ಸದ್ಯ ಕಳೆದ ಎರಡು ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿದ್ದ ವಿಷಯ ಏನು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನೆಂದು ಹೇಳಬಹುದು. ಹೌದು ಈಗಿನ ಕಾಲದಲ್ಲಿ ಯುವಕರಿಗೆ ಮದುವೆಯಾಗಲು ಒಂದು ಹುಡುಗಿ ಸಿಗುವುದೇ ಬಹಳ ಕಷ್ಟವಾಗಿರುವ ಈಗಿನ ಕಾಲದಲ್ಲಿ ಇಲ್ಲೊಬ್ಬ ಯುವಕ ಎರಡು ಯುವತಿಯರನ್ನ ಮದುವೆಯಾಗಿದ್ದು ಜನರ ಶಾಕ್ ಗೆ ಕಾರಣವಾಗಿತ್ತು ಎಂದು ಹೇಳಬಹುದು. ಇನ್ನು ಈ ಯುವಕ ಎರಡು ಮದುವೆಯಾಗಲು ಅಸಲಿ ಆಗಲು ಕಾರಣ ಏನು ಎಂದು ತಿಳಿದು ಜನರು ಬಹಳ ಖುಷಿಪಟ್ಟರು ಎಂದು ಹೇಳಬಹುದು. ಹೌದು ಉಮಾಪತಿ ಅನ್ನುವ ಯುವಕನಾದ ಈತ ಸುಪ್ರಿಯಾ ಮತ್ತು ಲಲಿತ ಅನ್ನುವ ಅಕ್ಕ ತಂಗಿಯನ್ನ ಮದುವೆಯಾಗಿದ್ದಾನೆ.
ಈ ಇಬ್ಬರು ಯುವತಿಯರಲ್ಲಿ ಒಬ್ಬರಿಗೆ ಕಿವಿ ಕೇಳುವುದಿಲ್ಲ ಮತ್ತು ಒಬ್ಬರಿಗೆ ಮಾತು ಬಾರದ ಕಾರಣ ಇನ್ನೊಬ್ಬಳ ಜೀವನ ಹಾಳಾಗಬಾರದು ಅನ್ನುವ ಉದ್ದೇಶದಿಂದ ಉಮಾಪತಿ ಇಬ್ಬರನ್ನ ಮದುವೆಯಾದ ಮತ್ತು ಈ ನಿರ್ಧಾರಕ್ಕೆ ಜನರಿಂದ ಕೂಡ ಬಹಳ ಒಳ್ಳೆಯ ಪ್ರಶಂಸೆ ಕೂಡ ಬಂದಿತ್ತು ಎಂದು ಹೇಳಬಹುದು. ಸದ್ಯ ಈ ಸುದ್ದಿ ಸಕತ್ ವೈರಲ್ ಆಗುತ್ತಿದ್ದಂತೆ ಈ ವಿಷಯ ಎಲ್ಲರಿಗೂ ತಿಳಿದಿದ್ದು ಈ ವಿಷಯ ತಿಳಿದ ಎಲ್ಲಾ ಜನರಿಗೆ ನಿನ್ನೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು ಇಬ್ಬರು ಯುವತಿಯರನ್ನ ಮದುವೆ ಮಾಡಿಕೊಂಡಿದ್ದ ಈ ಯುವಕನನ್ನ ಪೊಲೀಸರು ಈಗ ಅರೆಸ್ಟ್ ಮಾಡಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.
ಹಾಗಾದರೆ ಉಮಾಪತಿಯನ್ನ ಪೊಲೀಸರು ಅರೆಸ್ಟ್ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ವೇಗಮಡಗು ಗ್ರಾಮದ ಉಮಾಪತಿ ಅಕ್ಕ ತಂಗಿಯರಿಬ್ಬರನ್ನು ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದ. ಮೇ 7 ರಂದು ಸುಪ್ರಿಯಾ ಮತ್ತು ಲಲಿತಾರನ್ನು ಉಮಾಪತಿ ಮದುವೆಯಾಗಿದ್ದ ಮತ್ತು ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದವು ಎಂದು ಹೇಳಬಹುದು.
ಇನ್ನು ಈ ವಿಷಯ ತಿಳಿದು ಕೂಡಲೇ ಎಚ್ಛೆತ್ತುಕೊಂಡ ಜಿಲ್ಲಾಡಳಿತ ಡಿಸಿ ಸೆಲ್ವಮಣಿ ಅವರ ಆದೇಶದಂತೆ ತನಿಖೆಗೆ ಮುಂದಾಗಿದೆ ಈ ವೇಳೆ ಉಮಾಪತಿಯ ನಿಜ ಬಣ್ಣ ಬಯಲಾಗಿದೆ. ಇನ್ನು ತನಿಖೆ ಸಮಯದಲ್ಲಿ ತಂಗಿ ಲಲಿತಾ ಅಪ್ರಾಪ್ತೆ ಎನ್ನುವ ವಿಷಯ ತಿಳಿದು ಬಂದಿದೆ. 2005 ರಲ್ಲಿ ಜನಿಸಿದ್ದ ಲಲಿತಾಳನ್ನು ಮದುವೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಮುಳಬಾಗಲಿನ ನಂಗಲಿ ಪೊಲೀಸರು ಉಮಾಪತಿಯನ್ನು ಬಂಧಿಸಿದ್ದಾರೆ. ವರ ಉಮಾಪತಿ, 4 ಜನ ಪೋಷಕರು, ಅರ್ಚಕ, ಮದುವೆ ಆಮಂತ್ರಣ ಮುದ್ರಕ ಸೇರಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.