Ultraviolette Ev: ಒಮ್ಮೆ ಚಾರ್ಜ್ ಮಾಡಿದರೆ 307 Km ಮೈಲೇಜ್, ಹೊಸ ಅಗ್ಗದ Ev ಬೈಕನ್ನು ಚಂದ್ರಯಾನ 3 ಕ್ಕೆ ಅರ್ಪಿಸಿದ ಕಂಪನಿ.
ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್, ಇಂದಿನಿಂದಲೇ ಬುಕಿಂಗ್ ಆರಂಭ.
Ultraviolette F77 Space Edition Bike: ಮಾರುಕಟ್ಟೆಯಲ್ಲಿ ಪ್ರಸ್ತುತ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ಮಾದರಿಯ ಕಾರ್, ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸುತ್ತಾರೆ.
ಎಲೆಕ್ಟ್ರಿಕ್ ವಾಹನ ಖರೀದಿಯು ಹೆಚ್ಚಿನ ಖರ್ಚನ್ನು ಕಡಿಮೆ ಮಾಡುತ್ತದೆ. ಇನ್ನು ವಿವಿಧ ಪ್ರತಿಷ್ಠಿಯ ಕಂಪನಿಗಳು ಕೂಡ ಗ್ರಾಹಕರ ಪೆಟ್ರೋಲ್ ಡೀಸೆಲ್ ಖರ್ಚನ್ನು ಕಡಿಮೆ ಮಾಡಲು ಹೊಸ ಹೊಸ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ರೂಪಾಂತರವನ್ನೇ ಹೆಚ್ಚು ಪರಿಚಯಿಸುತ್ತದೆ.
ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್
ಈಗಂತೂ ಮಾರುಕಟ್ಟೆಯಲ್ಲಿ ನೂತನ ವಿನ್ಯಾಸದ ಸಾಕಷ್ಟು ಎಲೆಕ್ಟ್ರಿಕ್ ರೂಪಾಂತರಗಳು ಪರಿಚಯವಾಗಿದೆ. ಪ್ರತಿಷ್ಠಿತ ಕಂಪನಿಗಳಿಂದ ಹಿಡಿದು ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಅತ್ಯಾಧುನಿಕ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಆನ್ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಕೆಲ ಕಂಪನಿಗಳು ತನ್ನ ಹಳೆಯ ಮಾದರಿಯ ಬೈಕ್ ಆನ್ ಎಲೆಕ್ಟ್ರಿಕ್ ರೂಪಾಂತರದಲ್ಲಿ ಪರಿಚಯಿಸಿ ಹೆಚ್ಚಿನ ಮಾರಾಟ ಕಾಣುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಅಲ್ಟ್ರಾವೈಲೆಟ್ ಕಂಪನಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸಿದೆ.
ಇಂದಿನಿಂದಲೇ ಬುಕಿಂಗ್ ಆರಂಭ
ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಕಂಪನಿಯಾಗಿರುವ ಅಲ್ಟ್ರಾವೈಲೆಟ್ (Ultraviolette) ಇದೀಗ ಎಫ್ 77 ಸ್ಪೇಸ್ ಎಡಿಷನ್ ಇ- ಬೈಕ್ ಅನ್ನು ಮಾರುಕಟ್ಟೆಯಲ್ಲಿಪರಿಚಯಿಸಿದೆ. ಇ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಚಂದ್ರಯಾನ್ 3 ಗೆ ಅರ್ಪಣೆ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಹೊಚ್ಚ ಹೊಸ ಎಫ್ 77 ಸ್ಪೇಸ್ ಎಡಿಷನ್ ಇ- ಬೈಕ್ ಇನ್ನಿತರ ಮಾದರಿಗಿಂತ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ.
ಎಫ್ 77 ಸ್ಪೇಸ್ ಎಡಿಷನ್ ಇ- ಬೈಕ್ ಮೈಲೇಜ್
ಎಫ್ 77 ಸ್ಪೇಸ್ ಎಡಿಷನ್ ಬೈಕ್ ನಲ್ಲಿ ಸುಧಾರಿತ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ವಿಶಷವೆಂದರೆ ವಿಮಾನಗಳಲ್ಲಿ ಬಳಕೆ ಮಾಡುವ ಅಡ್ವಾನ್ಸ್ ಎಲೆಕ್ಟ್ರಾನಿಕ್ಸ್ ಹಾಗು ಟೆಕ್ನಲಾಜಿಯನ್ನು ಪಡೆದಿದೆ. ಇ ಬೈಕ್ ಸಂಪೂರ್ಣ ಚಾರ್ಜ್ ನಲ್ಲಿ ಬರೋಬ್ಬರಿ 307 ಕಿಲೋಮೀಟರ್ ರೇಂಜ್ ನೀಡಲಿದೆ. ಕೇವಲ 2 .9 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಹೊಂದಿದ್ದು, 152 kmph ಟಾಪ್ ಸ್ಪೀಡ್ ಒಳಗೊಂಡಿದೆ.
ಎಫ್ 77 ಸ್ಪೇಸ್ ಎಡಿಷನ್ ಬೈಕ್ ಬೆಲೆ
ಎಫ್ 77 ಸ್ಪೇಸ್ ಎಡಿಷನ್ ಬೈಕ್ ನಲ್ಲಿ 7 .1kWh ಮತ್ತು 10 .3 kWh ಎರಡು ಬ್ಯಾಟರಿ ಪ್ಯಾಕ್ ಆಯ್ಕೆ ಸಿಗಲಿದೆ. ಬರೋಬ್ಬರಿ 206 ರಿಂದ 307 ಕಿಲೋಮೀಟರ್ ಮೈಲೇಜ್ ನೀಡುವ ಇ ನೂತನ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ. 5 ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್, LED ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಬೈಕ್ ಗೆ ಭಾರತೀಯ ಮಾರುಕಟ್ಟೆಯಲ್ಲಿ 3.8 ಲಕ್ಷ ರೂ. ನಿಗಧಿಪಡಿಸಲಾಗಿದೆ.