TVS Bike: ಒಂದು ಲಕ್ಷಕ್ಕೆ ಮನೆಗೆ ತನ್ನಿ 67 Km ಮೈಲೇಜ್ ಕೊಡುವ ಯುವಕರ ನೆಚ್ಚಿನ ಈ ಬೈಕ್, ಆಫರ್ ಮತ್ತೆ ಸಿಗಲ್ಲ.

ಕೇವಲ 1 ಲಕ್ಷದಲ್ಲಿ 67 ಕಿಲೋಮೀಟರ್ ಮೈಲೇಜ್ ನೀಡುವ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಿ.

TVS Raider 125: ಮಾರುಕಟ್ಟೆಯಲ್ಲಿ ಬೈಕ್ ಗಳ ಸಂಖ್ಯೆ ಹೆಚ್ಚುತ್ತಿದ್ದು ಹೊಸ ಮಾದರಿಯ ಬೈಕ್ ಗಳು ಯುವಕರನ್ನು ಸೆಳೆಯುತ್ತಿದೆ. ಹೆಚ್ಚಾಗಿ ಯುವಕರು ಬೈಕ್ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುತ್ತಾರೆ. ಮಾರುಕಟ್ಟೆಗೆ ಹೊಸ ಮಾದರಿಯ ಬೈಕ್ ಬಿಡುಗಡೆಯಾದ ಕೂಡಲೇ ಖರೀದಿಯತ್ತ ಗಮನ ಹರಿಸುತ್ತಾರೆ. ಇನ್ನು ಇತ್ತೀಚಿಗೆ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಿತ್ತಿದೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಟಿವಿಎಸ್ ಮೋಟಾರ್ (TVS Motor) ಕಂಪನಿಯ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವಿಭಿನ್ನ ಕಂಪನಿಗಳು ನೂತನ ಮಾದರಿಯ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಈಗಾಗಲೇ ಹೋಂಡಾ, ಹೀರೋ, ಸೇರಿದಂತೆ ಇನ್ನಿತರ ಕಂಪನಿಗಳು ನೂತನ ವಿನ್ಯಾಸದ ಬೈಕ್ ಗಳನ್ನು ಪರಿಚಯಿಸುತ್ತಿವೆ. ಇದೀಗ ಎಲ್ಲ ಮಾದರಿಯ ಬೈಕ್ ಗಳಿಗೆ ಸ್ಪರ್ಧೆ ನೀಡಲು ಟಿವಿಎಸ್ ಹೊಸ ಬೈಕ್ ಅನ್ನು ಪರಿಚಯಿಸಲಿದೆ.

A bike that gives a mileage of 67 km for just 1 lakh
Image Credit: Timesbull

ಟಿವಿಎಸ್ ರೈಡರ್ 125 SmartXonnect ಬೈಕ್ ಬಿಡುಗಡೆ (TVS Raider 125 Bike) 
ಟಿವಿಎಸ್ ರೈಡರ್ 125 ಬೈಕ್ ಹೊಸ ಸ್ಮಾರ್ಟ್‌ಕ್ಸೋನೆಕ್ಟ್ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯ ಬೈಕ್ TVS Raider 125 Smartxonnect ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ ಮೂರು-ವಾಲ್ವ್ ಎಂಜಿನ್ ಹೊಂದಿದೆ. ಈ ಬೈಕ್ 124.8cc ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, 7,500rpm ನಲ್ಲಿ 11.2bhp ಗರಿಷ್ಟ ಪವರ್ ಜೊತೆಗೆ 6,000 rpm ನಲ್ಲಿ 11.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

TVS 125 SmartXonnect ಬೈಕ್ ಬೆಲೆ ಮತ್ತು ಮೈಲೇಜ್
ಇನ್ನು TVS ರೈಡರ್ ಮೈಲೇಜ್ ಬಗ್ಗೆ ಹೇಳುವುದಾದರೆ, ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 67 ಕೀ ಮೀ ಮೈಲೇಜ್ ಕೊಡುತ್ತದೆ. TVS ರೈಡರ್ ಆರಂಭಿಕ ಬೆಲೆ ಸುಮಾರು 1 ಲಕ್ಷ ರೂ. ಆಗಿದೆ. ಮಾರುಕಟ್ಟೆಯಲ್ಲಿ ಸದ್ಯ ಬಹಳ ಸೇಲ್ ಆಗುತ್ತಿರುವ ಬೈಕ್ ನ ಪಟ್ಟಿಯಲ್ಲಿ ಈ ಬೈಕ್ ಕೂಡ ಸೇರಿಕೊಂಡಿದೆ. ಈ ಬೈಕ್ ನ ವಿಭಿನ್ನ ಲುಕ್ ಹೆಚ್ಚಾಗಿ ಯುವಕರನ್ನು ಆಕರ್ಷಿಸಲಿದೆ. ಕೇವಲ 1 ಲಕ್ಷದಲ್ಲಿ 67 KM ಮೈಲೇಜ್ ನೀಡುವ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುಡಗಿದೆ.

Join Nadunudi News WhatsApp Group

TVS Rider 125 SmartXonnect bike launched
Image Credit: Betulupdate

ಟಿವಿಎಸ್ ರೈಡರ್ 125 ಬೈಕ್ ನ ವಿಶೇಷತೆ
ಈ ಬೈಕ್ ನಲ್ಲಿ ಬಲಿಷ್ಠ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. ಇದು 5 ಇಂಚಿನ TFT ಪರದೆಯನ್ನು ಹೊಂದಿದ್ದು ಅದನ್ನು ಸ್ಮಾರ್ಟ್ ಕನೆಕ್ಟ್‌ಗೆ ಸಂಪರ್ಕಿಸಲಾಗಿದೆ. ಈ ಸ್ಮಾರ್ಟ್ ಕನೆಕ್ಟ್ ಅನ್ನು ಬಳಸಿಕೊಂಡು ಕರೆಗಳು, SMS, ಅಧಿಸೂಚನೆಗಳು, ಹವಾಮಾನ ನವೀಕರಣಗಳು, ಟರ್ನ್ ಬೈ ಟರ್ನ್ ನ್ಯಾವಿಗೇಶನ್ ನಂತಹ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ. ಇಂಧನ ಟ್ಯಾಂಕರ್ ಬಳಿ ಚಾರ್ಜರ್ ಪಾಯಿಂಟ್ ಅನ್ನು ನೀಡಿದ್ದು ಗ್ರಾಹಕರು ಹಲವು ಬಣ್ಣಗಳ ಆಯ್ಕೆಯಲ್ಲಿ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group