Udyogini Yojana: ದೇಶದ ಎಲ್ಲಾ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ ಹಣ ಪಡೆಯಿರಿ.

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂ, ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.

Udyogini Yojana For Women’s: ಕೇಂದ್ರ ಸರ್ಕಾರ (Central Govt) ಈಗಾಗಲೇ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಇನ್ನು ಕೇಂದ್ರ ಸರ್ಕಾರವು ಮಹಿಳೆರಿಗಾಗಿ ಅನೇಕ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರ ಸಾಕಷ್ಟು ಯೋಜನೆಯನ್ನು ರೂಪಿಸಿದೆ.

ಮಹಿಳೆಯರು ಸ್ವಾವಲಂಭಿಯಾಗಿ ಜೀವನ ನಡೆಸಬೇಕ್ಕುನುವುದು ಸರ್ಕಾರದ ಗುರಿಯಾಗಿದೆ. ಇದೀಗ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ನೆರವಾಗಲಿದೆ.

ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ (Udyogini Yojana) 
ಮಹಿಳೆಯರಿಗಾಗಿ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಹೊಸ ಅವಕಾಶವನ್ನು ನೀಡಲಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ.

Women can get loan up to 3 lakhs under Udyogini Yojana
Image Credit: Pmmodiyojana

ಮಹಿಳೆಯರು 88 ಬಗೆಯ ಸಣ್ಣ ಉದ್ಯೋಗಗಳನ್ನು ಸ್ಥಾಪಿಸಲು ಈ ಯೋಜನೆಯು ನೆರವಾಗಲಿದೆ. ಇನ್ನು ಮಹಿಳೆಯರು ಉದ್ಯಮಿಗಳಾಗಿ ಮತ್ತು ದೊಡ್ಡ ಮಟ್ಟದಲ್ಲಿ ಉದ್ಯಮಿಗಳಾಗಿ ಬೆಳೆದು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಉದ್ಯೋಗಿನಿ ಯೋಜನೆಯ ಲಾಭವೇನು
ಈ ಯೋಜನೆಯನ್ನು ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ನಂತರ ಮಹಿಳೆಯರ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ 48000 ಮಹಿಳೆಯರು ಸಣ್ಣ ಉದ್ಯಮಿಗಳಾಗಿದ್ದಾರೆ. 18 ರಿಂದ 55 ವರ್ಷದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Women can get loan up to 3 lakhs under Udyogini Yojana
Image Credit: Krishijagran

ಸಾಲದ ಮಿತಿ ಮತ್ತು ಸಾಲದ ಬಡ್ಡಿದರ
ಈ ಉದ್ಯೋಗನಿಧಿ ಯೋಜನೆಯ ಅಡಿಯಲ್ಲಿ ಮಹಿಳೆಯರು 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇನ್ನು ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಸಾಲದ ಮಿತಿ ಇಲ್ಲ. ವ್ಯವಹಾರ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ.

ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಇತರ ಮಹಿಳೆಯರಿಗೆ ಶೇ. 10 ರಿಂದ ಶೇ. 12 ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

Women can get loan up to 3 lakhs under Udyogini Yojana
Image Credit: Vijaykarnataka

ಉದ್ಯೋಗನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯ ವಿವರವನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group