TVS Scooter: 50 Km ಮೈಲೇಜ್ ಮತ್ತು ಅತ್ಯಂತ ಕಡಿಮೆ ಬೆಲೆ, ಬಡವರಿಗಾಗಿ ಬಂತು ಇನ್ನೊಂದು ಸ್ಮಾರ್ಟ್ ಸ್ಕೂಟರ್.
ಬಜೆಟ್ ಬೆಲೆಗೆ TVS ನ ನೂತನ ಮಾದರಿಯ ಸ್ಕೂಟರ್.
TVS Jupiter 125 Smart Scooter: ಭಾರತೀಯ ಆಟೋ ವಲಯದಲ್ಲಿ TVS Motors ಕಂಪನಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಮಾದರಿಯ ಬೈಕ್, ಸ್ಕೂಟರ್ ಗಳನ್ನೂ ಪರಿಚಯಿಸುವ ಮೂಲಕ TVS ತನ್ನ ಜನಪ್ರಿಯತೆಯನ್ನು ದಿನದಿಂದಾ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಸಾಕಷ್ಟು ಸ್ಕೂಟರ್ ಗಳು ಲಭ್ಯವಿದೆ.
ಇದೀಗ ಕಂಪನಿಯು ಸ್ಮಾರ್ಟ್ ಕನೆಕ್ಟ್ ಫೀಚರ್ ನೊಂದಿಗೆ ಹೊಸ ಮಾದರಿಯ ಸ್ಕೂಟರ್ ಅನ್ನು ಪರಿಚಯಿಸಿದೆ. ಬಜೆಟ್ ಬೆಲೆಯಲ್ಲಿ ಸ್ಕೂಟರ್ ಅನ್ನು ಹುಡುಕುತ್ತಿರುವವರಿಗೆ ಈ ಸ್ಕೂಟರ್ ಉತ್ತಮ ಆಯ್ಕೆ ಎನ್ನಬಹುದು. TVS ನ ನೂತನ ಮಾದರಿಯ ಸ್ಕೂಟರ್ ಯಾವುದು…? ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಲ್ಲಿ ಲಭ್ಯವಾಗಲಿದೆ…? ಎನ್ನುವ ಬಗ್ಗೆ ವಿವರ ಇಲ್ಲಿದೆ.
TVS Jupiter 125
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ TVS Jupiter 125 ಸ್ಕೂಟರ್ SmartXonnect ಫೀಚರ್ ನೊಂದಿಗೆ ಪರಿಚಯವಾಗಿದೆ. ಕಂಪನಿಯು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಹೊಸ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಯಲ್ಲಿ Honda Activa 125 and Suzuki Access 125 ಸ್ಕೂಟರ್ ಗಳ ಜೊತೆ ನೇರ ಸ್ಪರ್ಧೆಗೆ ಇಳಿಯಲಿದೆ. ಸದ್ಯ ದಸರಾ ಹಬ್ಬದ ಸಂಭ್ರಮ ಹೆಚ್ಚುತ್ತಿದ್ದ ಹಿನ್ನಲೆ ಕಂಪನಿಯು ಆಕರ್ಷಕ ಬೆಲೆಯೊಂದಿಗೆ ತನ್ನ TVS Jupiter 125 SmartXonnect ಸ್ಕೂಟರ್ ಅನ್ನು ಪರಿಚಯಿಸಿದೆ.
TVS Jupiter 125 ಮಾರುಕಟ್ಟೆಯ ಬೆಲೆ ಎಷ್ಟು…?
TVS Jupiter 125 SmartXonnect ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ 96,855 ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಸ್ಕೂಟರ್ ನ ವಿಶೇಷವೆಂದರೆ SmartXonnect ಫೀಚರ್ ನ ಸಹಾಯದೊಂದಿಗೆ ಈ ಸ್ಕೂಟರ್ ಅನ್ನು ಸುಲಭವಾಗಿ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಕಾಲ್, ಮೆಸ್ಸೇಜ್, ಸೇರಿದಂತೆ ಯಾವುದೇ ನೋಟಿಫಿಕೇಶನ್ ನಿಮ್ಮ ಮೊಬೈಲ್ ಗೆ ಬಂದರು ಈ ಸ್ಕೂಟರ್ ತನ್ನಾ ಡಿಸ್ಪ್ಲೇ ಮೂಲಕ ತೋರಿಸುತ್ತದೆ.
SmartXonnect ಫೀಚರ್ ಹೊಂದಿರುವ ಈ ಸ್ಕೂಟರ್ ನ ಮೈಲೇಜ್ ಎಷ್ಟಿದೆ..?
ಇನ್ನು ನೂತನ TVS Jupiter 125 ಸ್ಕೂಟರ್ ನಲ್ಲಿ 124 .8CC ಎಂಜಿನ್ ಅಣು ಅಳವಡಿಸಲಾಗಿದೆ. ಈ ಎಂಜಿನ್ 8.04 BHP ಗರಿಷ್ಟ ಪವರ್ ಹಾಗೂ 10 .5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಮಾರುಕಟ್ಟೆಯಲ್ಲಿ ಈ TVS Jupiter 125 ಸ್ಕೂಟರ್ ಎರಡು ಬಣಗಳ ಆಯ್ಕೆಯಲ್ಲಿ ಲಭ್ಯವಿದೆ.