Udyogini Scheme Karnataka Complete Information: ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನೆಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಅನೇಕ ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಾರಿಯಲ್ಲಿರುವ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರು 3 ಲಕ್ಷ ತನಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕರ್ನಾಟಕದಲ್ಲಿ ಉದ್ಯೋಗಿನಿ ಯೋಜನೆ
ಈ ಯೋಜನೆಯ ಅಡಿಯಲ್ಲಿ ಮಹಿಳೆಯರು 3 ಲಕ್ಷ ರೂ. ವರೆಗೆ ಸಾಲ ಪಡೆದು ಸ್ವಂತ ಉದ್ಯೋಗವನ್ನು ಆರಂಭಿಸಬಹುದಾಗಿದೆ. ಈ ಯೋಜನೆಯಲ್ಲಿ ವಿಧವೆಯರು, ಅಂಗವಿಕಲರು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ. ಮತ್ತು ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ.50 ರಷ್ಟು ಸಹಾಯಧನ ಲಭ್ಯವಿದೆ. ಉದ್ಯೋಗಿನಿ ಯೋಜನೆಯ ಸಾಲದ ಬಡ್ಡಿದರ ತುಂಬಾ ಕಡಿಮೆ ಆಗಿದೆ ಮತ್ತು ಕೆಲವರಿಗೆ ಬಡ್ಡಿರಹಿತ ಸಾಲ ಕೂಡ ಸಿಗುತ್ತದೆ.
ಈ ಯೋಜನೆಯು 88 ರೀತಿಯ ಸಣ್ಣ ವ್ಯಾಪಾರಗಳನ್ನು ಬೆಂಬಲಿಸುತ್ತದೆ. (ಉದಾಹರಣೆಗೆ ಕಿರಾಣಿ ಅಂಗಡಿ, ಬೇಕರಿ, ಉಪ್ಪಿನಕಾಯಿ ತಯಾರಿಕೆ, ಹಾಲು ವ್ಯಾಪಾರ, ಬ್ಯೂಟಿ ಪಾರ್ಲರ್ ಇತ್ಯಾದಿ.)
ಉದ್ಯೋಗಿನಿ ಯೋಜನೆಯ ಅರ್ಹತೆ
* 18 ರಿಂದ 55 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ
* ಕುಟುಂಬ ವಾರ್ಷಿಕ ಆದಾಯ 1.5 ಲಕ್ಷ ಕ್ಕಿಂತ ಕಡಿಮೆ ಆಗಿರಬೇಕು (SC / ST ಮಹಿಳೆಯರಿಗೆ 2 ಲಕ್ಷ ತನಕ ಅವಕಾಶ ಇದೆ)
* ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ.
* ಇನ್ನು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* ಈ ಹಿಂದೆ ಯಾವುದೇ ಸಾಲ ಡಿಪೋಲ್ಟ್ ಆಗಿರಬಾರದು
* ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ವ್ಯಾಪಾರ ಯೋಜನೆಯ ವರದಿ
* ಬ್ಯಾಂಕ್ ಪಾಸ್ ಬುಕ್
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಅರ್ಜಿ ಪ್ರಕ್ರಿಯೆ ಆಫ್ ಲೈನ್ ಮೂಲಕ ನೆಡೆಸಲಾಗುತ್ತದೆ. ಹತ್ತಿರದ ಬ್ಯಾಂಕ್ ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಅನ್ನು ಪಡೆದುಕೊಳ್ಳಿ. ಅರ್ಜಿ ಪರಿಶೀಲನೆ ಆದ ನಂತರ ಸಾಲ ಮಂಜೂರಾಗುತ್ತದೆ. ಆಯ್ಕೆ ಆದ ಅಭ್ಯರ್ಥಿಗಳಿಗೆ 3 ರಿಂದ 6 ದಿನಗಳ ಉದ್ಯಮಶೀಲತೆ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ https://kswdc.karnataka.gov.in/ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

