Pension: ಇನ್ನುಮುಂದೆ ಅವಿವಾಹಿತರಿಗೂ ಸಿಗಲಿದೆ ಪಿಂಚಣಿಯ ಲಾಭ. ಹೊಸ ಪಿಂಚಣಿ ವ್ಯವಸ್ತೆ ಜಾರಿ.

ಅವಿವಾಹಿತ ಪಿಂಚಣಿ ಯೋಜನೆ ಜಾರಿ ಬಗ್ಗೆ ಸೂಚನೆ ನೀಡಿದ ಹರಿಯಾಣ ಸರ್ಕಾರ.

Haryana Govt. Unmarried Pension Scheme: ಕೇಂದ್ರ ಸರ್ಕಾರ ಪಿಂಚಣಿಯ (Pension) ವಿಚಾರವಾಗಿ ಸಾಕಷ್ಟು ನಿಯಮಗಳನ್ನು ಹೊರಡಿಸಿದೆ. ಇನ್ನು ಪ್ರಸ್ತುತ ಸರ್ಕಾರೀ ನೌಕರರು ಹೊಸ ಪಿಂಚಣಿ ಪದ್ದತಿಯ ಪ್ರಕಾರ ಪಿಂಚಣಿ ಪಡೆಯುತ್ತಿದ್ದಾರೆ. ಹಳೆಯ ಪಿಂಚಣಿ ಪದ್ಧತಿ ಪ್ರಕಾರ ಪಿಂಚಣಿ ನೀಡುವಂತೆ ನೌಕರರು ಸರ್ಕಾರಕ್ಕೆ ಮನವಿ ನೀಡಿದ್ದಾರೆ.

ಇನ್ನು ಹಳೆಯ ಪಿಂಚಣಿ ಪದ್ದತಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಈಗಾಗಲೇ ಸಾಕಷ್ಟು ವರದಿ ನೀಡಿದೆ. ಇದೀಗ ಪಿಂಚಣಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. 

Haryana Govt. Unmarried Pension Scheme
Image Credit: Indianexpress

ಅವಿವಾಹಿತ ಪಿಂಚಣಿ ಯೋಜನೆ ಜಾರಿ ( Unmarried Pension Scheme) 
ಇದೀಗ ಸರ್ಕಾರ ಅವಿವಾಹಿತರಿಗೆ ಪಿಂಚಣಿ ನೀಡಲು ಸಿದ್ಧತೆ ಮಾಡಿಕೊಂಡಿದೆ. ಅವಿವಾಹಿತ ಪಿಂಚಣಿ ಯೋಜನೆ ಮದುವೆ ಆಗದ ಜನರಿಗೆ ಲಾಭವನ್ನು ನೀಡಲಿದೆ.

ಇನ್ನು ಹರಿಯಾಣ ಸರ್ಕಾರ (Haryana Govt.) ಅವಿವಾಹಿತ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಸೂಚನೆ ನೀಡಿದೆ. ಇನ್ನು ಒಂದು ತಿಂಗಳಲ್ಲಿ ಅವಿವಾಹಿತ ಪಿಂಚಣಿ ಯೋಜನೆ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹರಿಯಾಣ ಸರ್ಕಾರ ಮಾಹಿತಿ ನೀಡಿದೆ.

ಅವಿವಾಹಿತ ಪಿಂಚಣಿ ಯೋಜನೆಗೆ ಯಾರು ಅರ್ಹರು
ಮಹಿಳೆಯರು ಹಾಗೂ ಪುರುಷರು ಈ ಅವಿವಾಹಿತ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಇನ್ನು 45 ರಿಂದ 60 ವರ್ಷ ವಯೋಮಾನದ ಅವಿವಾಹಿತರಿಗೆ ಪಿಂಚಣಿ ನೀಡುವುದಾಗಿ ಹರಿಯಾಣ ಸರ್ಕಾರ ನಿರ್ಧರಿಸಿದೆ. ಯೋಜನೆಯ ಅನುಷ್ಠಾನದ ಬಳಿಕ ಪಿಂಚಣಿಯ ಮೊತ್ತ ಮತ್ತು ಅದರ ಪ್ರಯೋಜನದ ಬಗ್ಗೆ ವರದಿ ಸಿಗಲಿದೆ.

Join Nadunudi News WhatsApp Group

Haryana Govt. Unmarried Pension Scheme
Image Credit: Tribuneindia

ಇನ್ನು ಅವಿವಾಹಿತ ಪಿಂಚಣಿ ಯೋಜನೆಯ ಲಾಭ ಕೇವಲ ಹರಿಯಾಣ ರಾಜ್ಯದ ನಿವಾಸಿಗಳಿಗೆ ಮಾತ್ರ ಲಭಿಸುತ್ತದೆ. ಪಿಂಚಣಿಗೆ ಅರ್ಹರಾಗಲು ವಾರ್ಷಿಕ ಆದಾಯ 1.80 ಲಕ್ಷಕ್ಕಿಂತ ಹೆಚ್ಚಿರಬಾರದು ಹಾಗೆಯೆ ಅವಿವಾಹಿತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆ ಅನುಷ್ಠಾನ ಆಗುವ ಕುರಿತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group