TVS Ronin: ಈ TVS ಬೈಕ್ ಮುಂದೆ ಬುಲೆಟ್ ತನ್ನ ಬೇಡಿಕೆ ಕಳೆದುಕೊಳ್ಳುತ್ತಿದೆ, ಕಡಿಮೆ ಬೆಲೆ ಮತ್ತು ಆಕರ್ಷಕ ಲುಕ್.
ಬುಲೆಟ್ ಬೈಕಿಗೆ ಪೈಪೋಟಿ ಕೊಡಲು ಇನ್ನೊಂದು ಬೈಕ್ ಲಾಂಚ್ ಮಾಡಿದ TVS.
TVS Ronin 225 Bike: ಸದ್ಯ ಎಲ್ಲೆಡೆ ಜನರು ದೀಪಾವಳಿ ಹಬ್ಬದ ಸಡಗರಕ್ಕಾಗಿ ಕಾಯುತ್ತಿದ್ದಾರೆ. ಇನ್ನು ದೀಪಾವಳಿ ವಿಶೇಷಕ್ಕೆ ವಸ್ತುಗಳ ಖರೀದಿಗೆ ಆಕರ್ಷಕ ರಿಯಾಯಿತಿ ಲಭ್ಯವಾಗುತ್ತಿದೆ. ಸದ್ಯ ದೀಪಾವಳಿ ಹಬ್ಬದ ವಿಶೇಷಕ್ಕೆ ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ TVS ಇದೀಗ ನೂತನ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯದಲ್ಲೇ TVS ನ ಹೊಸ ಆವೃತ್ತಿ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಸದ್ಯ TVS Motor ಬಿಡುಗಡೆ ಮಾಡಿರುವ ಹೊಸ ಬೈಕ್ ನ ಬಗ್ಗೆ ಮಾಹಿತಿ ತಿಳಿಯೋಣ.
TVS Ronin 225 Bike
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಶಕ್ತಿಶಾಲಿ ಬೈಕ್ TVS Ronin 225 ನ ಹೊಸ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. TVS ನ ನೂತನ ಮಾದರಿಯ ಇದೀಗ ಮಾರುಕಟ್ಟೆಯಲ್ಲಿ ಟಾಪ್ ಮಾಡೆಲ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.
TVS ನ ಈ ಹೊಸ ಬೈಕ್ ನಲ್ಲಿ ಟ್ರಿಪಲ್ ಟೋನ್ ನಿಂಬಸ್ ಗ್ರೇ ಬಣ್ಣ ಹಾಗೆಯೆ ಬಿಳಿ ಬಣ್ಣದೊಂದಿಗೆ ಬೂದು ಬಣ್ಣದ ಆಯ್ಕೆಯನ್ನು ಕಾಣಬಹುದು. ಮತ್ತು ಹೊಸ ಗ್ರಾಫಿಕ್ಸ್ ಅನ್ನು ಸಹ ಕಾಣಬಹುದು. ನೂತನ TVS Ronin 225 Bike ನಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ಕೂಡ ಅಳವಡಿಸಲಾಗಿದೆ. ಇನ್ನು ಈ ನೂತನ ಮಾದರಿ ಎಷ್ಟು ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ನೋಡೋಣ.
TVS Ronin 225 Bike ನ ಬೆಲೆ ಎಷ್ಟಿದೆ..?
TVS ನ ನೂತನ Ronin 225 ಬೈಕ್ ನಲ್ಲಿ 225.9cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 7,750 rpm ನಲ್ಲಿ 20.4 PS ಮತ್ತು 3,750 rpm ನಲ್ಲಿ 19.93 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಗೆ ಸಂಪರ್ಕ ಹೊಂದಿದ್ದು, ಕಂಪನಿಯು ಮೈಲೇಜ್ ಬಗ್ಗೆ ಇನ್ನೂ ಮಾಹಿತಿ ಬಹಿರಂಗಪಡಿಸಿಲ್ಲ. ಈನು ನೂತನ TVS Ronin 225 Bike ನ ಮಾರುಕಟ್ಟೆಯ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ 1.73 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಬಿಡುಗಡೆಯಾಗಲಿದೆ.
TVS Ronin 225 Bike Feature
*Visor
*FI Cover
*USD Front Forks
*Disc Brake
*ABS
*USB Charger
*17 Inch Alloy Wheels
*Tubeless Tires
*LED Turn Indicator
*Full LED Round Headlamp