Upcoming SUV 2023: ಮಾರುತಿ ಟಾಟಾ ಕಂಪನಿಯಿಂದ ಬಿಡುಗಡೆಯಾಗಿದೆ ಅಗ್ಗದ ಹೊಸ ಕಾರು.

Maruti, TaTa And Hyundai SUV 2023: ಇದೀಗ ಟಾಟಾ ಕಂಪನಿ ಇಂದ ಹೊಸ ಕಾರು ಬಿಡುಗಡೆ ಆಗಿದೆ. ಕೈಗೆಟಕುವ ದರದಲ್ಲಿ ಶಕ್ತಿಯುತ ಎಸ್ ಯುವಿ ಯನ್ನು ಎದುರು ನೋಡುತ್ತಿರುವ ಗ್ರಾಕರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಶೀಘ್ರದಲ್ಲಿಯೇ ಹಲವು ಉತ್ತಮ ಆಯ್ಕೆಗಳು ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮಾರುತಿ ಸುಜುಕಿ (Maruti Suzuki), ಹುಂಡೈ (Hyundai)ಮತ್ತು ಟಾಟಾ ಮೋಟಾರ್ಸ್ (Tata Motars) ನಂತಹ ಟಾಪ್ ಕಂಪನಿಗಳ ಬಜೆಟ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್ ಯೂವಿಗಳನ್ನು ಬಿಡುಗಡೆ ಮಾಡಲು ತಾಯಾರಿ ನಡೆಸುತ್ತಿದೆ.

Maruti, TaTa And Hyundai SUV 2023
Image Source: CarWale

ಮಾರುತಿ ಸುಜುಕಿ ಯಿಂದ ಹೊಸ ಕಾರು ಬಿಡುಗಡೆ
ಮಾರುತಿ ಸುಜುಕಿ ಮುಂದಿನ ಕೆಲವೇ ತಿಂಗಳಲ್ಲೇ 3 ಹೊಸ SUV ಗಳನ್ನೂ ಬಿಡುಗಡೆ ಮಾಡಲು ಸಿದ್ಧವಾಗಿದೆ. ಫ್ರಾಂಕ್ ಮತ್ತು ಜಿಮ್ನಿ 5 ಡೋರ್ ಗಾಗಿ ಬುಕಿಂಗ್ ಗಳನ್ನೂ ಕಂಪನಿಯು ಈಗಾಗಲೇ ಪ್ರಾರಂಭಿಸಿದೆ.

ಫ್ರಾಂಕ್ ಮತ್ತು ಜಿಮ್ನಿಯನ್ನು ಆಟೋ ಎಕ್ಸ್ಪೋ 2023 ರಲ್ಲಿ ಅನಾವರಣಗೊಳಿಸಲಾಗಿತ್ತು. ಅವುಗಳ ಬೆಲೆ ಕ್ರಮವಾಗಿ 7 ಲಕ್ಷ ಮತ್ತು 10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಮಾರುತಿ ಸುಜುಕಿ ಬ್ರೆಜಾದ ಸಿ ಎನ್‌ ಜಿ ಮಾದರಿ ಕೂಡ ಉತ್ತಮ ಮೈಲೇಜ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Maruti, TaTa And Hyundai SUV 2023
Image Source: India Today

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ
ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಮೈಕ್ರೋ ಎಸ್ ಯು ವಿ ಎಲೆಕ್ಟ್ರಿಕ್ ಮತ್ತು ಸಿ ಏನ್ ಜಿ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. ಪಂಚ್ ಸಿ ಏನ್ ಜಿ ಯನ್ನು ಆಟೋ ಎಕ್ಸ್ ಪೋ ದಲ್ಲಿ ಪರಿಚಯಿಸಲಾಗಿತ್ತು.

Join Nadunudi News WhatsApp Group

ಪಂಚ್ ಸಿ ಏನ್ ಜಿ ಮತ್ತು ಇವಿ ಎರಡನ್ನು 10 ಲಕ್ಷದ ವರೆಗೆ ಬೆಲೆ ಶ್ರೇಣಿಯಲ್ಲಿ ಪರಿಚಯಿಸಬಹುದು ಎನ್ನಲಾಗಿದೆ. ಇದು ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಟಾಟಾ ಮೋಟಾರ್ಸ್ ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. ಇದರ ಆರಂಭಿಕ ಬೆಲೆ 6 ರಿಂದ 7 ಲಕ್ಷ ಆಗಲಿದೆ.

Maruti, TaTa And Hyundai SUV 2023
Image Source: Tata Motors

Join Nadunudi News WhatsApp Group