ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಯಾರು ಊಹೆ ಮಾಡದ ರೀತಿಯಲ್ಲಿ ಕರೋನ ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು ಇನ್ನು ಕೂಡ ಹಲವು ರಾಜ್ಯಗಳನ್ನ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಬಹುದು. ಇನ್ನು ರಾಜ್ಯದಲ್ಲಿ ಸದ್ಯ ಕರೋನ ಮಹಾಮಾರಿಯ ಆರ್ಭಟ ಸ್ವಲ್ಪ ಕಡಿಮೆ ಆಗಿದ್ದು ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ ಎಂದು ಹೇಳಬಹುದು. ಕರೋನ ತಡೆಗಟ್ಟಲು ಬರಿ ನಮ್ಮಿಂದ ಮಾತ್ರ ಸಾಧ್ಯ ಎಂದು ಹೇಳಬಹುದು. ನಾವು ಕೆಲವು ಮಾರ್ಗ ಸೂಚಿಯನ್ನ ಸರಿಯಾಗಿ ಪಾಲನೆ ಮಾಡಿದರೆ ಕರೋನ ಮಹಾಮಾರಿಯನ್ನ ಬಹಳ ಸುಲಭವಾಗಿ ತಡೆಗಟ್ಟಬಹುದಾಗಿದೆ. ಇನ್ನು ಸೋಮವಾರದಿಂದ ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಸಡಿಲಿಕೆ ಆಗಲಿದ್ದು ಜನರಿಗೆ ಕೆಲವು ವಿನಾಯಿತಿಗಳು ಸಿಗಲಿದೆ ಎಂದು ಹೇಳಬಹುದು.
ಹಾಗಾದರೆ ರಾಜ್ಯದಲ್ಲಿ ಯಾವ ರೀತಿಯಲ್ಲಿ ಲಾಕ್ ಸಡಿಲಿಕೆ ಆಗಲಿದೆ ಮತ್ತು ಈ ಸಡಿಲಿಕೆಯ ನಂತರ ರಾಜ್ಯದಲ್ಲಿ ಪ್ರತಿನಿತ್ಯ ಏನಿರುತ್ತೆ ಮತ್ತು ಏನಿರಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಲಾಕ್ ಡೌನ್ ಸಡಿಲಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ರಾಜ್ಯದಲ್ಲಿ ಇದೆ 21 ನೇ ತಾರೀಕಿನಿಂದ ಇನ್ನಷ್ಟು ಸಡಿಲಿಕೆಯನ್ನ ಮಾಡಲಾಗುತ್ತಿದೆ. ಹೌದು ರಾಜ್ಯದಲ್ಲಿ ಕರೋನ ಮಹಾಮಾರಿ ಸೋಂಕಿನ ಅಬ್ಬರ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೆ ಸೋಮವಾರದಿಂದ ಜನರಿಗೆ ಇನ್ನಷ್ಟು ವಿನಾಯಿತಿಯನ್ನ ನೀಡಲು ಸರ್ಕಾರ ನಿರ್ಧಾರವನ್ನ ಮಾಡಿದೆ ಎಂದು ಹೇಳಬಹುದು. ಇನ್ನು ಬಂದಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಜೂನ್ 21 ರ ಬಳಿಕ ಬಸ್ಸುಗಳು, ಹೋಟೆಲ್, ಮಾರುಕಟ್ಟೆ, ಹೇರ್ ಕಟ್ ಶಾಪ್, ಮದುವೆ ಮತ್ತು ಇತರೆ ಸಮಾರಂಭಕ್ಕೆ 50 ಜನರಿಗೆ ಅನುಮತಿ ನೀಡಿ ಮುಕ್ತ ಮಾಡಲಾಗುತ್ತದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.
ಇನ್ನು ಇದೆ ಸೋಮವರಿಂದ KSRTC ಮತ್ತು BMTC ಬಸ್ಸುಗಳು ತಮ್ಮ ಸೇವೆಯನ್ನ ಆರಂಭ ಮಾಡಲಿದ್ದು ಶೇಕಡಾ 50 ರಷ್ಟು ಪ್ರಯಾಣಿಕರು ಸಂಚಾರವನ್ನ ಮಾಡಬಹುದಾಗಿದೆ. ಇನ್ನು ಶಾಪಿಂಗ್ ಶಾಪ್ ಓಪನ್ ಗೆ ತಾಂತ್ರಿಕ ಸಲಹಾ ಸಮಿತಿ ಗ್ರೀನ್ ಸೀಗಲ್ ನೀಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದರ ಜೊತೆಗೆ ಚಿತ್ರ ಮಂದಿರಗಳು, ಮಾಲ್, ಬಾರ್, ಸ್ವಿಮಿಂಗ್ ಪೂಲ್ ಮತ್ತು ಕ್ರೀಡಾಂಗಣಗಳು ಯಥಾಸ್ಥಿತಿಯಲ್ಲಿ ಬಂದ್ ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ 16 ಜಿಲ್ಲೆಗಳನ್ನ ಅನ್ ಲಾಕ್ ಮಾಡಿದ್ದಾರೆ 13 ಜಿಲ್ಲೆಗಳು ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಬಹುದು.
ಇನ್ನು ಹೋಟೆಲ್ ಗಳನ್ನ ಶೇಕಡಾ 50 ರಷ್ಟು ಜನರು ಕುಳಿತುಕೊಂಡು ಊಟವನ್ನ ಮಾಡಬಹುದಾಗಿದೆ ಹಾಗೆ ದೇವಸ್ಥಾನಗಳು ಸದ್ಯಕ್ಕೆ ತೆರೆಯುವುದಿಲ್ಲ. ಇನ್ನು ರಾಜ್ಯದಲ್ಲಿ ವೀಕೆಂಡ್ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ ಮತ್ತು ನೈಟ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ದಿನಗಳಲ್ಲಿ ಕರೋನ ಮೂರನೇ ಅಲೆ ಆರಂಭ ಆಗಲಿದ್ದು ಇದು ಇನ್ನಷ್ಟು ಜನರ ಜೀವವನ್ನ ಬಲಿ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಕರೋನ ಹರಡುವುದನ್ನ ತಡೆಗಟ್ಟುವುದು ನಮ್ಮಿಂದ ಮಾತ್ರ ಸಾಧ್ಯ ಎಂದು ಹೇಳಬಹುದು. ಸ್ನೇಹಿತರೆ ಕರೋನ ಮೂರನೇ ಅಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.