TVS Jupiter 125: 57 Km ಮೈಲೇಜ್ ಕೊಡುವ ಈ TVS ಸ್ಕೂಟರ್ ಗೆ ಹೆಚ್ಚಾಗಿದೆ ಬೇಡಿಕೆ, ಆಕರ್ಷಕ ಸ್ಮಾರ್ಟ್ ಫೀಚರ್

1 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಖರೀದಿಸಿ ಈ ಸ್ಕೂಟರ್

TVS Jupiter 125 Scooter Price And Feature: ಮಾರುಕಟ್ಟೆಯಲ್ಲಿ ಸ್ಕೂಟರ್ ಗಳಿಗೆ ಕೂಡ ಹೆಚ್ಚಿನ ಬೇಡಿಕೆ ಇದೆ. ಯುವತಿಯರ ಜೊತೆಗೆ ಈಗ ಯುವಕರು ಕೂಡ ಸ್ಕೂಟರ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಸ್ಕೂಟರ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಇನ್ನು ಸ್ಕೂಟರ್ ಖರೀದಿಸುವಾಗ ಜನರು ಹೆಚ್ಚಾಗಿ ಬೆಜೆಟ್ ಬಗ್ಗೆ ಗಮನ ಹರಿಸುತ್ತಾರೆ. ತಮ್ಮ ಬಜೆಟ್ ಗೆ ಸರಿಹೊಂದುವಂತಹ ಸ್ಕೂಟರ್ ಯಾವುದಿದೆ ಎನ್ನುವ ಬಗ್ಗೆ ಹುಡುಕುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಸ್ಕೂಟರ್ ನ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

TVS Jupiter 125 Scooter Price In India
Image Credit: Bikewale

1 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಖರೀದಿಸಿ ಈ ಸ್ಕೂಟರ್
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ TVS Jupiter 125 ಸ್ಕೂಟರ್ SmartXonnect ಫೀಚರ್ ನೊಂದಿಗೆ ಪರಿಚಯವಾಗಿದೆ. ಕಂಪನಿಯು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಹೊಸ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಯಲ್ಲಿ Honda Activa 125 ಮತ್ತು Suzuki Access 125 ಸ್ಕೂಟರ್ ಗಳ ಜೊತೆ ನೇರ ಸ್ಪರ್ಧೆಗೆ ಇಳಿಯಲಿದೆ. ಬೆಸ್ಟ್ ಮೈಲೇಜ್ ನೀಡುವ ಸ್ಕೂಟರ್ ಗಳ ಪಟ್ಟಿಯಲ್ಲಿ TVS Jupiter 125 ಸ್ಕೂಟರ್ ಮೊದಲಿದೆ ಎನ್ನಬಹುದು.

ಇನ್ನು TVS Jupiter 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ 86,405 ರಿಂದ 96,855 ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಕೂಟರ್ ನ ವಿಶೇಷವೆಂದರೆ SmartXonnect ಫೀಚರ್ ನ ಸಹಾಯದೊಂದಿಗೆ ಈ ಸ್ಕೂಟರ್ ಅನ್ನು ಸುಲಭವಾಗಿ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಕಾಲ್, ಮೆಸ್ಸೇಜ್, ಸೇರಿದಂತೆ ಯಾವುದೇ ನೋಟಿಫಿಕೇಶನ್ ನಿಮ್ಮ ಮೊಬೈಲ್ ಗೆ ಬಂದರು ಈ ಸ್ಕೂಟರ್ ತನ್ನ ಡಿಸ್ಪ್ಲೇ ಮೂಲಕ ತೋರಿಸುತ್ತದೆ.

TVS Jupiter 125 Scooter Price And Features
Image Credit: Bikewale

ಸ್ಮಾರ್ಟ್ ಫೀಚರ್ ಇರುವ ಈ ಸ್ಕೂಟರ್ ನೀಡುತ್ತೆ 57km ಮೈಲೇಜ್
ಇನ್ನು ನೂತನ TVS Jupiter 125 ಸ್ಕೂಟರ್ ನಲ್ಲಿ 124 .8CC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8.04 BHP ಗರಿಷ್ಟ ಪವರ್ ಹಾಗೂ 10 .5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 57 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಟಿವಿಎಸ್ ಜೂಪಿಟರ್ 125 ಸ್ಕೂಟರ್ ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೆಲ್ಮೆಟ್‌ ಗಳು ಮತ್ತು ಲ್ಯಾಪ್‌ ಟಾಪ್‌ ಗಳಂತಹ ವಸ್ತುಗಳನ್ನು ಸುಲಭವಾಗಿ ಸಾಗಿಸಲು 33-ಲೀಟರ್ ಅಡಿಯಲ್ಲಿ ಸೀಟ್ ಸ್ಟೋರೇಜ್ ಅನ್ನು ಹೊಂದಿದೆ.

Join Nadunudi News WhatsApp Group

TVS Jupiter 125 Scooter Price And Mileage
Image Credit: Bikewale

Join Nadunudi News WhatsApp Group