Ads By Google

Ujaas eZy EV: ದೇಶದಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ 31,000 ಸಾವಿರಕ್ಕೆ ಸಿಗುವ ಈ EV ಸ್ಕೂಟರ್, 60 Km ಮೈಲೇಜ್ ಕೊಡುತ್ತೆ.

ujaas ezy electric scooter price and specification

Image Credit: Original Source

Ads By Google

Ujaas eZy Electric Scooter: ಸದ್ಯ ಭಾರತೀಯ ಆಟೋ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಪಾರುಪತ್ಯ ಸಧಿಸುತ್ತಿವೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರ್, ಬೈಕ್, ಸ್ಕೂಟರ್, ಬೈಸಿಕಲ್ ಗಳ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಗಳಿಂದ ಹಿಡಿದು ವಿವಿಧ ಸ್ಟಾರ್ಟ್ ಅಪ್ ಕಂಪನಿಗಳು ಕೂಡ Electric Scooter ಅನ್ನು ಪರಿಚಯಿಸುತ್ತಿವೆ.

ಮಾರುಕಟ್ಟೆಯಲ್ಲಿ ಈಗಾಗಲೇ ಗ್ರಾಹಕರಿಗೆ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಗ್ಲು ಆಯ್ಕೆ ಸಿಗಬಹುದು. ಆದರೆ ಹೆಚ್ಚಿನ ಮಾದರಿಯ Electric scooter ಗಳ ಬೆಲೆ ಮಾರುಕಟ್ಟೆಯಲ್ಲಿ ಸರಿಸೂಮಾರು 1 ರಿಂದ 2 ಲಕ್ಷದವರೇ ಇರುತ್ತವೆ. ಹೀಗಾಗಿ ಬಜೆಟ್ ಬೆಲೆಯಲ್ಲಿ ಸ್ಕೂಟರ್ ಖರೀದಿ ಮಾಡುವವರಿಗೆ ಲಕ್ಷ ಬೆಲೆಯ ಮಾದರಿಯನ್ನು ಖರೀದಿಸುವುದು ಕಷ್ಟ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಒಂದು ಪರಿಚಯವಾಗಿದೆ. ನೀವು 30 ಸಾವಿರದ ಬಜೆಟ್ ನಲ್ಲಿ ಈ ಎಲೆಕ್ಟ್ರಿಕ್ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Image Credit: bikedekho

Ujaas eZy Electric Scooter
Ujaas eZy ಎಲೆಕ್ಟ್ರಿಕ್ ಸ್ಕೂಟರ್ ವಿಶಿಷ್ಟ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. Ujaas eZy ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ 48V, 26Ah ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ನೀವು 250W ಹಬ್ ಮೋಟಾರ್ ಅನ್ನು ಪಡೆಯುತ್ತೀರಿ. ಇದರ ಚಾರ್ಜಿಂಗ್‌ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್‌ ನ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯ ಚಾರ್ಜರ್‌ನೊಂದಿಗೆ ಕೇವಲ 6 ರಿಂದ 7 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

60 Km ಮೈಲೇಜ್ ಕೊಡುತ್ತೆ Ujaas eZy ಎಲೆಕ್ಟ್ರಿಕ್ ಸ್ಕೂಟರ್
ಈ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಕಂಪನಿಯೇ ಸ್ವತಃ ಮಾಹಿತಿ ಹಂಚಿಕೊಂಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 60 ಕಿಲೋಮೀಟರ್‌ಗಳ ಡ್ರೈವ್ ಶ್ರೇಣಿಯನ್ನು ಮತ್ತು ಪ್ರತಿ ಲೀಟರ್‌ ಗೆ 25 ಕಿಲೋಮೀಟರ್‌ಗಳ ಗರಿಷ್ಠ ವೇಗವನ್ನು ನೀಡುತ್ತದೆ. ಉತ್ತಮ ಸುರಕ್ಷತೆಗಾಗಿ ಕಂಪನಿಯು Ujaas eZy ಎಲೆಕ್ಟ್ರಿಕ್ ಸ್ಕೂಟರ್‌ನ ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳ ಸಂಯೋಜನೆಯನ್ನು ಸ್ಥಾಪಿಸಿದೆ.

Image Credit: bikedekho

ದೇಶದಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ 31,000 ಸಾವಿರಕ್ಕೆ ಸಿಗುವ EV
ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ Ujaas eZy ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 31,000 ರೂ. ಆಗಿದೆ. ಇನ್ನು Ujaas eZy ಎಲೆಕ್ಟ್ರಿಕ್ 1.25 ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 250w ಮೋಟಾರ್ ಶಕ್ತಿಯನ್ನು ಹೊಂದಿದೆ. ಗ್ರಾಹಕರ ಸುರಕ್ಷತೆಗಾಗಿ ಈ ಸ್ಕೂಟರ್ ನಲ್ಲಿ Anti-theft alarm, digital odometer, digital speedo meter, digital instrument console, keyless entry and reverse driving gear ನಂತಹ ವಿವಿಧ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.