Twitter Blue Tick: ನಟ ನಟಿಯರಿಗೆ ಶಾಕ್ ಕೊಟ್ಟ ಟ್ವಿಟ್ಟರ್, ಸೆಲೆಬ್ರಿಟಿಗಳಿಗೆ ಹೊಸ ನಿಯಮ ತಂದ ಮಸ್ಕ್.

ಬ್ಲೂ ಟಿಕ್ ವಿಷಯವಾಗಿ ಸೆಲೆಬ್ರಿಟಿಗಳಿಗೆ ಹೊಸ ನಿಯಮ ಜಾರಿಗೆ ತಂದ ಟ್ವಿಟ್ಟರ್.

Twitter Blue Tick: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು (Social Media) ಸಾಕಷ್ಟು ಅಪ್ಡೇಟ್ ಗಳನ್ನೂ ಹೊರತರುತ್ತಿವೆ. ಇನ್ನು ಟ್ವಿಟರ್ ನಲ್ಲಿ ಕೂಡ ಅನೇಕ ನಿಯಮಗಳು ಬದಲಾಗುತ್ತಿವೆ. ಟ್ವಿಟ್ಟರ್ ನಲ್ಲಿ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಬಂದಿದ್ದು,

ಬಳಕೆದಾರರು ಫೀಚರ್ ಗಳ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸೆಲೆಬ್ರೆಟಿಗಳಿಗೆ ಬ್ಲೂಟಿಕ್ (Blue Tick) ನೀಡುವಲ್ಲಿ ಟ್ವಿಟ್ಟರ್ (Twitter) ಇದೀಗ ಹೊಸ ನಿಯಮವನ್ನು ತಂದಿದೆ.

Twitter Blue Tick
Image Source: Oneindia Kannada

ಸೆಲೆಬ್ರೆಟಿಗಳಿಗೆ ಬ್ಲೂಟಿಕ್
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾತೆಯನ್ನು ಗುರುತಿಸಲು ಬ್ಲೂಟಿಕ್ ಸಹಾಯವಾಗುತ್ತದೆ. ಬ್ಲೂಟಿಕ್ ನಿಂದಾಗಿ ಸೆಲೆಬ್ರೆಟಿಗಳ ಖಾತೆಯನ್ನು ಸುಲಭವಾಗಿ ಗುರುತಿಸಬಹುದು. ಹಾಗೆಯೆ ಸೆಲೆಬ್ರೆಟಿಗಳ ಹೆಸರಿನಲ್ಲಿರುವ ನಕಲಿ ಖಾತೆ ಯಾವುದು ಹಾಗು ಅಸಲಿ ಖಾತೆ ಯಾವುದು ಎನ್ನುವುದನ್ನು ಈ ಬ್ಲೂಟಿಕ್ ಗಳ ಮೂಲಕ ಸುಲಭವಾಗಿ ಗುರುತಿಸಬಹುದು.

Twitter Blue Tick
Image Source: Hindusthan Times

ಏಪ್ರಿಲ್ 20 ರಿಂದ ಟ್ವಿಟರ್ ನಲ್ಲಿ ಹೊಸ ನಿಯಮ
ಇದೀಗ ಟ್ವಿಟ್ಟರ್ ನಲ್ಲಿ ಕೆಲವು ಸೆಲೆಬ್ರೆಟಿಗಳ ಬ್ಲೂಟಿಕ್ ಮಾಯವಾಗಿದೆ. ಸೆಲೆಬ್ರೆಟಿಗಳು ಮರಳಿ ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕಾಗಿದೆ. ಬ್ಲೂಟಿಕ್ ಗಾಗಿ ಒಂದು ತಿಂಗಳಿಗೆ 900 ಅಥವಾ ವಾರ್ಷಿಕವಾಗಿ 9,400 ರೂಗಳನ್ನು ಪಾವತಿಸಬೇಕು. ಏಪ್ರಿಲ್ 20 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಸೆಲೆಬ್ರೆಟಿಗಳ ಖಾತೆ ಇದೀಗ ಜನಸಾಮಾನ್ಯರ ಖಾತೆ ರೀತಿ ಆಗಿದೆ.

ಕೆಲವು ಸೆಲೆಬ್ರೆಟಿಗಳ ಬ್ಲೂಟಿಕ್ ಮಾಯಾ
ಸೆಲೆಬ್ರೆಟಿ ಸ್ಟಾರ್ ನಟಿ ನಟಿಯರು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಇರುತ್ತಾರೆ. ಇದೀಗ ಯಶ್, ಅಲ್ಲೂ ಅರ್ಜುನ್, ಅಮಿತಾಬ್ ಬಚ್ಚನ್ ಸೇರಿದಂತೆ ಇನ್ನು ಅನೇಕ ಟ್ವಿಟ್ಟರ್ ಖಾತೆಯ ಬ್ಲೂಟಿಕ್ ಮಾಯಾವಾಗಿದೆ. ಬ್ಲೂಟಿಕ್ ಚಂದಾದಾರರಿಗೆ ವಿವಿಧ ಆಯ್ಕೆಗಳು ಸಿಗಲಿದೆ. ಟ್ವೀಟ್ ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000 ಕ್ಕೆ ಹೆಚ್ಚಿಸುವುದಾಗಿ ಎಲಾನ್ ಮಸ್ಕ್ ಹೇಳಿದ್ದಾರೆ.

Join Nadunudi News WhatsApp Group

Twitter Blue Tick
Image Source: Oneindia Kannada

Join Nadunudi News WhatsApp Group