Cylinder Subsidy: ಗ್ಯಾಸ್ ಸಿಲಿಂಡರ್ ಮೇಲೆ 2400 ರೂ ಸಬ್ಸಿಡಿ, ಕೇಂದ್ರದಿಂದ ಜನರಿಗೆ ಬಂಪರ್ ಗಿಫ್ಟ್.
ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಜನರಿಗೆ 2400 ರೂ ತನಕ ಸಬ್ಸಿಡಿ ಸಿಗಲಿದೆ.
Gas Cylinder: ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹೊಸ ಹಣಕಾಸು ವರ್ಷದ (New Financial year) ಆರಂಭದಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬರುತ್ತಿದೆ. ಈ ಬಾರಿ ಹಣಕಾಸು ವರ್ಷ ಜನತೆಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ.
ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ಸರ್ಕಾರ ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆಯ ಪರಿಣಾಮವನ್ನು ನಿಯಂತ್ರಿಸಲು ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಿಗಲಿದೆ ಸಬ್ಸಿಡಿ
ಕೇಂದ್ರ ಸರ್ಕಾರ ಇದೀಗ ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ನೀಡಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತದೆ ಇದೆ. ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ಉಜ್ವಲ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ನೀವು ಗ್ಯಾಸ್ ಸಿಲಿಂಡರ್ ಗಳ ಮೇಲೆ ವಾರ್ಷಿಕವಾಗಿ 2,400 ರೂಗಳನ್ನು ಸಬ್ಸಿಡಿಯನ್ನು ಪಡೆಯಬಹುದು.
ಕೇಂದ್ರ ಸರ್ಕಾರದ ಉಜ್ವಲ ಯೋಜನೆ (Ujwala Yojana)
ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ಜನತೆಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ನೀಡಲು ಮುಂದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಗ್ಯಾಸ್ ಸಿಲಿಂಡರ್ ಗಳ ಮೇಲೆ 2,400 ವಾರ್ಷಿಕ ಸಬ್ಸಿಡಿಯನ್ನು ಪಡೆಯಬಹುದು.
ಇನ್ನು ಒಂದು ವರ್ಷದ ವರೆಗೆ ಈ ಯೋಜನೆಯು ಲಭ್ಯವಿದೆ. ಈ ಯೋಜನೆ ಅಡಿಯಲ್ಲಿ ಗ್ರಹಬಳಕೆಯ ಸಿಲಿಂಡರ್ ಮೇಲೆ ರೂ. 200 ಸಬ್ಸಿಡಿ ಪಡೆಯಬಹುದು. ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಸಬ್ಸಿಡಿ ಅನ್ವಯಿಸುತ್ತದೆ. ಪ್ರತಿ ಸಿಲಿಂಡರ್ ಗೆ 200 ಅಂದರೆ 12 ಸಿಲಿಂಡರ್ ಗಳಿಗೆ ವಾರ್ಷಿಕವಾಗಿ ನೀವು 2,400 ರೂ. ಗಳನ್ನೂ ಸಬ್ಸಿಡಿ ಪಡೆಯಬಹುದು.