೀಟರ್ ಮೈಲೇಜ್ ನೀಡುವ ಟಿವಿಯಸ್ ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್.
TVS iQube: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕೂಡ ಹೆಚ್ಚಾಗುತ್ತಿದೆ. ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಓಲಾ, ಹೀರೋ(Hero), ಟಿವಿಎಸ್(TVS), ಬಜಾಜ್ ಹಾಗೂ ಇನ್ನಿತರ ಕಂಪನಿಗಳು ತನ್ನ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ.
ಟಿವಿಎಸ್ iQube
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸುತ್ತಿದ್ದಾರೆ. ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಲ್ಲಿ ಒಂದಾದ ಟಿವಿಎಸ್ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2020 ರಲ್ಲಿ ಬಿಡುಗಡೆ ಮಾಡಿದೆ. ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ 43 ತಿಂಗಳುಗಳ ಕಾಲಾವಕಾಶದಲ್ಲಿ ಅಧಿಕ ಬುಕಿಂಗ್ ಕಂಡುಕೊಂಡಿದೆ. ಈ ಎಲೆಕ್ಟೈರಿಕ್ ಸ್ಕೂಟರ್ 1,50,000 ಯುನಿಟ್ ಗಳ ಮಾರಾಟ ಮಾಡಿದೆ. ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ನೇಪಾಳದಲ್ಲಿ ಬಿಡುಗಡೆಗೊಂಡು ಹೆಚ್ಚಿನ ಸೇಲ್ ಕಾಣುತ್ತಿದೆ.
ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಬುಕಿಂಗ್
ಟಿವಿಎಸ್ iQube ಜುಲೈ 22 2023 ರವರೆಗೆ 154263 ಯೂನಿಟ್ ಗಳನ್ನೂ ನೋಂದಾಯಿಸಿದೆ. ಜೂನ್ 2023 ರ ಕೊನೆಯಲ್ಲಿ iQube ನ ಉತ್ಪಾದನೆ 147309 ಯೂನಿಟ್ ಗಳಾಗಿತ್ತು. ಟಿವಿಎಸ್ iQube ಪ್ರಸ್ತುತ ಹಣಕಾಸು ವರ್ಷದ ಮೊದಲ ಮೂರೂ ತಿಂಗಳಲ್ಲಿ 38602 ಯೂನಿಟ್ ಮಾರಾಟವನ್ನು ನೋಂದಾಯಿಸಿದೆ. ಇದು 2022 ರ ಏಪ್ರಿಲ್-ಜೂನ್ ನಲ್ಲಿ 8724 ಯೂನಿಟ್ ಗಳ ಮಾರಾಟಕ್ಕಿಂತ 342 % ಹೆಚ್ಚಾಗಿದೆ. ಏಪ್ರಿಲ್ 2023 ರಲ್ಲಿ 6227 ಯೂನಿಟ್ ಗಳು, ಮೇ 2023 ರಲ್ಲಿ 17913 ಯೂನಿಟ್ ಗಳು ಹಾಗೂ ಜೂನ್ 2023 ರಲ್ಲಿ 14462 ಯೂನಿಟ್ ಗಳ ಮಾರಾಟ ಕಂಡುಬಂದಿದೆ.
145 ಕಿಲೋ ಮೀಟರ್ ಮೈಲೇಜ್ ನೀಡಲಿದೆ ಈ ಸ್ಕೂಟರ್
ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮೂರೂ ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ. ಸ್ಟ್ಯಾಂಡರ್ಡ್, S ಮತ್ತು ST ರೂಪಾಂತರದಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 3 .04 ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ನ ಮೂರೂ ರೂಪಾಂತರಗಳು ಸರಾಸರಿ 100 ರಿಂದ 145 ಕಿಲೋಮೀಟರ್ ಮೈಲೇಜ್ ನೀಡಲಿದೆ.