TVS: ಕೇವಲ 1900 ರೂಪಾಯಿ ಕೊಟ್ಟು ಮನೆಗೆ ತನ್ನಿ ಹೊಸ tvs ಬೈಕ್, 56 ಕಿಲೋ ಮೀಟರ್ ಮೈಲೇಜ್.

ಜನರು ಕಡಿಮೆ ಡೌನ್ ಪೇಮೆಂಟ್ ಮಾಡುವುದರ ಮೂಲಕ ಹೊಸ tvs ಬೈಕ್ ಖರೀದಿ ಮಾಡಬಹುದು.

TVS 125 Bike: ಹೊಸ ಮಾದರಿಯ ಬೈಕ್ ಗಳು ಯುವಕರನ್ನು ಸೆಳೆಯುತ್ತಿದೆ. ಹೆಚ್ಚಾಗಿ ಯುವಕರು ಬೈಕ್ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುತ್ತಾರೆ. ಮಾರುಕಟ್ಟೆಗೆ ಹೊಸ ಮಾದರಿಯ ಬೈಕ್ ಬಿಡುಗಡೆಯಾದ ಕೂಡಲೇ ಖರೀದಿಯತ್ತ ಗಮನ ಹರಿಸುತ್ತಾರೆ. ಇನ್ನು ಇತ್ತೀಚಿಗೆ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಿತ್ತಿವೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಟಿವಿಎಸ್ ಮೋಟಾರ್ (TVS Motor) ಕಂಪನಿಯ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ವಿವಿಧ ಮಾದರಿಯ ಪೆಟ್ರೋಲ್ ಚಾಲಿತ ವಾಹನಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಟಿವಿರ್ಸ್ ಕಂಪನಿಯ ಬೈಕ್ ಗಳು ಯುವಕರನ್ನು ಹೆಚ್ಚು ಆಕರ್ಷಿಸುತ್ತದೆ.

This bike will be available to the customers at a low price and will give high mileage
Image Credit: Timesnownews

ಇದೀಗ ಟಿವಿಎಸ್ ಮೋಟಾರ್  ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ. ಟಿವಿಎಸ್ ಇದೀಗ ತನ್ನ ಹೊಚ್ಚ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಹೊಚ್ಚ ಹೊಸ ಟಿವಿಎಸ್ ರೈಡರ್ 125 ಬೈಕ್

ಸದ್ಯದಲ್ಲೇ ಟಿವಿಎಸ್ ಮೋಟಾರ್ ನ ಹೊಸ ಮಾದರಿಯ ಬೈಕ್ ಮಾರುಕಟ್ಟೆಗೆ ಬಂದು ಗ್ರಾಹಕರನ್ನು ಸೆಳೆಯಲಿದೆ. ಇದೀಗ ವರದಿಗಳ ಪ್ರಕಾರ ಟಿವಿಎಸ್ ಮೋಟಾರ್ ತನ್ನ ಟಿವಿಎಸ್ ರೈಡರ್ 125 ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಟಿವಿಎಸ್ ರೈಡರ್ 125 ಬೈಕ್ ಹೊಸ ಸ್ಮಾರ್ಟ್‌ಕ್ಸೋನೆಕ್ಟ್ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

Join Nadunudi News WhatsApp Group

New TVS Rider 125 bike price
Image Credit: Bikedekho

ಕಂಪನಿಯ ಬೈಕ್ TVS Raider 125 Smartxonnect ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ ಮೂರು-ವಾಲ್ವ್ ಎಂಜಿನ್ ಹೊಂದಿದೆ. ಈ ಬೈಕ್ 124.8cc ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, 7,500rpm ನಲ್ಲಿ 11.2bhp ಗರಿಷ್ಟ ಪವರ್ ಜೊತೆಗೆ 6,000 rpm ನಲ್ಲಿ 11.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ ಹೆಚ್ಚು ಮೈಲೇಜ್ ನೀಡಲಿರುವ ಈ ಬೈಕ್
ಇನ್ನು TVS ರೈಡರ್ ಮೈಲೇಜ್ ವಿಷಯಕ್ಕೆ ಬರುವುದಾದರೆ, ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 56.7 kmpl ಮೈಲೇಜ್ ಕೊಡುತ್ತದೆ. TVS ರೈಡರ್ ಆರಂಭಿಕ ಬೆಲೆ ಸುಮಾರು 94.62 ರಿಂದ 1.01 ಲಕ್ಷ ನಿಗದಿಪಡಿಸಲಾಗಿದೆ. ಈ ಬೈಕ್ ನಲ್ಲಿ ಬಲಿಷ್ಠ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. ಇದು 5 ಇಂಚಿನ TFT ಪರದೆಯನ್ನು ಹೊಂದಿದ್ದು ಅದನ್ನು ಸ್ಮಾರ್ಟ್ ಕನೆಕ್ಟ್‌ಗೆ ಸಂಪರ್ಕಿಸಲಾಗಿದೆ.

This bike will be available to the customers at a low price and will give high mileage
Image Credit: Buy2hands

ಕೇವಲ 1,900 ನಲ್ಲಿ ಖರೀದಿಸಬಹುದಾದ ಬೈಕ್
ಇನ್ನು ಟಿವಿಎಸ್ ರೈಡರ್ 125 ಬೈಕ್ ನಲ್ಲಿ ಅಳವಡಿಸಲಾದ ಸ್ಮಾರ್ಟ್ ಕನೆಕ್ಟ್ ಫೀಚರ್ ಅನ್ನು ಬಳಸಿಕೊಂಡು ಕರೆಗಳು, SMS , ಅಧಿಸೂಚನೆಗಳು, ಹವಾಮಾನ ನವೀಕರಣಗಳು, ಟರ್ನ್ ಬೈ ಟರ್ನ್ ನ್ಯಾವಿಗೇಶನ್ ನಂತಹ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ.

ಇನ್ನು ಈ ಬೈಕ್ ನ ಬೆಲೆ ನಿಮಗೆ ಅಧಿಕವೆನಿಸಿದರೆ ಕಂಪನಿಯು ನಿಮಗೆ EMI ಆಯ್ಕೆಯನ್ನು ನೀಡಲಿದೆ. EMI ಆಧಾರದ ಮೇಲೆ ಈ ಬೈಕ್ ಅನ್ನು ಮಾಸಿಕ 1900 ಪಾವತಿಸುವ ಮೂಲಕ ನೀವು ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group