Udyogini Scheme: ಮೋದಿ ಸರ್ಕಾರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಬಡ್ಡಿ ಇಲ್ಲದೆ ಸಾಲ, ಮಹಿಳೆಯರೇ ಇಂದೇ ಅರ್ಜಿ ಹಾಕಿ

ಮಹಿಳೆಯರಿಗಾಗಿ ಜಾರಿಗೆ ಬಂತು ಇನ್ನೊಂದು ಯೋಜನೆ, ಬಡ್ಡಿ ಇಲ್ಲದೆ ಸಿಗಲಿದೆ ಸಾಲ

Udyogini Scheme In India 2024: ದೇಶದಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಹೆಚ್ಚಿನ ಆಧ್ಯೆತೆ ನೀಡಲಾಗುವುದು. ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ನೋಡಿದ್ದೇವೆ.

ಮಹಿಳೆಯರು ಯಾರಿಗೂ ಕೂಡ ಅವಲಂಭಿತರಾಗಿರಬಾರದು ಹಾಗು ಅವರು ಆರ್ಥಿಕರಾಗಿ ಪ್ರಬಲರಾಗಿರಬೇಕೆಂದು ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸಿದ್ದು, ಅದರಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಸಣ್ಣ ವ್ಯಾಪಾರ ಸಾಲ ಮತ್ತು ಕೃಷಿ ಸಾಲವನ್ನು ನೀಡಲಾಗುತ್ತದೆ.

Udyogini Scheme In India
Image Credit: Narendramodi

ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು

ಉದ್ಯೋಗಿನಿ ಯೋಜನೆ ಇದು ಮಹಿಳೆಯರ ಯೋಜನೆ ಆಗಿದೆ. ಯಾವುದಾದರು ವ್ಯಾಪಾರ ಮಾಡಿ ಜೀವನ ನೆಡೆಸಬೇಕು ಎಂದು ಅಂದುಕೊಳ್ಳುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಸಹಾಯಕ್ಕೆ ಬರುತ್ತದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬ್ಯಾಂಕ್‌ಗಳು ಈ ಯೋಜನೆಯನ್ನು ಜಾರಿಗೆ ತರುತ್ತವೆ. ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಸಾಲ ಮತ್ತು ಕೃಷಿ ಸಾಲವನ್ನು ಪಡೆಯಬಹುದು.

Udyogini Scheme Latest Update
Image Credit: Krishijagran

ಬಡ್ಡಿ ರಹಿತ ಸಾಲ ನೀಡುವ ಯೋಜನೆ ಇದಾಗಿದೆ

Join Nadunudi News WhatsApp Group

ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸಾಲ ಪಡೆಯಲು 18 ರಿಂದ 55 ವರ್ಷದೊಳಗಿನವರಾಗಿರಬೇಕು. ಈ ಯೋಜನೆಯಡಿ ಸ್ವಯಂ ಉದ್ಯೋಗಿ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ. ಈ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದು. ಇದರ ಮೂಲಕ 88 ಬಗೆಯ ಸಣ್ಣ ಉದ್ದಿಮೆಗಳನ್ನು ಮಾಡಬಹುದು. ಈಗಾಗಲೇ ವ್ಯಾಪಾರ ಮಾಡುತ್ತಿದ್ದರೂ ಸಾಲ ನೀಡಲಾಗುವುದು.

ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಇತರ ವರ್ಗದ ಮಹಿಳೆಯರಿಗೆ ಶೇ.10 ರಿಂದ 12ರಷ್ಟು ಬಡ್ಡಿ ವಿಧಿಸಲಾಗುವುದು. ಹಾಗಾಗಿ ಈ ಯೋಜನೆಗೆ ಅರ್ಹರಿರುವ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಇಂದೇ ಅರ್ಜಿ ಹಾಕಬಹುದು.

Join Nadunudi News WhatsApp Group