Ads By Google

TVS Rider: ಈಗ ಲಕ್ಷ ಕೊಡುವ ಅಗತ್ಯ ಇಲ್ಲ, ಕೇವಲ 11 ಸಾವಿರಕ್ಕೆ ಮನೆಗೆ ತನ್ನಿ TVS ಬೈಕ್.

TVS raider bike best offer

Image Credit: Original Source

Ads By Google

TVS Rider EMI Details: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಬೈಕ್ ಗಳು ಲಾಂಚ್ ಆಗುತ್ತಿವೆ. ಇನ್ನು TVS ಕಂಪನಿಯು ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಅನೇಕ ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಬೈಕ್ ಗಳಷ್ಟೇ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದಿವೆ.

ಇನ್ನು ಕಡಿಮೆ ಬಜೆಟ್ ಹೊಂದಿರುವವರು ಸೆಕೆಂಡ್ ಹ್ಯಾಂಡ್ ಮಾದರಿಯ ಬದಲಾಗಿ ಡೌನ್ ಪೇಮೆಂಟ್ ನೊಂದಿಗೆ ಹೊಸ ಬೈಕ್ ಅನ್ನು ಕೂಡ ಖರೀದಿಸುವ ಅವಕಾಶವನ್ನು ಕಂಪನಿಯು ನೀಡುತ್ತಿದೆ. ಸದ್ಯ ಟಿವಿಎಸ್ ಕಂಪನಿಯು ತನ್ನ TVS Rider ಮಾಡೆಲ್ ನ ಖರೀದಿಯಲ್ಲಿ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ನೀವು ಇಷ್ಟು ಮಾಸಿಕ EMI ಪಾವತಿಸುವ ಮೂಲಕ TVS ರೈಡರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: Indiatimes

ಈಗ ಲಕ್ಷ ಕೊಡುವ ಅಗತ್ಯ ಇಲ್ಲ
ಟಿವಿಎಸ್ ರೈಡರ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರಯಾಣಿಕ ವಿಭಾಗದ ಬೈಕ್ ಆಗಿದೆ. ಈ ಬೈಕಿನ ವಿನ್ಯಾಸವು ಸ್ಪೋರ್ಟಿಯಾಗಿದ್ದು, ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಕಂಪನಿಯು ಈ ಬೈಕ್‌ ನ ಸ್ಟ್ಯಾಂಡರ್ಡ್ ಮಾಡೆಲ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಆರಂಭಿಕ ಎಕ್ಸ್ ಶೋ ರೂಂ ಬೆಲೆ 96,219 ರೂ. ನಿಗದಿಯಾಗಿದೆ.

ಇನ್ನು ಈ ಬೈಕ್ ಆನ್ ರೋಡ್ ಬೆಲೆ 1,10,509 ರೂ. ಆಗುತ್ತದೆ. ನೀವು ಈ ಬೈಕು ಖರೀದಿಸಲು ಬಯಸಿದರೆ, ಬಜೆಟ್ ನ ಬಗ್ಗೆ ಚಿಂತಿಸುವ ಗತ್ಯ ಇಲ್ಲ. ಈ ಬೈಕ್ ಅನ್ನು ನೀವು ಹಣಕಾಸು ಯೋಜನೆಯಡಿಯೂ ಖರೀದಿಸಬಹುದು. ಹಣಕಾಸಿನ ಯೋಜನೆಯೊಂದಿಗೆ, ನೀವು ಈ ಬೈಕನ್ನು ರೂ. 11,000 ಡೌನ್ ಪೇಮೆಂಟ್ ನಲ್ಲಿ ಖರೀದಿಸಬಹುದು.

Image Credit: Bikedekho

ಕೇವಲ 11 ಸಾವಿರಕ್ಕೆ ಮನೆಗೆ ತನ್ನಿ TVS ಬೈಕ್
ಕಂಪನಿಯ ಸ್ಪೋರ್ಟಿ ಲುಕಿಂಗ್ ಬೈಕ್ ಟಿವಿಎಸ್ ರೈಡರ್ ಖರೀದಿಸಲು ಬ್ಯಾಂಕ್ ರೂ. 99,509 ಸಾಲ ನೀಡುತ್ತದೆ. ಈ ಸಾಲವನ್ನು 3 ವರ್ಷಗಳ ಅವಧಿಗೆ ಅಂದರೆ 36 ತಿಂಗಳ ಅವಧಿಗೆ ಮತ್ತು ವಾರ್ಷಿಕ ಶೇ.9.7 ಬಡ್ಡಿದರದಲ್ಲಿ ನೀಡಲಾಗುತ್ತದೆ. ನೀವು ಕಂಪನಿಗೆ ಡೌನ್ ಪೇಮೆಂಟ್ ಆಗಿ 11,000 ರೂಪಾಯಿ ಪಾವತಿಸಿ ಈ ಬೈಕ್ ಖರೀದಿಸಬಹುದು. ನೀವು ಪ್ರತಿ ತಿಂಗಳು 3,197 ರೂಪಾಯಿಗಳನ್ನು EMI ಆಗಿ ಪಾವತಿಸುವ ಮೂಲಕ ಬ್ಯಾಂಕ್‌ ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.

ಟಿವಿಎಸ್ ರೈಡರ್ ಸ್ಪೋರ್ಟಿ ಲುಕ್ ಹೊಂದಿರುವ ಉತ್ತಮ ಬೈಕ್ ಆಗಿದೆ. ಇದರಲ್ಲಿ ನೀವು 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತೀರಿ. ಈ ಎಂಜಿನ್ ಗರಿಷ್ಠ 11.38 Ps ಮತ್ತು 11.2 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ ಮತ್ತು ಪ್ರತಿ ಲೀಟರ್ ಗೆ 67 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Image Credit: Bikedekho
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in