Prabhas Engagement: ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥ, ಉಮೈರ್ ಸಂದು ಟ್ವೀಟ್ ವೈರಲ್.

Prabhas And Kriti Sanon: ಟಾಲಿವುಡ್ ನಟ ಪ್ರಭಾಸ್ ಈಗ ಸಾಲಾರ್ (Saalar) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ನಟ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗೆಯೆ ಪ್ರಭಾಸ್ ಅವರ ಜ್ವರದ ಹಿಂದಿನ ಕಾರಣ ಬೇರೆ ಇದೆ, ಪ್ರಭಾಸ್ (Prabhas) ಕೃತಿ ಸನೋನ್ (Kriti Sanon) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿಬರುತ್ತಿದೆ.

Prabhas and Kriti Sanon's engagement, Umair Sandhu's tweet goes viral.
Image Credit: instagram

ತೀವ್ರ ಜ್ವರದಿಂದ ಬಳಲುತ್ತಿರುವ ನಟ ಪ್ರಭಾಸ್
ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಈಗ ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ಸಾಲಾರ್ ಸಿನಿಮಾದ ಶೂಟಿಂಗ್ ನಿಂದ ದೂರ ಇದ್ದು ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಜ್ವರ ಕಡಿಮೆ ಆಗುತ್ತಿದ್ದು ಆತಂಕ ಪಡಬೇಕಾಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಶೂಟಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ ನಿಜ ಆದರೆ ಜ್ವರದ ಕಾರಣಕ್ಕೋ ಅಥವಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.

Umair Sandhu tweeted that Kriti Shannon is engaged to actor Prabhas
Image Credit: instagram

ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥ
ಈ ಹಿಂದೆ ಪ್ರಭಾಸ್ ಹಾಗೂ ಕೀರ್ತಿ ಸನೋನ್ ಡೇಟಿಂಗ್ ನಲ್ಲಿ ಇದ್ದಾರೆ, ಈ ಇಬ್ಬರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದಾವು. ಈ ಬಗ್ಗೆ ನಟಿ ಕೃತಿ ಸನೋನ್ ಸ್ಪಷ್ಟನೆ ನೀಡಿದ್ದರು.

Join Nadunudi News WhatsApp Group

ಇದೀಗ ಮತ್ತೆ ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ವಿಷಯ ಹರಿದಾಡುತ್ತಿದೆ. ನಟ ಪ್ರಭಾಸ್ ಕೀರ್ತಿ ಸನೋನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿ ಸಾಲಾರ್ ಚಿತ್ರೀಕರಣದಿಂದ ದೂರ ಇದ್ದಾರೆ ಎನ್ನುವ ಸುದ್ದಿ ಹರಡಿದೆ.

Umair Sandhu informed that Prabhas and Kriti Shannon will get married
Image Credit: instagram

ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥ ಎಂದು ಟ್ವೀಟ್ ಮಾಡಿದ ಉಮೈರ್ ಸಂದು
“ಕೃತಿ ಸನೋನ್ ಹಾಗೂ ಪ್ರಭಾಸ್ ಮುಂದಿನ ವಾರ ಮಾಲ್ಡೀವ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಮಾಡುವೆ ಕೂಡ ಆಗಲಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದೆ’ ಎಂದು ಉಮೈರ್ ಸಂದು (Umair Sandu) ಟ್ವೀಟ್ ಮಾಡಿದ್ದಾರೆ. ಇದು ಬ್ರೇಕಿಂಗ್ ನ್ಯೂಸ್ ಎಂದು ಕೂಡ ಅವರು ಮೆನ್ಷನ್ ಮಾಡಿದ್ದರು.

Join Nadunudi News WhatsApp Group