Shiva Rajkumar And Upendra: ಬರುತ್ತಾ ಓಂ 2, ಶಿವಣ್ಣನ ಜೊತೆ ಹೊಸ ಚಿತ್ರ ಮಾಡಲು ಮುಂದಾದ ಉಪೇಂದ್ರ.

Upendra Direct Shiva Rajkumar Movie: ಕನ್ನಡ ಚಿತ್ರರಂಗದ ಹೆಸರಾಂತ ನಟರು ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ಶಿವರಾಜ್ ಕುಮಾರ್ (Shiva Rajkumar)ಅವರನ್ನು ಮತ್ತೆ ತೆರೆ ಮೇಲೆ ಜೊತೆಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಸ್ಯಾಂಡಲ್ ವುಡ್ (Sandalwood) ನಲ್ಲಿ ಸಂಚಲನ ಮೂಡಿಸಿದ ಓಂ ಸಿನಿಮಾವನ್ನು ಸಿನಿ ರಸಿಕರು ಮರೆಯುವುದಕ್ಕೆ ಸಾಧ್ಯಾನೇ ಇಲ್ಲ.

Upendra Direct Shiva rajkumar Movie
Image Source: India Today

ಉಪೇಂದ್ರ ನಿರ್ದೇಶನದ ಓಂ ಸಿನಿಮಾ ನಟ ಶಿವಣ್ಣ ಅವರ ಕೆರಿಯರ್ ನಲ್ಲಿಯೇ ದೊಡ್ಡ ಹಿಟ್ ತಂದುಕೊಟ್ಟಿದೆ. ನಟ ಶಿವರಾಜ್ ಕುಮಾರ್ ಮಾಸ್ ಜರ್ನಿ ಶುರುವಾಗಿದ್ದೇ ಓಂ ಸಿನಿಮಾ ಮೂಲಕ ಅಂದರೆ ತಪ್ಪಾಗುವುದಿಲ್ಲ.

ಮತ್ತೆ ಶಿವಣ್ಣನಿಗಾಗಿ ನಿರ್ದೇಶನ ಮಾಡಲಿರುವ ನಟ ಉಪೇಂದ್ರ
ಇದೀಗ ನಟ ಶಿವಣ್ಣ ಮತ್ತು ನಟ ಉಪೇಂದ್ರ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹರಡಿದೆ. ನಟ ಶಿವರಾಜ್ ಕುಮಾರ್ ಅವರಿಗಾಗಿ ಉಪೇಂದ್ರ ಆಕ್ಷನ್ ಕಟ್ ಹೇಳುವುದು ಪಕ್ಕ ಆಗಿದೆ.

Upendra Direct Shiva rajkumar Movie
Image Source: India Today

ನಟ ಉಪೇಂದ್ರ ಅವರ ಬಹುನಿರೀಕ್ಷಿತ ಕಬ್ಜ ಸಿನಿಮಾದ ಆಡಿಯೋ ರಿಲೀಸ್ ಚಿಕ್ಕಬಳ್ಳಾಪುರದ ಶೀಲ್ಡಘಡದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿ ಉಪೇಂದ್ರ ಮತ್ತೆ ಶಿವಣ್ಣನಿಗಾಗಿ ಸಿನಿಮಾ ನಿರ್ದೇಶನ ಮಾಡುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.

Join Nadunudi News WhatsApp Group

ಶಿವಣ್ಣನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಉಪೇಂದ್ರ
ಕಬ್ಜ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಉಪೇಂದ್ರ ಶಿವರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಶಿವಣ್ಣನಿಗಾಗಿ ಮತ್ತೆ ಸಿನಿಮಾ ಮಾಡೇ ಮಾಡುತ್ತೇನೆ ಎಂದು ನಟ ಉಪೇಂದ್ರ ಅನೌನ್ಸ್ ಮಾಡಿದ್ದಾರೆ.

Upendra Direct Shiva rajkumar Movie
Image Source: India Today

ಸದ್ಯದಲ್ಲಿಯೇ ನಟ ಉಪೇಂದ್ರ ಶಿವಣ್ಣನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ಮತ್ತೆ ಓಂ ಸಿನಿಮಾ ಮರುಕಳಿಸಲಿದೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ.

Upendra Direct Shiva rajkumar Movie
Image Source: India Today

Join Nadunudi News WhatsApp Group