Upendra About Kabzaa: ಕಬ್ಜ ಸಿನಿಮಾವನ್ನು ಕೆಜಿಎಫ್ ಸಿನಿಮಾಗೆ ಹೋಲಿಸಿದವರಿಗೆ ಸ್ಪಷ್ಟನೆ ನೀಡಿದ ನಟ ಉಪೇಂದ್ರ.
Actor Upendra About Kabzaa Movie: ಕನ್ನಡ ಚಿತ್ರರಂಗದ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ ಕಬ್ಜ ಸಿನಿಮಾ ಈಗಾಗಲೇ ಎರಡು ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದೆ. ನಟ ಉಪೇಂದ್ರ ಹಾಗು ನಟ ಸುದೀಪ್ (Sudeep) ಜೊತೆಯಾಗಿ ನಟಿಸಿರುವ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆ ತಿಂಗಳು ಮಾರ್ಚ್ 17 ರಂದು ಈ ಸಿನಿಮಾ ದೇಶದಾದ್ಯಂತ ಎಲ್ಲ ಭಾಷೆಗಳಲ್ಲಿಯೂ ತೆರೆ ಕಾಣಲಿದೆ.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಕಬ್ಜ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಡಿಫರೆಂಟ್ ಗೆಟಪ್ ಮತ್ತು ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಲು ನಟ ಉಪೇಂದ್ರ ರೆಡಿಯಾಗಿದ್ದಾರೆ. ಈ ನಡುವೆ ಕೆಜಿಎಫ್ ಚಿತ್ರವನ್ನ ಕಬ್ಜ ಚಿತ್ರಕ್ಕೆ ಹೋಲಿಸಿ ಮಾತನಾಡುವವರಿಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.
ಕಬ್ಜ ಸಿನಿಮಾವನ್ನು ಕೆಜಿಎಫ್ ಸಿನಿಮಾಗೆ ಹೋಲಿಸಿದವರಿಗೆ ಸ್ಪಷ್ಟನೆ ನೀಡಿದ ನಟ ಉಪೇಂದ್ರ
ಕೆಜಿಎಫ್ ಚಿತ್ರದೊಂದಿಗೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ ಬೇರೆ ರೀತಿಯ ಸಿನಿಮಾಗಳು. ಟೀಸರ್ ನೋಡಿದ ಹಲವರು ಕೆಜಿಎಫ್ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕಥೆ ಇದೇ ಬೇರೆ ಕಥೆ ಎಂಬುದು. ಸಿನಿಮಾದ ಲುಕ್ ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆ ರೀತಿಯಾದ ಕಥೆ ಎಂದು ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ಕೆಜಿಎಫ್ ಕಥೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು ಆಗ ಮಾತನಾಡಿದ್ದ ಉಪೇಂದ್ರ, ಕೆಜಿಎಫ್ ಥರ ಸಿನಿಮಾ ಮಾಡಿ ಅಂತಾರೆ, ಕೆಜಿಎಫ್ ಥರ ಮಾಡಿದರೆ ಕೆಜಿಎಫ್ ತರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡುತ್ತಾರೆ ಎಂದು ತಮಾಷೆ ಮಾಡಿದ್ದರು.