Ujaas eGo LA: ಕೇವಲ 34,000 ರೂ ಗೆ ಸಿಗಲಿದೆ ಉಜಾಸ್ ಇವಿ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ ಆಫರ್ ಘೋಷಣೆ,
34 ರೂಪಾಯಿಗೆ ಸಿಗಲಿದೆ ಉಜಾಸ್ ಇವಿ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಆಫರ್ ಕೆಲವು ದಿನಗಳು ಮಾತ್ರ.
Ujaas eGo LA Electric Scooter: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಲಿವೆ.
ಇದೀಗ ಉಜಾಸ್ ಇವಿ (Ujaas EV) ಕಂಪನಿಯು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಉಜಾಸ್ ಇವಿ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ (Ujaas eGo LA Electric scooter)
ಉಜಾಸ್ ಇವಿ ಕಂಪನಿಯ ಅಹಂ ಮಾಡೆಲ್ ನ ಬಗ್ಗೆ ಮಾಹಿತಿ ತಿಳಿಯೋಣ. ಉಜಾಸ್ ಇವಿ ಕಾಪಾನಿಯು ಗ್ರಾಹಕರಿಗಾಗಿ ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಸ್ಕೂಟರ್ ನ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ. ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 34880 ರೂ. ಆಗಿದೆ.
ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಸ್ಕೂಟರ್ ನ ವೈಶಿಷ್ಟ್ಯಗಳ ಬಗ್ಗೆ ನೋಡೋಣ. ಈ ಸ್ಕೂಟರ್ ರಿವರ್ಸ್ ಡ್ರೈವ್ ಮತ್ತು ಕಿಲ್ ಲೆಸ್ ರೈಡಿಂಗ್ ನಂತಹ ವೈಶಿಷ್ಟ್ಯವನ್ನು ಹೊಂದಿದೆ. ಈ ಸ್ಕೂಟರ್ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಕೆಂಪು, ನೀಲಿ, ಬೂದು, ತಿಳಿ ಬೂದು ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯ ವೆಬ್ ಸೈಟ್ ನ ಮೂಲಕ ಈ ಸ್ಕೂಟರ್ ಅನ್ನು ಖರೀದಿಸಬಹುದು.
ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯ
ಉಜಾಸ್ ಇಗೋ ಎಲ್ ಎ ಎಲೆಕ್ಟ್ರಿಕ್ ಸ್ಕೂಟರ್ ಲೆಡ್ ಆಸಿಡ್ ಬ್ಯಾಟರಿ ಅನ್ನು ಹೊಂದಿದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 7 ಗಂಟೆಗಳು ಬೇಕಾಗುತ್ತದೆ. 48V /60V ಚಾರ್ಜರ್ ವೋಲ್ಟೇಜ್ ಹೊಂದಿದೆ. 250 ಪವರ್ ವ್ಯಾಟ್ ನೊಂದಿಗೆ 8 ಲೀಟರ್ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 75 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.