ಚಿತ್ರರಂಗಕ್ಕೆ ಯಮರಾಯನ ಆಗಮನ ಆಗಿರುವುದು ನಿಜ ಅನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ ಎಂದು ಹೇಳಬಹುದು. ಹೌದು ಒಬ್ಬರಾದ ಮೇಲೆ ಒಬ್ಬರು ಖ್ಯಾತ ನಟ ನಟಿಯರು ಅಕಾಲಿಕವಾಗಿ ಇಹಲೋಕಾನ್ನ ತ್ಯಜಿಸುತ್ತಿದ್ದು ಇದು ಚಿತ್ರರಂಗದ ಪಾಲಿಗೆ ತುಂಬಲಾದ ನಷ್ಟವಾಗಿ ಪರಿಣಮಿಸಿದೆ. ಬೆಳಿಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಎನಿಸಿಕೊಂಡಿದ್ದ ಶಂಕರ್ ರಾವ್ ಅವರು ಅನಾರೋಗ್ಯದಿಂದ ಇಹಲೋಕವನ್ನ ತ್ಯಜಿಸಿದ ಸುದ್ದಿ ಚಿತ್ರರಂಗಕ್ಕೆ ಸುನಾಮಿಯ ಹಾಗೆ ಬಂದು ಚಿತ್ರರಂಗಕ್ಕೆ ಆಘತವನ್ನ ಉಂಟುಮಾಡಿತ್ತು. ಇನ್ನು ಈಗ ದೇಶಕ್ಕೆ ಶಾಕ್ ಆಗುವ ರೀತಿಯ ಇನ್ನೊಬ್ಬ ಖ್ಯಾತ ನಟಿ ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದು ಇದು ದೇಶದ ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು.
ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದ ಈ ನಟಿಗೆ ಇಂತಹ ಸಾವು ಬರುತ್ತದೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಹಾಗಾದರೆ ಈ ಖ್ಯಾತ ನಟಿ ಯಾರು ಮತ್ತು ಇವರ ಸಾವಿಗೆ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ತಮಿಳಿನ ಕೆಲವು ಧಾರಾವಾಹಿಯಲ್ಲಿ ಮತ್ತು ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಪ್ರಸಿದ್ಧಿಯನ್ನ ಗಳಿಸಿಕೊಂಡಿದ್ದ ನಟಿ ಉಮಾ ಮಹೇಶ್ವರಿ ಅಕಾಲಿಕಾಗಿ ಇಹಲೋಕವನ್ನ ತ್ಯಜಿಸಿದ್ದಾರೆ.
ಸುಮಾರು 40 ವರ್ಷ ವಯಸ್ಸಿನ ಉಮಾ ಮಹೇಶ್ವರಿಯವರ ನಿಧನದ ಬಗ್ಗೆ ಶಾಂತಿ ವಿಲಿಯಮ್ಸ್ ಮಾಹಿತಿ ನೀಡಿದ್ದಾರೆ. ಉಮಾ ಮಹೇಶ್ವರಿ ಸಾವಿನ ಬಗ್ಗೆ ನೋವನ್ನ ಹೇಳಿಕೊಂಡ ಶಾಂತಿ ವಿಲಿಯಮ್ಸ್ ಅವರು ಇದು ನಂಬಲಾಗದ ಘಟನೆ ಎಂದಿದ್ದಾರೆ. ಉಮಾ ಮಹೇಶ್ವರಿ ಬಗ್ಗೆ ಮಾತನಾಡಿದ ಶಾಂತಿ ವಿಲಿಯಮ್ಸ್ ಅವರು ಉಮಾ ನನಗೆ ಮಗಳಿದ್ದಂತೆ ಎಂದು ಹೇಳಿದ್ದಾರೆ ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇವರು ಏಕೆ ಕರೆದೊಯ್ಯುತ್ತಿದ್ದಾನೆಂಬುದು ನನಗೆ ಗೊತ್ತಾಗ್ತಿಲ್ಲ ಎಂದಿದ್ದಾರೆ. ಉಮಾ ಸಾಯುವ ಮುನ್ನ ಕುಸಿದು ಬಿದ್ದಿದ್ದು ಎಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಅವರನ್ನ ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಉಮಾ ಮಹೇಶ್ವರಿ ಕೆಲ ತಿಂಗಳಿಂದ ಕಾಮಾಲೆ ರೋಗದಿಂದ ಬಳಲುತ್ತಿದ್ದರಂತೆ ಮತ್ತು ಅದಕ್ಕೆ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಉಮಾ ಅವರ ಪತಿ ಪಶು ವೈದ್ಯರಾಗಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಶಾಂತಿ ವಿಲಿಯಮ್ಸ್ ಪೋಸ್ಟ್ ಮಾಡಿದ್ದಾರೆ. ಉಮಾ ಮಹೇಶ್ವರಿ ಅವರ ಅಗಲಿಕೆ ಚಿತ್ರರಂಗಕ್ಕೆ ಬಹಳ ನೋವನ್ನ ತರಿಸಿದ್ದು ಚಿತ್ರರಂಗದ ಹಲವು ಗಣ್ಯರು ಅವರ ಅಗಲಿಕೆಗೆ ಸಂತಾಪವನ್ನ ಸೂಚಿಸಿದ್ದಾರೆ. ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ