Samantha Divorce Reason: ಗರ್ಭಪಾತ ಮಾಡಿಸಿಕೊಂಡ ನಟಿ ಸಮಂತಾ, ವೈರಲ್ ಆಯಿತು ಖ್ಯಾತ ವಿಮರ್ಶಕನ ಟ್ವೀಟ್.
Umair sandhu Viral Tweet: ನಟಿ ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ಈ ಹಿಂದೆ ಡಿವೋರ್ಸ್ (Divorce) ವಿಚಾರವಾಗಿ ಬಹಳ ಸುದ್ದಿಯಲ್ಲಿದ್ದರು.
ಈ ಇಬ್ಬರು ತಮ್ಮ ದಾಂಪತ್ಯ ಜೀವನದಿಂದ ದೂರವಾಗಿ ಒಂದು ವರ್ಷವೇ ಕಳೆಯುತ್ತಾ ಬಂದು ಕೂಡ ಮತ್ತೆ ಮತ್ತೆ ವಿಚ್ಛೇದನದ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಈ ಜೋಡಿಯ ಬಗ್ಗೆ ಉಮೈರ್ ಸಂದು (Umair Sandu) ಮಾಡಿರುವ ಟ್ವೀಟ್ (Tweet) ವೈರಲ್ ಆಗುತ್ತಿದೆ. ಈ ಟ್ವೀಟ್ ನೋಡಿದ ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ.
ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ಈ ಜೋಡಿಯ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿದ ಕಾರಣ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಇದೀಗ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ವಿಚಾರವಾಗಿ ಸಿನಿಮಾ ವಿಮರ್ಶಕರೊಬ್ಬರು ಮಾಡಿರುವ ಟ್ವೀಟ್ ಇದೀಗ ಬಾರಿ ವೈರಲ್ ಆಗುತ್ತಿದೆ.
ನಾಗ ಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನಕ್ಕೆ ಬ್ರೇಕ್ ನೀಡಿದ ಕಾರಣ ಏನೆಂಬುವುದು ಈವರೆಗೂ ತಿಳಿದುಬಂದಿಲ್ಲ.
ಇದರ ಹಿಂದಿನ ಕಾರಣದ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಕುತೂಹಲರಾಗಿದ್ದಾರೆ. ಈ ವೇಳೆ ಸೆನ್ಸಾರ್ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂದು ಅವರು ಇತ್ತೀಚಿಗೆ ಮಾಡಿದ ಟ್ವೀಟ್ ಇದೀಗ ಸಂಚಲನ ಮೂಡಿಸುತ್ತಿದೆ.
BREAKING NEWS : As per #SamanthaRuthPrabhu, #NagaChaitanya abused her badly. He was the Worst Husband ever. I suffered alot mentally & physically torture. I was even Pregnant but i did abortion. Thank god, I divorced & moved on. pic.twitter.com/7ybQYB93PZ
— Umair Sandhu (@UmairSandu) March 12, 2023
ಉಮೈರ್ ಸಂದು ಟ್ವೀಟ್
“ನಾಗ ಚೈತನ್ಯ ಕಿರುಕುಳದಿಂದಲೇ ಸಮಂತಾ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ. ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದಾನೆ.
ನಾನು ಗರ್ಭಿಣಿಯಾಗಿದ್ದೆ ಬಳಿಕ ಗರ್ಭಪಾತ ಮಾಡಿಸಬೇಕಾಗಿ ಬಂತು. ಆತನ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ” ಎಂದು ಉಮೈರ್ ಸಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಇದೀಗ ಇವರು ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.