Udyogini Scheme: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂ, ಮಹಿಳೆಯರಿಗಾಗಿ ಇನ್ನೊಂದು ಯೋಜನೆ ಜಾರಿ
ಸ್ವಂತ ಬಿಸಿನೆಸ್ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂ ಬಡ್ಡಿ ರಹಿತ ಸಾಲ
Udyogini Scheme 2024: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾಲಂಭಿ ಆಗಬೇಕು ಎನ್ನುವ ಉದ್ದೇಶಕ್ಕಾಗಿ ಉದ್ಯೋಗ ಯೋಜನೆ , ಸಾಲ ಸೌಲಭ್ಯ ಹಾಗು ಸಹಾಯಧನಗಳಂತಹ ಹಲವು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಈಗ ಅದರಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದಾಗಿದೆ.
ಈ ಯೋಜನೆಯಡಿ ಮಹಿಳೆಯರು ಆದಾಯ ಉತ್ಪನ್ನಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಹಾಗು ಮಹಿಳೆಯರಿಗೆ ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
ಉದ್ಯೋಗಿನಿ ಯೋಜನೆ ಬಗ್ಗೆ ಮಾಹಿತಿ
ರಾಜ್ಯದಲ್ಲಿ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಲು ಸರಕಾರ ನಿರ್ಧರಿಸಿದ್ದು, ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಈ ಯೋಜನೆಯಡಿ ಸಾಲ ಹಾಗು ಸಹಾಯಧನವನ್ನು ಒದಗಿಸಿಕೊಡಲಾಗುವುದು. ಈ ಯೋಜನೆಯಿಂದ ಪಡೆದ ಸಾಲ ಹಾಗು ಸಹಾಯಧನದ ಮೂಲಕ ಮಹಿಳೆಯರು ಸ್ವಉದ್ಯೋಗವನ್ನು ಮಾಡಬಹುದಾಗಿದೆ. ಇದರಿಂದಾಗಿ ಯಾವುದೇ ಬ್ಯಾಂಕ್ ಗೆ ಅಲೆಯುವ ಹಾಗು ಸಾಲ ತೀರಿಸಲು ಕಷ್ಟ ಆಗುವ ಪರಿಸ್ಥಿತಿ ಮಹಿಳೆಯರಿಗೆ ಬರುವುದಿಲ್ಲ ಹಾಗಾಗಿ ಸರಕಾರ ಈ ಯೋಜನೆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಪ್ರಬಲರಾಗಿಸಲು ಶ್ರಮಿಸುತ್ತಿದೆ.
ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಅವಕಾಶ ಇದ್ದು, ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆ ಇರಬೇಕು. ಎಲ್ಲಾ ವರ್ಗದ ಮಹಿಳೆಯರಿಗೆ 18 ರಿಂದ 55 ವರ್ಷಗಳ ವಯಸ್ಸಿನ ಮಿತಿ ಕಡ್ಡಾಯಗೊಳಿಸಲಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು 3 ಲಕ್ಷದ ತನಕ ಬಡ್ಡಿರಹಿತ ಸಾಲ ಸಿಗಲಿದೆ. ಅಗತ್ಯ ದಾಖಲೆ ಮತ್ತು ಮಾಡುವ ಬಿಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ EDP ತರಬೇತಿ ನೀಡಲಾಗುತ್ತದೆ. ಮಹಿಳೆಯರು ಹೆಚ್ಚಿನ ಬಡ್ಡಿದರದೊಂದಿಗೆ ಸಾಲಕ್ಕಾಗಿ ಅಥವಾ ಖಾಸಗಿ ಲೇವಾದೇವಿದಾರರು ಇತರ ಹಣಕಾಸು ಸಂಸ್ಥೆಗಳಿಗೆ ಹೋಗುವುದನ್ನು ತಪ್ಪಿಸುದು ಯೋಜನೆ ಉದ್ದೇಶವಾಗಿದೆ. ಅರ್ಹ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.