TVS: ಕಡಿಮೆ EMI ನಲ್ಲಿ ಮನೆಗೆ ತನ್ನಿ 67 ಕಿಲೋ ಮೀಟರ್ ಮೈಲೇಜ್ ಕೊಡುವ TVS ಬೈಕ್, ಭರ್ಜರಿ ಬುಕಿಂಗ್ ಆರಂಭ.

67 ಕಿಲೋಮೀಟರ್ ಮೈಲೇಜ್ ನೀಡುವ TVS ಬೈಕ್ ಅನ್ನು ಕಡಿಮೆ EMI ನ ಮೂಲಕ ನಿಮ್ಮದಾಗಿಸಿಕೊಳ್ಳಬಹುದು.

TVS Raider: ಟಿವಿಎಸ್ ಮೋಟಾರ್ (TVS Motor) ನ ಹೊಸ ಮಾದರಿಯ ಬೈಕ್ ಮಾರುಕಟ್ಟೆಗೆ ಬಂದು ಗ್ರಾಹಕರನ್ನು ಸೆಳೆಯಲಿದೆ. ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬೇಡಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಿ ತನ್ನ ಮಾರಾಟವನ್ನು ಕೂಡ ಹೆಚ್ಚಿಸಿಕೊಂಡಿದೆ.

ಇದೀಗ ವರದಿಗಳ ಪ್ರಕಾರ ಟಿವಿಎಸ್ ಮೋಟಾರ್ ತನ್ನ ಟಿವಿಎಸ್ ರೈಡರ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಕಡಿಮೆ EMI ನ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳಬಹುದಾಗಿದೆ.

A TVS bike that gives a mileage of 67 km
Image Credit: Bikekhoj

ಟಿವಿಎಸ್ ರೈಡರ್ ಬೈಕ್ (TVS Raider) 
ಟಿವಿಎಸ್ ರೈಡರ್ ಬೈಕ್ ಹೊಸ ಸ್ಮಾರ್ಟ್‌ಕ್ಸೋನೆಕ್ಟ್ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ 124.8cc ಏರ್ ಮತ್ತು ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7,500rpm ನಲ್ಲಿ 11.2bhp ಗರಿಷ್ಟ ಪವರ್ ಜೊತೆಗೆ 6,000 rpm ನಲ್ಲಿ 11.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಉತ್ತಮ ಸುರಕ್ಷತೆಗಾಗಿ ಕಂಪನಿಯು ಟಿವಿಎಸ್ ರೈಡರ್ ಬೈಕ್‌ನಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಮ್ ಅನ್ನು ಬಳಸಿದೆ. ನೀವು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ಪಡೆಯಬಹುದು.

A TVS bike that gives a mileage of 67 km
Image Credit: Gaadify

TVS ರೈಡರ್ ಬೆಲೆ ಮತ್ತು ಮೈಲೇಜ್
ಇನ್ನು TVS ರೈಡರ್ ಮೈಲೇಜ್ ವಿಷಯಕ್ಕೆ ಬರುವುದಾದರೆ, ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 67 ಕೀ ಮೀ ಮೈಲೇಜ್ ಕೊಡಲಿದೆ. TVS ರೈಡರ್ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 86,803 ರಿಂದ 1 ಲಕ್ಷ ಹಣವನ್ನು ನಿಗದಿಪಡಿಸಲಾಗಿದೆ.

Join Nadunudi News WhatsApp Group

TVS ರೈಡರ್ ಗ್ರಾಹಕರಿಗೆ ನಾಲ್ಕು ರೂಪಾಂತರಗಳಲ್ಲಿ ಲಭ್ಯವಾಗಲಿದೆ.ಈ ಬೈಕ್ ಗ್ರಾಹಕರನ್ನು ಸೆಳೆಯಲಿದ್ದು ಭರ್ಜರಿಯಾಗಿ ಬುಕ್ಕಿಂಗ್ ಆರಂಭಗೊಂಡಿದೆ.

ಟಿವಿಎಸ್ ರೈಡರ್ ಬೈಕ್ ನ ವಿಶೇಷತೆ
ಈ ಬೈಕ್ ನಲ್ಲಿ ಬಲಿಷ್ಠ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. ಇದು 5 ಇಂಚಿನ TFT ಪರದೆಯನ್ನು ಹೊಂದಿದ್ದು ಅದನ್ನು ಸ್ಮಾರ್ಟ್ ಕನೆಕ್ಟ್‌ಗೆ ಸಂಪರ್ಕಿಸಲಾಗಿದೆ. ಈ ಸ್ಮಾರ್ಟ್ ಕನೆಕ್ಟ್ ಅನ್ನು ಬಳಸಿಕೊಂಡು ಕರೆಗಳು, SMS , ಅಧಿಸೂಚನೆಗಳು, ಹವಾಮಾನ ನವೀಕರಣಗಳು, ಟರ್ನ್ ಬೈ ಟರ್ನ್ ನ್ಯಾವಿಗೇಶನ್ ನಂತಹ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ.

Join Nadunudi News WhatsApp Group