Kantara 2 Story: ಕಾಂತಾರ 2 ನಲ್ಲಿ ಯಾವ ಕಥೆ ಮುಂದುವರೆಯಲಿದೆ, ಕಾಂತಾರ 2 ಬಗ್ಗೆ ಬಿಗ್ಗ್ ಅಪ್ಡೇಟ್.

ಕಾಂತಾರ 2 ನಲ್ಲಿ ಯಾವ ರೀತಿಯ ಕಥೆ ಮುಂದುವರೆಯಲಿದೆ ಅನ್ನುವ ಬಗ್ಗೆ ಅಪ್ಡೇಟ್ ಬಂದಿದೆ.

Rishab Shetty Kantara 2: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಕನ್ನಡದ ಕಾಂತಾರ (Kantara) ಇದೀಗ ಸ್ವೀಕ್ವೆಲ್ ತಯಾರಿಯಲ್ಲಿದೆ. ಈಗಾಗಲೇ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ 2 ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದೆ.

ಕಾಂತಾರ 2 (Kantara 2) ರಲ್ಲಿ ನಟಿಸುವ ಪಾತ್ರಧಾರಿಗಳ ಬಗ್ಗೆ ಒಂದಿಷ್ಟು ಮಾಹಿತಿ ಈ ಹಿಂದೆ ಹರಡಿತ್ತು. ಇನ್ನು ಕಾಂತಾರ 2 ಚಿತ್ರೀಕರಣದಲ್ಲಿ ತೊಡಗುದಾಗಿ ರಿಷಬ್ ಶೆಟ್ಟಿ ಅವರು ಸ್ವತಃ ಹೇಳಿಕೊಂಡಿದ್ದಾರೆ. ಇದೀಗ ಕಾಂತಾರ 2 ಬಗ್ಗೆ ಬಿಗ್ಗ್ ಅಪ್ಡೇಟ್ ದೊರತಿದೆ.

We got information about which story will continue in Kantara 2.
Image Credit: thenewsminute

ಕಾಂತಾರ 2 ಬಗ್ಗೆ ಬಿಗ್ಗ್ ಅಪ್ಡೇಟ್
ಸೆಪ್ಟೆಂಬರ್ 2022 ರಲ್ಲಿ ಕಾಂತಾರ ಚಿತ್ರ ಬಿಡುಗಡೆಗೊಂಡಿದ್ದು, ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದೆ. ಇನ್ನು ಕಾಂತಾರ ಚಿತ್ರ 450 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸ್ರಷ್ಟಿಸಿದೆ. ಇನ್ನು ಕಾಂತಾರ ಚಿತ್ರ ನೋಡಿದ ಮೇಲೆ ಕಾಂತಾರ 2 ಬಗ್ಗೆ ಸಿನಿ ಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆಯ ಮೇರೆಗೆ ಕಾಂತಾರ 2 ಶೀಘ್ರದಲ್ಲೇ ಬರುವುದಾಗಿ ರಿಷಬ್ ಶೆಟ್ಟಿ ಘೋಷಿಸಿದ್ದರು.

ಜೂನ್ ನಲ್ಲಿ ಪ್ರಾರಂಭಗೊಳ್ಳಲಿಗೆ ಕಾಂತಾರ 2 ಶೂಟಿಂಗ್
ಇನ್ನು ಕಾಂತಾರ ಚಿತ್ರ ಹೊಂಬಾಳೆ ಬ್ಯಾನರ್ ನ ಅಡಿಯಲ್ಲಿ ನಿರ್ಮಾಗೊಂಡಿದ್ದು, ಕಾಂತಾರ 2 ಕೂಡ ಈ ಬ್ಯಾನರ್ ಅಡಿಯಲ್ಲಿಯೇ ನಿರ್ಮಾಣಗೊಳ್ಳಲಿದೆ.ಇನ್ನು ರಿಷಬ್ ಶೆಟ್ಟಿ ಇದೀಗ ತಮ್ಮ ಊರಿನಲ್ಲೇ ವಾಸವಾಗಿದ್ದು ಕಾಂತಾರ 2 ನ ತಯಾರಿಯಲ್ಲಿದ್ದಾರೆ.

There is information that there will be a father's story in Kantara 2.
Image Credit: gqindia

2023 ರ ಜೂನ್ ನಲ್ಲಿಯೇ ಕಾಂತಾರ 2 ಚಿತ್ರೀಕರಣ ಪ್ರಾರಂಭವಾಗುವುದಾಗಿ ಚಿತ್ರತಂಡ ಘೋಷಿಸಿದೆ. ಇನ್ನು ಕಾಂತಾರ 2 ನಲ್ಲಿ ಯಾವ ಕಥೆ ಮುಂದುವರೆಯಲಿದೆ ಎನ್ನುವ ಬಗ್ಗೆ ಸಾಕಷ್ಟು ಜನ ಕುತೂಹಲದಿಂದ ಇದ್ದಿದ್ದರು. ಇದೀಗ ಈ ಬಗ್ಗೆ ಕೂಡ ಮಾಹಿತಿ ಹೊರಬಿದ್ದಿದೆ. ಕಾಂತಾರ 2 ನಲ್ಲಿ ಶಿವನ ತಂದೆಯ ಪಾತ್ರದ ಕಥೆ ಬರಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

ಕೆಲವು  ಸಮಯಗಳ ಹಿಂದೆ ರಿಷಬ್ ಶೆಟ್ಟಿ ಅವರು ನೀವು ಈಗ ನೋಡಿದ್ದು ಕಾಂತಾರ ಮೊದಲ ಭಾಗ ಮತ್ತು ಮುಂದೆ ಬರುವುದು ಎರಡನೆಯ ಭಾಗ ಎಂದು ಹೇಳಿದ್ದರು. ಸದ್ಯ ಕಾಂತಾರ 2 ನಲ್ಲಿ ರಿಷಬ್ ಶೆಟ್ಟಿ ಅವರ ತಂದೆಯ ಪಾತ್ರ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group