UIDAI Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಬೇಸರ ಸುದ್ದಿ, ಇನ್ನುಮುಂದೆ ಆಧಾರ್ ಅಪ್ಡೇಟ್ ಬಹಳ ಕಷ್ಟ.

ಯುಡಿಎಐ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

Aadhar Card Address Change New Rule: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar Card) ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬರುತ್ತಿವೆ. ಆಧಾರ್ ಕಾರ್ಡ್ ಇದೀಗ ಪ್ರಮುಖ ಧಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ.

ಇನ್ನು ಯುಐಡಿಎಐ ಇತ್ತೀಚಿಗೆ ಆಧಾರ್ ತಿದ್ದುಪಡಿಯನ್ನು ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಕುರಿತಂತೆ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಯುಐಡಿಎಐ ಜಾರಿಗೊಳಿಸಿದೆ. ಇದೀಗ ಯುಐಡಿಎಐ ಆಧಾರ್ ಕಾರ್ಡ್ ತಿದ್ದುಪಡಿಯಲ್ಲಿ ಹೊಸ ನಿಯಮವನ್ನು ತಂದಿದೆ. ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.

Aadhar Card Address Change New Rule
Image Credit: indiatimes

ಆಧಾರ್ ಕಾರ್ಡ್ ಅಪ್ಡೇಟ್ ನಲ್ಲಿ ಹೊಸ ನಿಯಮ ಜಾರಿಗೊಳಿಸಿದ ಯುಡಿಎಐ
ಇದೀಗ ಯುಐಡಿಎಐ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ದಾಖಲೆಯ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೊಸದಾಗಿ ಆಧಾರ್ ಅಪ್ಡೇಟ್ ಮಾಡಲು ಯುಐಡಿಎಐ ಹೊಸ ದಾಖಲೆಯನ್ನು ಪ್ರಕಟಿಸಿದೆ. ಹೆಸರು ಹಾಗೂ ಜನ್ಮದಿನದ ಬದಲಾವಣೆಗೆ ಬೇಕಾದ ದಾಖಲೆಗಳ ಸಂಖ್ಯೆಗಳನ್ನು ಕಡಿತಗೊಳಿಸಿದೆ. ಜನನ ದಿನದ ಬದಲಾವಣೆಗೆ ಆರು ದಾಖಲೆಗಳಲ್ಲಿ ಒಂದನ್ನು ಮಾತ್ರ ಪರಿಗಣಿಸಲು ನಿರ್ಧರಿಸಿದೆ.

ಜನ್ಮ ದಿನಾಂಕ ಬದಲಾವಣೆಗೆ ಈ ದಾಖಲೆಗಳು ಅಗತ್ಯ
ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಬದಲಾವಣೆಗೆ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಇನ್ನುಮುಂದೆ ಪಾಸ್ ಪೋರ್ಟ್, ಸರ್ಕಾರೀ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ, ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣಪತ್ರ ಹಾಗೂ ಜನನ ಪ್ರಮಾಣಪತ್ರವನ್ನು ಆಧಾರ್ ಹುಟ್ಟಿದ ದಿನಾಂಕದ ಬದಲಾವಣೆಗೆ ಪರಿಗಣಿಸಲಾಗುತ್ತದೆ.

UDAI has implemented a new rule in Aadhaar card update
Image Credit: indiatimes

ಇದರಲ್ಲಿ ಯಾವುದಾದರು ಒಂದು ದಾಖಲೆ ಇಲ್ಲದೆ ಇದ್ದರು ಕೂಡ ಅವರು ಜನನ ಪ್ರಮಾಣ ಪತ್ರವನ್ನು ಮಾಡಿಸುವುದು ಅಗತ್ಯ. ಆಧಾರ್ ನಲ್ಲಿ ಹೆಸರು ಹಾಗೂ ಹುಟ್ಟಿದ ದಿನದ ಬದಲಾವಣೆಯಲ್ಲಿ ಹಿಂದಿನ ದಾಖಲೆಗಳ ಬದಲು ಹೊಸಾ ದಾಖಲೆಗಳನ್ನು ನೀಡುವಂತೆ ಯುಐಡಿಎಐ ಆದೇಶ ನೀಡಿದೆ.

Join Nadunudi News WhatsApp Group

Join Nadunudi News WhatsApp Group