ಚಿತ್ರರಂಗ ಅನ್ನುವುದು ಕೆಲವರ ಪಾಲಿಗೆ ಅದೃಷ್ಟದ ಮನೆಯಾದರೆ ಇನ್ನೂ ಕೆಲವರ ಪಾಲಿಗೆ ನರಕದ ಮನೆಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕಳೆದ ಎರಡು ವರ್ಷದಲ್ಲಿ ದೇಶದ ಚಿತ್ರರಂಗದ ಅದೆಷ್ಟೋ ಗಣ್ಯ ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಬಹುದು. ಇನ್ನು ನಟ ನಟಿಯರ ಜೊತೆಗೆ ನಿರ್ದೇಶಕ ಮತ್ತು ನಿರ್ಮಾಪಕರು ಕೂಡ ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರಂಗದ ಪಾಲ್ಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಇಡೀ ದೇಶವೇ ಬೇಸರಪಡುವ ಘಟನೆ ನಡೆದಿದ್ದು ಚಿತ್ರರಂಗದಲ್ಲಿ ತನ್ನನ್ನ ತಾನು ಗುರುತಿಸಿಕೊಂಡಿದ್ದ ಖ್ಯಾತ ನಿರ್ದೇಶಕರೊಬ್ಬರ ಮೃತದೇಹ ರಸ್ತೆಯ ಬದಿಯಲ್ಲಿ ಸಿಕ್ಕಿದೆ ಎಂದು ಹೇಳಬಹುದು.
ಸದ್ಯ ಈ ಸುದ್ದಿಯನ್ನ ಕೇಳಿ ಇಡೀ ದೇಶದ ಚಿತ್ರರಂಗದ ಬೇಸರವನ್ನ ವ್ಯಕ್ತಪಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ನಿರ್ದೇಶಕ ಯಾರು ಮತ್ತು ಅವರಿಗೆ ಇಂತಹ ಸ್ಥಿತಿ ಬರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಜನಪ್ರಿಯ ತಮಿಳು ಚಿತ್ರ ನಿರ್ದೇಶಕ ಎಂ.ತ್ಯಾಗರಾಜನ್ ಮೃತದೇಹ ಚೆನ್ನೈನ ರಸ್ತೆ ಬದಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಪ್ರಖ್ಯಾತ ಸಿನಿಮಾ ಸ್ಟುಡಿಯೊ ಎ.ವಿ.ಎಂ ಬಳಿ ಅವರ ಮೃತದೇಹ ಪತ್ತೆಯಾಗಿದ್ದು ಇದು ಇಡೀ ಚಿತ್ರರಂಗಕ್ಕೆ ದೊಡ್ಡ ಶಾಕಿಂಗ್ ಸುದ್ದಿಯಾಗಿ ಪರಿಣಮಿಸಿದೆ ಎಂದು ಹೇಳಬಹುದು.
ಜೀವನದಲ್ಲಿ ಅನೇಕ ಆಸೆಗಳನ್ನ ಹೊಂದಿದ್ದ ಜನಪ್ರಿಯ ನಿರ್ದೇಶಕನಿಗೆ ಬಂದಿರುವ ಇಂತಹ ಪರಿಸ್ಥಿತಿ ಕಂಡು ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದಿದ್ದು ಮೃತ ದೇಹವನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾನಗರ ಕಾವಲ್, ವೆಟ್ರಿವೆಲ್ ವೆಟ್ರಿ ಮುಂತಾದ ಹಿಟ್ ಸಿನಿಮಾಗಳನ್ನು ಎಂ.ತ್ಯಾಗರಾಜನ್ ಅವರು ನಿರ್ದೇಶಿಸಿದ್ದರು. ಕೆಲವು ಚಿತ್ರಗಳನ್ನ ನಿರ್ದೇಶನ ಮಾಡಿದ ಎಂ.ತ್ಯಾಗರಾಜನ್ ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಮತ್ತು ಅವರು ನಿರ್ದೇಶನ ಮಾಡಿದ ಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಓಡದೇ ಅವರಿಗೆ ಅಪಾರವಾದ ನಷ್ಟವಾದವು ಎಂದು ತಿಳಿದು ಬಂದಿದೆ.
ಇನ್ನು ಕೆಲವು ಚಿತ್ರಗಳಲ್ಲಿ ಇವರು ನಟನೆ ಮಾಡಿದರಾದರೂ ಕೂಡ ಆ ಚಿತ್ರಗಳು ಯಶಸ್ಸನ್ನ ಕಾಣಲಿಲ್ಲ. ಜೀವನದಲ್ಲಿ ಬಹಳ ನೋವನ್ನ ಅನುಭವಿಸಿದ ಎಂ.ತ್ಯಾಗರಾಜನ್ ಅವರು ಕಡು ಬಡತನದಲ್ಲಿ ಕುಗ್ಗಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಎಂ.ತ್ಯಾಗರಾಜನ್ ಅವರು ಇಹಲೋಕವನ್ನ ತ್ಯಜಿಸಿದ ವಿಷಯ ತಿಳಿದಿದೆ ತಮಿಳು ನಿರ್ದೇಶಕರ ಸಂಘ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಸ್ನೇಹಿತರೆ ಈ ನಿರ್ದೇಶಕನ ಜೀವನದಲ್ಲಿ ಆದ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.