UDGAM: ಬ್ಯಾಂಕ್ ಖಾತೆ ಹೊಂದಿರುವ ಎಲ್ಲಾ ಜನರಿಗೆ RBI ನಿಂದ ಸಿಹಿಸುದ್ದಿ, ಈಗಲೇ ಕ್ಲೈಮ್ ಮಾಡಿ ನಿಮ್ಮ ಹಣ.
ಈ ಏಳು ಬ್ಯಾಂಕ್ ಗಳಲ್ಲಿ ಕ್ಲೈಮ್ ಮಾಡದ ಠೇವಣಿ ವಿವರಗಳು ಲಭ್ಯವಾಗಲಿದೆ.
UDGAM Portal: ಆರ್ ಬಿಐ (RBI) ಇತ್ತೀಚಿಗೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ದೇಶದ ಎಲ್ಲಾ ಬ್ಯಾಂಕ್ ಗಳು ಆರ್ ಬಿಐ ನಿಯಮಾನುಸಾರ ಬ್ಯಾಂಕ್ ನ ವಹಿವಾಟನ್ನು ಮಾಡಬೇಕಿದೆ. ಆರ್ ಬಿಐ ಇತ್ತೀಚಿನ ಬ್ಯಾಂಕಿನ ವಹಿವಾಟುಗಳಿಗೆ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ.
ಗ್ರಾಹಕರ ಸುರಕ್ಷತೆಗಾಗಿ ಆರ್ ಬಿಐ ಈ ನಿರ್ಧಾರವನ್ನು ಕೈಗೊಂಡಿದೆ. ಗ್ರಾಹಕರ ಖಾತೆಗಳಿಗೆ ಹೆಚ್ಚಿನ ಭದ್ರತೆ ನೀಡುವ ಗುರಿಯನ್ನು ಆರ್ ಬಿಐ ಹೊಂದಿದೆ. ಇದೀಗ ಆರ್ ಬಿಐ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬ್ಯಾಂಕ್ ಖಾತೆದಾರರಿಗೆ ಹೊಸ ಸೇವೆ ನೀಡುವ ಬಗ್ಗೆ ಆರ್ ಬಿಐ ಘೋಷಣೆ ಹೊರಡಿಸಿದೆ.
ಬ್ಯಾಂಕ್ ಗ್ರಾಹಕರಿಗೆ ಹೊಸ ಸೇವೆ ನೀಡಲಿರುವ ಆರ್ ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರಿಗಾಗಿ ಹೊಸ ಪೋರ್ಟಲ್ ಪ್ರಾರಂಭಿಸಲು ನಿರ್ಧರಿಸಿದೆ. ಆರ್ ಬಿಐ UDGAM (Unclaimed Deposits Gateway To Access Information) ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಗ್ರಾಹಕರ ಕ್ಲೈಮ್ ಮಾಡದ ಠೇವಣಿಗಳ ವಿವರವನ್ನು ಈ ವೆಬ್ ಸೈಟ್ ನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆರ್ ಬಿಐ ಜಾರಿಗೊಳಿಸಿರುವ ಈ ಹೊಸ ಪೋರ್ಟಲ್ ದೇಶದ ಕೋಟ್ಯಂತರ ಗ್ರಾಹಕರಿಗೆ ಸಹಾಯವಾಗಲಿದೆ.
ಈ ಏಳು ಬ್ಯಾಂಕ್ ಗಳಲ್ಲಿ ಕ್ಲೈಮ್ ಮಾಡದ ಠೇವಣಿ ವಿವರಗಳು ಲಭ್ಯವಾಗಲಿದೆ
UDGAM ಒಂದು ರೀತಿಯ ಕೇಂದ್ರೀಕೃತ ವೆಬ್ ಪೋರ್ಟಲ್ ಆಗಿದ್ದು ಅನ್ ಕ್ಲೈಮ್ ಠೇವಣಿಗಳ ವಿವರವನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ಈ ಏಳು ಬ್ಯಾಂಕ್ ಗಳು ಕ್ಲೈಮ್ ಮಾಡದ ಠೇವಣಿ ವಿವರನ್ನು ನೀಡುತ್ತದೆ. ನಿಮ್ಮ ಹೆಸರಿನಲ್ಲಿ ಕ್ಲೈಮ್ ಮಾಡದ ಯಾವುದೇ ಠೇವಣಿ ವಿವರವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI),ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಸಿಟಿ ಬ್ಯಾಂಕ್ ಗಳ ಗ್ರಾಹಕರಿಗಿದ್ದರೆ UDGAM ವೆಬ್ ಪೋರ್ಟಲ್ ನ ಮೂಲಕ ಮಾಹಿತಿ ತಿಳಿಯಬಹುದು. ಇತರ ಬ್ಯಾಂಕುಗಳಲ್ಲಿ ಸದ್ಯದಲ್ಲೇ ಈ ವೆಬ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.