Ultraviolette F77: ಇಂದೇ ಬುಕ್ ಮಾಡಿ 307 Km ರೇಂಜ್ ಕೊಡುವ ಕನ್ನಡಿಗರ ಬೈಕ್, ಯುವ ಜನತೆಗೆ ಹೇಳಿಮಾಡಿಸಿದ ಬೈಕ್.
ಒಂದೇ ಚಾರ್ಜ್ ನಲ್ಲಿ 307 ಕಿಲೋಮೀಟರ್ ರೇಂಜ್ ನೀಡುವ ಅಲ್ಟ್ರಾವೈಲೆಟ್ ಕಂಪನಿಯ ಹೊಸ ಬೈಕ್.
Ultraviolette F77 Electric Performance Bike: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಸಂಚಲನ ಮೂಡಿಸುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಎಲೆಕ್ಟ್ರಿಕ್ ಬೈಕ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅಲ್ಟ್ರಾವೈಲೆಟ್ (Ultraviolette) ಕಂಪನಿಯು ಇದೀಗ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಬೈಕ್ ಯುವಕರ ನೆಚ್ಚಿನ ಬೈಕ್ ಆಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಪಡೆಯಲಿದೆ.
ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್
ಅಲ್ಟ್ರಾವೈಲೆಟ್ ಕಂಪನಿಯು ಇದೀಗ ಜನಪ್ರಿಯ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ನ ಎಲ್ಲ ಯುನಿಟ್ ಗಳು ಬುಕ್ಕಿಂಗ್ ಪ್ರಾರಂಭವಾದ ಕೆಲವೇ ಕೆಲವು ಗಂಟೆಗಳಲ್ಲಿ ಹೆಚ್ಚಿನ ಮಾರಾಟ ಕಂಡುಬಂದಿದೆ.
ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ನ ಆರಂಭಿಕ ಬೆಲೆಯೂ 3 .8 ಲಕ್ಷ ರೂ.ಆಗಿದೆ. ಇನ್ನು ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ನ ಲಿಮಿಟೆಡ್ ಎಡಿಷನ್ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ನ ವಿಶೇಷತೆ
ಇನ್ನು ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ನ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, PMS ಎಲೆಕ್ಟ್ರಿಕ್ ಮೋಟಾರ್ 40 .2 bhp ಅಥವಾ 30 .2 kW ಪವರ್ ಮತ್ತು 100Nm ಪಿಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಬೈಕ್ 7 .8 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ. ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ನ ಲಿಮಿಟೆಡ್ ಎಡಿಷನ್ ಅದೇ 10 .3 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನಿಂದ ಪವರ್ ಅನ್ನು ಹೊಂದಲಿದೆ.
ಒಂದೇ ಚಾರ್ಜ್ ನಲ್ಲಿ 307 ಕಿಲೋಮೀಟರ್ ರೇಂಜ್
ಈ ಎಲೆಕ್ಟ್ರಿಕ್ ಬೈಕ್ 5 ಇಂಚಿನ TFT ಸ್ಕ್ರೀನ್, 41 mm USD ಮುಂಭಾಗದ ಪೋರ್ಕ್ ಗಳು ಹಿಂಭಾಗದಲ್ಲಿ ಮೊನೊಶಾಕ್, 320 mm ಮುಂಭಾಗದ್ ಮತ್ತು 230 mm ಡಿಸ್ಕ್ ಬ್ರೇಕ್ ಗಳು, ಡ್ಯುಲಾ ಚಾನೆಲ್ ABS , ಮೂರು ರೈಡಿಂಗ್ ಮೋಡ್, ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ಮಾರುಕಟ್ಟೆಯಲ್ಲಿಲಭ್ಯವಿರುವ ವಿವಿಧ ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಹೆಚ್ಚು ದೊಡ್ಡದಾಗಿದೆ. ಹಾಗು ಈ ಬೈಕ್ ಒಂದೇ ಚಾರ್ಜ್ ನಲ್ಲಿ 307 ಕಿಲೋಮೀಟರ್ ರೇಂಜ್ ನೀಡಲಿದೆ.